34 ಕಿ.ಮೀ ಮೈಲೇಜ್.. 3.70 ಲಕ್ಷ, ಈ ಪುಟ್ಟ ಮಾರುತಿ ಆಲ್ಟೊ ಕಾರು ಖರೀದಿಸಲು 5 ಪ್ರಮುಖ ಕಾರಣಗಳು!

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪುಟ್ಟ ಹ್ಯಾಚ್‌ಬ್ಯಾಕ್ ಆಗಿದ್ದು, ದಶಕಗಳಿಂದಲೂ ಮನೆ ಮಾತಾಗಿದೆ. ಈಗಲೂ ಗ್ರಾಹಕರು ನಾಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಎಷ್ಟೇ ಪ್ರತಿಸ್ಪರ್ಧಿ ಕಾರುಗಳು ಮಾರಾಟಕ್ಕೆ ಬಂದರೂ, ಸ್ಪರ್ಧಾತ್ಮಕ ಸಂಖ್ಯೆಯೇ ಮಾರಾಟವಾಗುತ್ತಿದೆ. ನಾವಿಲ್ಲಿ ಇದೇ 'ಆಲ್ಟೊ ಕೆ10' ಕಾರನ್ನು ಏಕೆ ಖರೀದಿಸಬೇಕು ಎಂಬುದರ ಕುರಿತಂತೆ 5 ಪ್ರಮುಖ ಕಾರಣಗಳನ್ನು ತಿಳಿಸಿಕೊಟ್ಟಿದ್ದೇವೆ.

ಕೈಗೆಟುಕುವ ಬೆಲೆಯಲ್ಲಿ ಲಭ್ಯ:

ನೂತನ ಮಾರುತಿ 'ಮಾರುತಿ ಆಲ್ಟೊ ಕೆ10' ಬಜೆಟ್ ಸ್ನೇಹಿ ಕಾರೆಂದೇ ಹೆಸರುವಾಸಿಯಾಗಿದೆ. ಸ್ಕೂಟರ್ ಅಥವಾ ಬೈಕ್‌ನ್ನು ಬದಲಾಯಿಸಲು ಆಲೋಚಿಸಿರುವವರಿಗೆ ಈ ಕಾರು ಅತ್ಯುತ್ತಮವಾದ ಆಯ್ಕೆಯಾಗಲಿದೆ. ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ, ಕನಿಷ್ಠ ರೂ.3.70 ಲಕ್ಷ ಹಾಗೂ ಗರಿಷ್ಠ ರೂ.5.45 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಹೊಂದಿದೆ.

Top 5 Reasons Buy New Maruti Suzuki Alto K10

ಸರಳವಾದ ವಿನ್ಯಾಸ & ಹಲವು ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ:

ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಉತ್ತಮವಾದ ಎಲ್ಇಡಿ ಹೆಡ್‌ಲೈಟ್‌ಗಳು ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಅತ್ಯಾಧುನಿಕವಾದ ವೀಲ್‌ಗಳು & ಟೈರ್‌ಗಳನ್ನು ಹೊಂದಿದೆ. ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ವೈಟ್, ಪ್ರೀಮಿಯಂ ಅರ್ಥ್ ಗೋಲ್ಡ್ ಮತ್ತು ಪರ್ಲ್ ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ಕಡಿಮೆ ನಿರ್ವಹಣಾ ವೆಚ್ಚ & ಅಗ್ಗದ ಬಿಡಿಭಾಗಗಳು:

ಈ 'ಆಲ್ಟೊ ಕೆ10' ಬಿಡಿ ಭಾಗಗಳು ಬಹುತೇಕ ಎಲ್ಲ ನಗರಗಳಲ್ಲಿ ಲಭ್ಯವಿದ್ದು, ಒಂದೊಮ್ಮೆ ಕಾರು ಕೆಟ್ಟು ಹೋದರೂ, ಸುಲಭವಾಗಿ ರಿಪೇರಿ ಮಾಡಿಸಬಹುದು. ಇದರಿಂದಾಗಿ ದೀರ್ಘಕಾಲ ಬಳಕೆ ಮಾಡಲು ಸಾಧ್ಯವಾಗಲಿದ್ದು, ಸರಿ ಸುಮಾರು 15 ರಿಂದ 20 ವರ್ಷಗಳವರೆಗೆ ಉಪಯೋಗಿಸಬಹುದು.

