Trending SUVs: ಟಾಪ್-5 ಟ್ರೆಂಡಿಂಗ್ ಎಸ್‌ಯುವಿಗಳು... ಇವೆ ಬೆಸ್ಟ್, ಫುಲ್ ಡಿಮ್ಯಾಂಡ್

Trending SUVs: ಭಾರತದಲ್ಲಿ ಎಸ್‌ಯುವಿಗಳು ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಬಹತೇಕ ಎಲ್ಲಾ ವಾಹನ ತಯಾರಕರು ಈಗ ತಮ್ಮ ಶ್ರೇಣಿಯಲ್ಲಿ ಅನೇಕ ಎಸ್‌ಯುವಿಗಳನ್ನು ಹೊಂದಿದ್ದಾರೆ. ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾದಿಂದ ಹಿಡಿದು ಮಹೀಂದ್ರಾ ಥಾರ್‌ ವರೆಗೆ ಐದು ಎಸ್‌ಯುವಿಗಳು ಸದ್ಯ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿವೆ. ಈ ಎಸ್‌ಯುವಿಗಳು ಭಾರತೀಯ ಮಾರುಕಟ್ಟೆಯನ್ನು ಆಕರ್ಷಿಸಿವೆ. ಕಳೆದ ತಿಂಗಳು ಭಾರತದಲ್ಲಿ ಗ್ರಾಹಕರನ್ನು ಹೆಚ್ಚು ಆಕರ್ಷಿಸಿರುವ ಟಾಪ್ 5 ಅತ್ಯಂತ ಜನಪ್ರಿಯ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಹಾಗೆಯೇ ಅವುಗಳ ವಿಶೇಷತೆಗಳನ್ನು ವಿವರಿಸಿದ್ದೇವೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara): ಟೋಯೋಟಾ ಸಹಯೋಗದೊಂದಿಗೆ ಮಾರುತಿ ಅಭಿವೃದ್ಧಿಪಡಿಸಿರುವ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ಮೈಲ್ಡ್ ಹಾಗೂ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಗಳಲ್ಲಿ ಬರುತ್ತದೆ. ಇದರಲ್ಲಿ ಎರಡನೆಯದು (ಸ್ಟ್ರಾಂಗ್ ಹೈಬ್ರಿಡ್) ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಗ್ರ್ಯಾಂಡ್ ವಿಟಾರಾದ ಆಲ್ - ವ್ಹೀಲ್ ಡ್ರೈವ್ ವೇರಿಯೆಂಟ್ ಕೂಡ ತುಂಬಾ ಸದ್ದು ಮಾಡುತ್ತಿದೆ.

top-5-trending-suvs-maruti-tata-hyundai-mahindra-kia

ಹೊಸ ನವೀಕರಣಗಳೊಂದಿಗೆ ಇತ್ತೀಚೆಗೆ ಬಿಡುಗಡೆಯಾಗಿರುವ 2025ರ 'ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ' ಕಾರು, ರೂ. 11.42 ಲಕ್ಷ (ಎಕ್ಸ್ - ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 1.5 - ಲೀಟರ್ ಮೈಲ್ಡ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್), 1.5 - ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಮತ್ತು 1.5 - ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ.

5 - ಸ್ಪೀಡ್ ಮ್ಯಾನುವಲ್, 6 - ಸ್ಪೀಡ್ ಆಟೋಮೆಟಿಕ್ ಹಾಗೂ ಇ-ಸಿವಿಟಿ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. 19.38 ರಿಂದ 27.97 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದೇ ಗ್ರ್ಯಾಂಡ್ ವಿಟಾರಾ ಕಾರಿನ ಹೊಸ ವೇರಿಯೆಂಟ್ ಅನ್ನು ಇತ್ತೀಚೆಗೆ ಪರಿಚಯಿಸಲಾಗಿದ್ದು (ಡೆಲ್ಟಾ ಪ್ಲಸ್ (Delta+) ರೂ. 16.99 ಲಕ್ಷ (ಎಕ್ಸ್ - ಶೋರೂಂ) ಬೆಲೆಯನ್ನು ಹೊಂದಿದೆ.

