Safest Cars In India: ಭಯಪಡುವ ಅಗತ್ಯವಿಲ್ಲ.. ಇವು ದೇಶದ 5 ಅತಿ ಸುರಕ್ಷಿತ ಕಾರುಗಳು!

ಭಾರತದ ವಾಹನ ಮಾರುಕಟ್ಟೆ ವಿಶಾಲವಾಗಿದೆ. ಹೊಸ ಕಾರನ್ನು ಕೊಳ್ಳುವವರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಗರಿಷ್ಠ ರಕ್ಷಣಾತ್ಮಕ ಮಾನದಂಡಗಳನ್ನು ಪೂರೈಸಿರುವ ಕಾರೊಂದನ್ನು ಖರೀದಿಸಲು ಹುಡುಕಾಟ ನಡೆಸುತ್ತಿರುತ್ತಾರೆ. ಅಂತಹವರಿಗೆ ಟಾಟಾ ಪಂಚ್ ಇವಿ, ಮಹೀಂದ್ರಾ ಎಕ್ಸ್ಇವಿ 9ಇ, ಟಾಟಾ ಹ್ಯಾರಿಯರ್ ಇವಿ, ಮಾರುತಿ ಸುಜುಕಿ ವಿಕ್ಟೋರಿಸ್ ಹಾಗೂ ಮಹೀಂದ್ರಾ ಥಾರ್ ರಾಕ್ಸ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಈ ಕಾರುಗಳಿಗೆ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ 'ಭಾರತ್ ಎನ್‌ಸಿಎಪಿ'ಯು 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ.

ಟಾಟಾ ಪಂಚ್ ಇವಿ (Tata Punch.ev):

ಇದೊಂದು ಜನಪ್ರಿಯ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಭಾರತ್ ಎನ್‌ಸಿಎಪಿ ನಡೆಸುವ ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 31.46 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 45 ಅಂಕಗಳನ್ನು ಗಳಿಸಿದೆ. ಈ ಮೂಲಕ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿ ಯಶಸ್ವಿಯಾಗಿದೆ.

Top 5 Safest Cars In India Punch EV XEV 9E Harrier EV Victoris And Thar Roxx

ಈ ಕಾರು ಪ್ರಯಾಣಿಕರ ರಕ್ಷಣೆಗಾಗಿ, ಅತಿ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ರೂ.9.99 ಲಕ್ಷದಿಂದ ರೂ.14.44 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9E):

ಇದು ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 32 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 45 ಅಂಕಗಳನ್ನು ಹೊಂದಿದೆ.

Top 5 Safest Cars In India Punch EV XEV 9E Harrier EV Victoris And Thar Roxx

ನೂತನ 'ಮಹೀಂದ್ರಾ ಎಕ್ಸ್ಇವಿ 9ಇ' ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 7-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ರೂ.22.40 ಲಕ್ಷದಿಂದ ರೂ.31.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

ಟಾಟಾ ಹ್ಯಾರಿಯರ್ ಇವಿ (Tata Harrier.ev):

ಈ ಎಲೆಕ್ಟ್ರಿಕ್ ಎಸ್‌ಯುವಿಯು ಸುರಕ್ಷತೆಯ ವಿಚಾರದಿಂದಲೇ ಮನೆ ಮಾತಾಗಿದೆ. ಭಾರತ್ ಎನ್‌ಸಿಎಪಿ ನಡೆಸುವ ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 32 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 45 ಅಂಕಗಳನ್ನು ಗಳಿಸಿದೆ. ಇದರೊಂದಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದಿದೆ. 7-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರೂ.21.49 ಲಕ್ಷದಿಂದ ರೂ.30.23 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Top 5 Safest Cars In India Punch EV XEV 9E Harrier EV Victoris And Thar Roxx

ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris):

ಇದು ಪ್ರಮುಖ ಎಸ್‌ಯುವಿಯಾಗಿದೆ. ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆಯುವಲ್ಲಿ ಸಫಲವಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 31.66 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 43 ಅಂಕಗಳನ್ನು ಹೊಂದಿದೆ. 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾದಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ. ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

Top 5 Safest Cars In India Punch EV XEV 9E Harrier EV Victoris And Thar Roxx

ಮಹೀಂದ್ರಾ ಥಾರ್ ರಾಕ್ಸ್‌ (Mahindra Thar Roxx):

ಈ ಆಫ್-ರೋಡ್ ಎಸ್‌ಯುವಿಯು ಸುರಕ್ಷತೆಯಿಂದಲೇ ಗುರುತಿಸಿಕೊಂಡಿದೆ. ಭಾರತ್ ಎನ್‌ಸಿಎಪಿಯ ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 31.09 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 45 ಅಂಕಗಳನ್ನು ಗಳಿಸಿದೆ. ಇದರೊಂದಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ತನ್ನದಾಗಿಸಿಕೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 4-ಡಿಸ್ಕ್ ಬ್ರೇಕ್‌ಗಳು ಒಳಗೊಂಡಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ರೂ.12.25 ಲಕ್ಷದಿಂದ ರೂ.22.06 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

More from DriveSpark

Article Published On: Tuesday, December 9, 2025, 11:22 [IST]
English summary
Top 5 safest cars in india punch ev xev 9e harrier ev victoris and thar roxx
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+