ಅಗ್ಗದ ಬೆಲೆಗೆ 6 ಹೊಸ ಕಾರುಗಳು ಶೀಘ್ರದಲ್ಲೆ ಬಿಡಗಡೆ: ಜನ ಮುಗಿಬೀಳುವುದು ಪಕ್ಕಾ!

ಭಾರತದಲ್ಲಿ ಸಬ್‌-ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ವಾಹನ ತಯಾರಕರು ಕೂಡ ಅಗ್ಗದ ಬೆಲೆಯಲ್ಲಿ ಆದ್ಯತೆಯ ಕಾರುಗಳನ್ನು ಪೈಪೋಟಿಯ ಮೇಲೆ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಹಾಗಾಗಿ 10 ಲಕ್ಷ ರೂ.ಗಳ ಬೆಲೆಯಲ್ಲಿ ಅನೇಕ ಹೊಸ ಕಾರು ಮಾದರಿಗಳು ಬಿಡುಗಡೆಗೆ ಸಾಲಾಗಿ ನಿಂತಿವೆ. ಹೆಚ್ಚುತ್ತಿರುವ ಹೊಸ ಫೀಚರ್‌ಗಳ ಬೇಡಿಕೆ ಜೊತೆಗೆ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಕಡಿಮೆ ಬೆಲೆಯಲ್ಲಿ ಕಾಂಪ್ಯಾಕ್ಟ್ ಕಾರುಗಳನ್ನು ಬಿಡುಗಡೆ ಮಾಡಲು ಕಂಪನಿಗಳು ಸಜ್ಜಾಗುತ್ತಿವೆ. ಅವು ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಹೈಬ್ರಿಡ್: ಹೊಸ 'ಹೈಬ್ರಿಡ್' ಬ್ಯಾಡ್ಜ್ ನೊಂದಿಗೆ ಈ ವರ್ಷದ ಜನವರಿಯಲ್ಲಿ ಫ್ರಾಂಕ್ಸ್ ಹೈಬ್ರಿಡ್ ಅನ್ನು ಭಾರತದಲ್ಲಿ ಟೆಸ್ಟ್ ಮಾಡಲಾಯಿತು. ಮಾರುತಿ ತನ್ನ ಹೈಬ್ರಿಡ್ ಕ್ರಾಸ್ಒವರ್ 2025 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಪರಿಚಿತ 1.2 - ಲೀಟರ್ ಝಡ್ - 12 - ಇ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ವರದಿಗಳ ಪ್ರಕಾರ, ಸ್ಟ್ರಾಂಗ್ ಹೈಬ್ರಿಡ್ ಪವರ್ ಟ್ರೇನ್ ಮಿಡ್ ಲೈಫ್ ಫೇಸ್ ಲಿಫ್ಟ್ ನವೀಕರಣದೊಂದಿಗೆ ಬಿಡುಗಡೆಯಾಗಲಿದೆ.

top-5-new-cars-to-be-launched-soon-at-affordable-prices-in-india

ರೆನಾಲ್ಟ್ ಕಿಗರ್ ಫೇಸ್ ಲಿಫ್ಟ್: ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಕಿಗರ್ ಫೇಸ್ ಲಿಫ್ಟ್, ತನ್ನ ವಿನ್ಯಾಸದಲ್ಲಿಯೂ ಪ್ರಮುಖ ನವೀಕರಣಗಳನ್ನು ಪಡೆಯಲಿದೆ. ಪರಿಚಿತ 1.0 - ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ಗಳು ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲದೆ ಮುಂದುವರಿಯುತ್ತವೆ. ಶೀಘ್ರದಲ್ಲೆ ಈ ಬಗ್ಗೆ ರೆನಾಲ್ಟ್ ಕಂಪನಿ ಮಾಹಿತಿ ಹಂಚಿಕೊಳ್ಳಲಿದೆ.

ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್: ಮುಂಬರುವ ತಿಂಗಳುಗಳಲ್ಲಿ ಎಂಟ್ರಿ ಕೊಡುವ ನಿರೀಕ್ಷೆಯಿದ್ದು, ಆಲ್ಟ್ರೋಜ್ ಫೇಸ್ ಲಿಫ್ಟ್ ಈಗಾಗಲೇ ರಸ್ತೆಯಲ್ಲಿ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಡ್ಯಾಶ್‌ಬೋರ್ಡ್ ಲೇಔಟ್, 1.5 - ಲೀಟರ್ ಟರ್ಬೊ ಡೀಸೆಲ್ ಮತ್ತು 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಸೇರಿದಂತೆ 1.2 - ಲೀಟರ್ ಎನ್ಎ ಪೆಟ್ರೋಲ್, ಸಿಎನ್‌ಜಿ ಆಯ್ಕೆಯೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.

top-5-new-cars-to-be-launched-soon-at-affordable-prices-in-india

ಹೊಸ ನಿಸ್ಸಾನ್ 7 ಸೀಟರ್ ಕಾಂಪ್ಯಾಕ್ಟ್ ಎಂಪಿವಿ: ನಿಸ್ಸಾನ್ ತನ್ನ ಹೊಸ 7 - ಸೀಟರ್ ಎಂಪಿವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದೆ. ಈ ಮೂರು ಸಾಲಿನ ಕಾಂಪ್ಯಾಕ್ಟ್ ಎಂಪಿವಿ ಪರಿಚಿತ 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 ಬಿಹೆಚ್ ಪವರ್ ಮತ್ತು 96 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ: ಹೊಸ ತಲೆಮಾರಿನ ವೆನ್ಯೂ ಕಾರಿನ ರೋಡ್ ಟೆಸ್ಟಿಂಗ್ ಈಗಾಗಲೇ ನಡೆಯುತ್ತಿದ್ದು, ಇತ್ತೀಚೆಗೆ ಎನ್-ಲೈನ್ ಮಾದರಿಯನ್ನು ವಿದೇಶದಲ್ಲೂ ಪರೀಕ್ಷಿಸಲಾಗಿದೆ. 2025 ರ ದ್ವಿತೀಯಾರ್ಧದಲ್ಲಿ ಮಾರಾಟವಾಗುವ ನಿರೀಕ್ಷೆಯಿರುವ ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿ, ಪ್ರಸ್ತುತ ಡೀಸೆಲ್ ಮತ್ತು ಪೆಟ್ರೋಲ್ ಪವರ್ ಟ್ರೇನ್ ಆಯ್ಕೆಗಳನ್ನು ಮುಂದಿನ ತಲೆಮಾರಿನ ವೆನ್ಯೂಗೆ ಕೊಂಡೊಯ್ಯಲಾಗುವುದು.

top-5-new-cars-to-be-launched-soon-at-affordable-prices-in-india

ರೆನಾಲ್ಟ್ ಟ್ರೈಬರ್ ಫೇಸ್ ಲಿಫ್ಟ್: ಟ್ರೈಬರ್ ಕಾಂಪ್ಯಾಕ್ಟ್ ಎಂಪಿವಿ ಕೆಲವು ಬದಲಾವಣೆಗಳನ್ನು ಪಡೆದುಕೊಂಡು ದೇಶೀಯ ಮಾರುಕಟ್ಟೆಯಲ್ಲಿ ಈ ವರ್ಷ ಬಿಡುಗಡೆಯಾಗಲಿದೆ. ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲದೆ, ರೆನಾಲ್ಟ್ ಟ್ರೈಬರ್ ಪರಿಚಿತ 1.0 - ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 28, 2025, 13:20 [IST]
English summary
Top 5 new cars to be launched soon at affordable prices in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+