top-5-trending-suvs-maruti-tata-hyundai-mahindra-kia

ಹ್ಯುಂಡೈ ಕ್ರೆಟಾ (Hyundai Creta): ಹ್ಯುಂಡೈ ಕ್ರೆಟಾ ಸದ್ಯ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿ ಎಂದು ಗುರ್ತಿಸಿಕೊಂಡಿದೆ. ಇತ್ತೀಚಿನ ನವೀಕರಣದ ನಂತರ ಇದರ ಜನಪ್ರಿಯತೆ ಇನ್ನೂ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಈ ಕಾರು ಖರೀದಿಗೆ ಲಭ್ಯವಿದೆ. ಈ ಕಾರಿನ ಇಂಧನ ಚಾಲಿತ ಆವೃತ್ತಿಗಳ ಬೆಲೆಗಳು ರೂ. 11 ಲಕ್ಷದಿಂದ ರೂ. 20.42 ಲಕ್ಷ (ಎಕ್ಸ್ - ಶೋರೂಂ) ಬೆಲೆಯನ್ನು ಹೊಂದಿವೆ.

ಈ ಕಾರು 1.5 - ಲೀ. NA ಪೆಟ್ರೋಲ್, 1.5 - ಲೀ. ಟರ್ಬೊ ಪೆಟ್ರೋಲ್ ಹಾಗೂ 1.5 - ಲೀ. ಡೀಸೆಲ್ ಎಂಜಿನ್‌ ಆಯ್ಕೆಗಳನ್ನು ಹೊಂದಿದೆ. 17.4 ರಿಂದ 21.8 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆ ಇದ್ದು, ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 433 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.

top-5-trending-suvs-maruti-tata-hyundai-mahindra-kia

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ರೂ. 17.99 ಲಕ್ಷದಿಂದ ರೂ. 24.38 ಲಕ್ಷ (ಎಕ್ಸ್ - ಶೋರೂಂ) ದರವನ್ನು ಪಡೆದಿದೆ. 42 ಕೆಡಬ್ಲ್ಯೂಹೆಚ್ & 51.4 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಭರ್ತಿ ಚಾರ್ಜ್‌ನಲ್ಲಿ 390 ರಿಂದ 473 ಕಿ.ಮೀ ಕ್ರಮಿಸುತ್ತದೆ. ಟಚ್ ‌ಸ್ಕ್ರೀನ್ ಇನ್ಫೋಟೈನ್ ‌ಮೆಂಟ್ ಸಿಸ್ಟಮ್ & ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಡಿಸ್‌ಪ್ಲೇಯಂತಹ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಕರ್ವ್ (Tata Curvv): ಟಾಟಾ ತಮ್ಮ ಹೆಚ್ಚು ಮಾರಾಟವಾಗುವ ವಾಹನವಾದ ನೆಕ್ಸಾನ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಪರಿಚಯಿಸುವ ನಿರ್ಧಾರ ತೆಗೆದುಕೊಂಡ ಬಳಿಕ, ಹೊಸ ಟಾಟಾ ಕರ್ವ್ ಕೂಡ ಅಷ್ಟೇ ತ್ವರಿತವಾಗಿ ಇಂಧನ ಚಾಲಿತ ಹಾಗೂ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಿ ನೆಕ್ಸಾನ್‌ಗಿಂತ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇದರ ಎಸ್‌ಯುವಿ - ಕೂಪೆ ಡಿಸೈನ್ ಮಾರುಕಟ್ಟೆಯಲ್ಲಿ ಆಕರ್ಷಕ ಆಯ್ಕೆಯಾಗುತ್ತಿದೆ.

ಟಾಟಾ ಮೋಟಾರ್ಸ್ ಈ ಮಾದರಿಯನ್ನು ರೂ. 10 ಲಕ್ಷದಿಂದ ಆರಂಭವಾಗಿ ರೂ. 19.20 ಲಕ್ಷ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದರ ಡಾರ್ಕ್ ಎಡಿಷನ್ ಎಸ್‌ಯುವಿಯ ಇಂಧನ ಚಾಲಿತ ಮಾಡೆಲ್ ರೂ. 16.49 ಲಕ್ಷ ಮತ್ತು ರೂ. 19.52 ಲಕ್ಷ ಬೆಲೆಯನ್ನು ಹೊಂದಿವೆ. ಎಲೆಕ್ಟ್ರಿಕ್ ಮಾಡೆಲ್ ರೂ. 22.24 ಲಕ್ಷ ಬೆಲೆಯನ್ನು ( ಎಲ್ಲಾ ಬೆಲೆಗಳು ಎಕ್ಸ್-ಶೋರೂಂ) ಒಳಗೊಂಡಿದೆ.

