ಮಾರುಕಟ್ಟೆ ಶೇಕ್ ಮಾಡಲು 5 ಹೊಸ SUV ಗಳು ಬಿಡುಗಡೆಗೆ ಸಜ್ಜು: ಟೆಸ್ಟಿಂಗ್ ಫುಲ್ ಜೋರು!
2025 ರ ಕೊನೆಯಲ್ಲಿ ಮತ್ತು 2026 ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಟಾಪ್ - 5 ಎಸ್‌ಯುವಿಗಳು ಸಜ್ಜಾಗಿವೆ. ಈ ಮಾಡಲ್‌ಗಳು ಆಕರ್ಷಕ ಸ್ಟೈಲಿಂಗ್, ಫೀಚರ್ - ಪ್ಯಾಕ್ಡ್ ಇಂಟೀರಿಯರ್ ಮತ್ತು ಬಲವಾದ ಸುರಕ್ಷತಾ ರೇಟಿಂಗ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ರೂ. 10 ಲಕ್ಷದಿಂದ ರೂ. 12 ಲಕ್ಷ (ಎಕ್ಸ್ - ಶೋರೂಂ)ದೊಳಗೆ ದರವಿರಲಿದೆ. ಮುಂಬರಲಿರುವ ಈ ಕೈಗೆಟುಕುವ ಬೆಲೆಯ ಎಸ್‌ಯುವಿಗಳು ಯಾವುವು? ಅವುಗಳ ವಿಶೇಷತೆಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
ಮಾರುತಿ ಮೈಕ್ರೋ SUV: ಹುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್‌ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲು ಮಾರುತಿ ಸುಜುಕಿ ಹೊಸ ಕಾಂಪ್ಯಾಕ್ಟ್ SUV ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು 2026 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಮೈಕ್ರೋ SUV ಅನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇದರ ಬೆಲೆಯು ರೂ.9 ಲಕ್ಷ (ಎಕ್ಸ್ ಶೋರೂಂ)ದೊಳಗೆ ಇರಲಿದೆ ಎಂದು ಹೇಳಲಾಗುತ್ತಿದೆ.