Top 5 Reasons Buy New Maruti Suzuki Alto K10

ಅತ್ಯುತ್ತಮ ಕಾರ್ಯಕ್ಷಮತೆ & ಬೈಕ್‌ನ್ನು ಮೀರಿಸುವ ಮೈಲೇಜ್:

ನೂತನ 'ಮಾರುತಿ ಸುಜುಕಿ ಆಲ್ಟೊ ಕೆ10'ನ ಕಾರ್ಯಕ್ಷಮತೆ ವಿಚಾರದಲ್ಲಿ ಕಂಪನಿಯು ಯಾವುದೇ ರಾಜಿ ಮಾಡಿಕೊಂಡಿಲ್ಲ. ಇದು 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & 1-ಲೀಟರ್ ಪೆಟ್ರೋಲ್+ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 35 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಈ ಕಾರು ಗರಿಷ್ಠ ಇಂಧನ ದಕ್ಷತೆಯನ್ನು ಒದಗಿಸಬಲ್ಲದು. ಪೆಟ್ರೋಲ್ ರೂಪಾಂತರಗಳು, 24.39 ರಿಂದ 24.9 ಕಿ.ಮೀವರೆಗೆ ಮೈಲೇಜ್ ನೀಡುತ್ತವೆ. ಅದೇ ರೀತಿಯಲ್ಲಿ ಸಿಎನ್‌ಜಿ ರೂಪಾಂತರಗಳು 33.85 ಕಿ.ಮೀವರೆಗೆ ಮೈಲೇಜ್ ಕೊಡುತ್ತವೆ. ಇದೇ ಹ್ಯಾಚ್‌ಬ್ಯಾಕ್ 145 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 13.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

Top 5 Reasons Buy New Maruti Suzuki Alto K10

ನಗರ ಪ್ರದೇಶಕ್ಕೆ ಹೆಚ್ಚು ಸೂಕ್ತ & ಆಕರ್ಷಕ ವೈಶಿಷ್ಟ್ಯಗಳು:

ಇದು ನಗರ ಪ್ರದೇಶದ ಸಂಚಾರಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಪುಟ್ಟ ಕಾರಾಗಿರುವುದರಿಂದ ಟ್ರಾಫಿಕ್ ಜಾಮ್‌ಯಿರುವ ರಸ್ತೆಗಳಲ್ಲಿಯೂ ಆರಾಮದಾಯಕವಾಗಿಯೂ ಓಡಿಸಬಹುದು. ಸಣ್ಣ ಜಾಗದಲ್ಲೂ ಪಾರ್ಕಿಂಗ್ ಮಾಡಬಹುದು. ಹಾಗೆಯೇ 5 ಜನರು ಸಂಚರಿಸಬಹುದು. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು ಹಾಗೂ 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ತನ್ನದಾಗಿಸಿಕೊಂಡಿದೆ.

ಒಟ್ಟಾರೆಯಾಗಿ, 'ಮಾರುತಿ ಸುಜುಕಿ ಆಲ್ಟೊ ಕೆ10'ನ್ನು ಬಜೆಟ್ ಬೆಲೆಗೆ ಗ್ರಾಹಕರು ಖರೀದಿ ಮಾಡಬಹುದು. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿಯೂ ಉತ್ತಮವಾದ ಬೇಡಿಕೆಯನ್ನು ಹೊಂದಿದೆ. ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ರೆನಾಲ್ಟ್ ಕ್ವಿಡ್ ಹಾಗೂ ಟಾಟಾ ಟಿಯಾಗೊಗಳನ್ನು ಬದಲಿ ಕಾರುಗಳಾಗಿಯೂ ಕೊಂಡುಕೊಳ್ಳಬಹುದು.

More from DriveSpark

Article Published On: Tuesday, November 25, 2025, 16:09 [IST]
English summary
Top 5 reasons buy new maruti suzuki alto k10
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+