ಟಾಟಾ ಕರ್ವ್ ಎಸ್‌ಯುವಿಯ ಇಂಧನ ಚಾಲಿತ ಮಾಡೆಲ್, 1.2 - ಟಿಜಿಡಿಐ ಟರ್ಬೊ ಪೆಟ್ರೋಲ್ ಮತ್ತು 1.5 - ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯನ್ನು ಹೊಂದಿದೆ. 6 - ಸ್ಪೀಡ್ ಮ್ಯಾನುವಲ್/ 7 - ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 17.88 ರಿಂದ 19.25 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಈ ಕಾರಿನ ಎಲೆಕ್ಟ್ರಿಕ್ ಚಾಲಿತ ಮಾಡೆಲ್, 55 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಇದರಲ್ಲಿ ಉಪಯೋಗಿಸಿರುವ ಎಲೆಕ್ಟ್ರಿಕ್ ಮೋಟಾರ್, 167 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 215 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಭರ್ತಿ ಚಾರ್ಜ್‌ನಲ್ಲಿ 502 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಕಿಯಾ ಸೆಲ್ಟೋಸ್ (Kia Seltos): ಕಿಯಾ ಸೆಲ್ಟೋಸ್ ಭಾರತದಲ್ಲಿ ಕಂಪನಿಯ ಭಾರಿ ಯಶಸ್ಸನ್ನು ಕಂಡಿರುವ ಕಾರಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಲಭ್ಯವಿರುವ ಸೆಲ್ಟೋಸ್ ಸದ್ಯಕ್ಕೆ ಅತ್ಯುತ್ತಮ ಮಾರಾಟವನ್ನು ಕಾಣುತ್ತಿದೆ. ಇತ್ತೀಚೆಗೆ 2025ರ ಸೆಲ್ಟೋಸ್ ಅನ್ನು ಹೊಸ ವೇರಿಯೆಂಟ್‌ಗಳೊಂದಿಗೆ ಬಿಡುಗಡೆ ಮಾಡಿದ್ದು, ಬೆಲೆಗಳು HTE(O) ರೂ. 11.13 ಲಕ್ಷದಿಂದ ಪ್ರಾರಂಭವಾಗುತ್ತವೆ.

X - ಲೈನ್ ಆವೃತ್ತಿಗೆ ರೂ. 20.50 ಲಕ್ಷದವರೆಗೆ ಇದೆ (ಎಕ್ಸ್ - ಶೋರೂಮ್ ಬೆಲೆಗಳು). ತನ್ನ ಪ್ರೀಮಿಯಂ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ನವೀಕರಿಸಿದ ಸೆಲ್ಟೋಸ್ (Kia seltos) ಸ್ಮಾರ್ಟ್‌ಸ್ಟ್ರೀಮ್ G1.5 ಮತ್ತು D1.5 CRDi VGT ಎಂಜಿನ್ ಆಯ್ಕೆಗಳಲ್ಲಿ ಎಂಟು ಹೊಸ ರೂಪಾಂತರಗಳನ್ನು ಸಹ ಪರಿಚಯಿಸಿದೆ.

ಮಹೀಂದ್ರಾ ಥಾರ್ (Mahindra Thar): ಭಾರತದಲ್ಲಿ, ಮಹೀಂದ್ರಾ ಥಾರ್ ಖರೀದಿಗೆ ಲಭ್ಯವಿರುವ ಕೆಲವೇ ನೈಜ 4X4 ಎಸ್‌ಯುವಿಗಳಲ್ಲಿ ಒಂದಾಗಿದೆ. ಥಾರ್ ತನ್ನ ಬಲವಾದ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳಿಂದಾಗಿ ಆಫ್-ರೋಡ್ ಉತ್ಸಾಹಿಗಳಿಂದ ಚೆನ್ನಾಗಿ ಆಕರ್ಷಿಸುತ್ತಿದೆ. ಥಾರ್ 150 ಬಿಹೆಚ್ ಪವರ್ ಪೆಟ್ರೋಲ್ ಎಂಜಿನ್, 130 ಬಿಹೆಚ್ ಪವರ್ ಡೀಸೆಲ್ ಎಂಜಿನ್ ಅಥವಾ 117 ಬಿಹೆಚ್ ಪವರ್ ಡೀಸೆಲ್ ಎಂಜಿನ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 21, 2025, 12:15 [IST]
English summary
Top 5 trending suvs maruti tata hyundai mahindra kia
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+