ಇದು 1.2-ಲೀಟರ್, 3 - ಸಿಲಿಂಡರ್ Z - ಸಿರೀಸ್ ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇದರ ಕಾಂಪ್ಯಾಕ್ಟ್ ಗಾತ್ರದ ಹೊರತಾಗಿಯೂ, ಇದು ಆರು ಏರ್‌ಬ್ಯಾಗ್‌ಗಳು, ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಸೀಟುಗಳು, ಆಲ್ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರಲಿದೆ.
ಮಹೀಂದ್ರಾ ವಿಷನ್ ಎಸ್: ಮಹೀಂದ್ರಾ ಕಂಪನಿಯು ತನ್ನ ಮುಂಬರಲಿರುವ 'ವಿಷನ್ ಎಸ್' ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಜೋರು ತಯಾರಿ ನಡೆಸಿದೆ. ಈಗಾಗಲೇ ಇದರ ಕಾನ್ಸೆಪ್ಟ್ ಮಾಡಲ್ ಅನ್ನು ಪ್ರದರ್ಶಿಸಲಾಗಿದ್ದು, ಉತ್ಪಾದನೆಗೆ ಸಿದ್ಧವಾಗಿರುವ ಕಾರನ್ನು ಪರೀಕ್ಷಿಸುವಾಗ ಇತ್ತೀಚೆಗೆ ಕಾಣಿಸಿಕೊಂಡಿದೆ. ಈ ಎಸ್‌ಯುವಿ 2026 ರ ಮಧ್ಯ ಭಾಗದಲ್ಲಿ ಬಿಡುಗಡೆಯಾಗಲಿದ್ದು, ಸ್ಪೋರ್ಟಿ ಡಿಸೈನ್ ಹಾಗೂ ಆಧುನಿಕ ತಂತ್ರಜ್ಞಾನವನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ವಿಷನ್ ಎಸ್ ಬೆಲೆಯು ರೂ.10 (ಎಕ್ಸ್ - ಶೋರೂಂ) ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಇನ್ಫೋಟೈನ್ಮೆಂಟ್ ಮತ್ತು ಡ್ರೈವರ್ ಡಿಸ್ಪ್ಲೇಗಾಗಿ ಎರಡು 12.3 - ಇಂಚಿನ ಡಿಜಿಟಲ್ ಸ್ಕ್ರೀನ್‌ಗಳು, ಮಲ್ಟಿ-ಫಂಕ್ಷನ್ 3 - ಸ್ಪೋಕ್ ಸ್ಟೀರಿಂಗ್ ವ್ಹೀಲ್, ವರ್ಟಿಕಲ್ ಎಸಿ ವೆಂಟ್‌ಗಳು ಮತ್ತು ಪನೋರಮಿಕ್ ಸಸ್ ರೂಫ್ ಹೊಂದಿದೆ. ಈ ಕಾರಿನ ಕುರಿತ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೆ ಕಂಪನಿ ಹಂಚಿಕೊಳ್ಳಲಿದೆ.
ಹೊಸ 2025 ಹುಂಡೈ ವೆನ್ಯೂ: 2025 ಹುಂಡೈ ವೆನ್ಯೂ ಮುಂದಿನ ತಿಂಗಳು (ನವೆಂಬರ್ 4) ಬಿಡುಗಡೆಯಾಗಲಿದೆ. ಕಂಪನಿಯು ಇತ್ತೀಚೆಗೆ ಈ ಕಾರನ್ನು ಅನಾವರಣಗೊಳಿಸಿ ಬುಕಿಂಗ್‌ಗಳನ್ನು ತರೆದಿದೆ. ವಿಶಾಲವಾದ ಕ್ಯಾಬಿನ್, ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳು, ಹಿಂಭಾಗದ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಫೋರ್-ವೇ ಅಡ್ಜಸ್ಟಬಲ್ ಡ್ರೈವರ್ ಸೀಟ್, ಡಿ-ಕಟ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ರೂ. 7.9 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಬಹುದು.

ಮಾರುತಿ ಫ್ರಾಂಕ್ಸ್ ಹೈಬ್ರಿಡ್: ಮಾರುತಿ ಫ್ರಾಂಕ್ಸ್ ಹೈಬ್ರಿಡ್ 2026 ರಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಇದು ಪ್ರತಿ ಲೀಟರ್‌ಗೆ 35 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ವರದಿಗಳು ಹೇಳುತ್ತಿವೆ. ಹೊಸ ವಿನ್ಯಾಸ, ಸುಧಾರಿತ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ADAS ನಂತಹ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯಲಿದೆ. ಇದು ರೂ.10 (ಎಕ್ಸ್ - ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಹೊಸ ತಲೆಮಾರಿನ ಟಾಟಾ ನೆಕ್ಸಾನ್: ಟಾಟಾ ಮೋಟಾರ್ಸ್ ಮುಂದಿನ ವರ್ಷದ ಅಂತ್ಯದ ವೇಳೆಗೆ ಮುಂದಿನ ತಲೆಮಾರಿನ ನೆಕ್ಸಾನ್ ಅನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಇದು ರೂ.8 (ಎಕ್ಸ್ - ಶೋರೂಂ) ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಬಹುದು. ಹೊಸ ನೆಕ್ಸಾನ್ ಸುಧಾರಿತ ಸುರಕ್ಷತೆ, ಹೊಸ ಇನ್ಫೋಟೈನ್ಮೆಂಟ್ ಸಿಸ್ಮಮ್ ಮತ್ತು ಹೆಚ್ಚು ಪರಿಷ್ಕೃತ ಚಾಲನಾ ಅನುಭವದೊಂದಿಗೆ ಬರುವ ನಿರೀಕ್ಷೆಯಿದೆ.


Click it and Unblock the Notifications








