ಕ್ರಾಂತಿಕಾರಕ ಹೊಸ ಭಾಷ್ಯ ಬರೆದ 9 ಕಾರುಗಳಿವು.. ಕೆಲವು ಈಗಲೂ ಲಭ್ಯ.. ನಿಮಗೂ ಇಷ್ಟವೇ?

ಭಾರತವು ವಿಶ್ವದಲ್ಲೇ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಪ್ರತಿ ವರ್ಷ ವಿವಿಧ ಕಂಪನಿಗಳ ಹತ್ತಾರು ಕಾರುಗಳು ಬಿಡುಗಡೆಯಾಗುತ್ತಿರುತ್ತವೆ. ಆದರೆ, ಕೆಲವು ಕಾರುಗಳು ಮಾತ್ರ ಗ್ರಾಹಕರ ಮನದಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ. ಹಾಗೆಯೇ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಮಾರುತಿ 800 ಮತ್ತು ಅಂಬಾಸಿಡರ್ ಸೇರಿದಂತೆ ಈ 9 ಪ್ರಮುಖ ಕಾರುಗಳು ಮಾರಾಟ ವಿಚಾರದಲ್ಲಿ ಕ್ರಾಂತಿಕಾರಕವಾದ ಹೊಸ ಭಾಷ್ಯ ಬರೆದವು. ಬನ್ನಿ.. ಆ ಕಾರುಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಮಾರುತಿ 800 (Maruti 800): ಮಾರುತಿ ಉದ್ಯೋಗ್ ಲಿಮಿಟೆಡ್ ಮತ್ತು ಜಪಾನ್‌ನ ಸುಜುಕಿ ಮೋಟಾರ್ ಸಹಭಾಗಿತ್ವದಲ್ಲಿ 'ಮಾರುತಿ 800' ಕಾರನ್ನು 1983ರಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ಕೆಲವೇ ವರ್ಷಗಳಲ್ಲಿ ಮಧ್ಯಮ ವರ್ಗದ ಜನರ ನೆಚ್ಚಿನ ಕಾರಾಗಿಯೂ ಹೊರಹೊಮ್ಮಿತ್ತು. 2014ರಲ್ಲಿ, ಸುಮಾರು 2 ದಶಕಗಳಿಗಿಂತ ಹೆಚ್ಚು ಕಾಲ ಉತ್ತುಂಗದಲ್ಲಿದ್ದ ಈ ಮಾರುತಿ 800 ಕಾರಿನ ತಯಾರಿಕೆಯನ್ನು ಸ್ಥಗಿತಗೊಳಿಸಲಾಯಿತು. ಅಲ್ಲಿಯವರೆಗೂ ಬರೋಬ್ಬರಿ 29.2 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸಲಾಗಿತ್ತು.

Top 9 Most Iconic Revolutionary Cars In India Maruti 800 Ambassador Nano Indica Santro to Creta

ನಾನಾ ಕಾರಣಗಳಿಗೆ ಮಾರುತಿ 800 ಮಾರಾಟವನ್ನು ಅಧಿಕೃತವಾಗಿ ನಿಲ್ಲಿಸಿದಾಗ, ಇದೇ ಕಾರು ಕನಿಷ್ಠ ರೂ.2.06 ಲಕ್ಷ ಹಾಗೂ ಗರಿಷ್ಠ ರೂ.2.38 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿತ್ತು. ಪೆಟ್ರೋಲ್ & ಎಲ್‌ಪಿಜಿ ಎಂಜಿನ್‌ನೊಂದಿಗೆ ದೊರೆಯುತ್ತಿತ್ತು. 14.0 ರಿಂದ 16.1 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತಿತ್ತು. ಸದ್ಯ, ಈ ಕಾರಿನ ಜಾಗದಲ್ಲಿ 'ಮಾರುತಿ ಸುಜುಕಿ ಆಲ್ಟೋ ಕೆ10' ಹ್ಯಾಚ್‌ಬ್ಯಾಕ್‌ನ್ನು ಮಾರಾಟಗೊಳಿಸಲಾಗುತ್ತಿದೆ.

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift): ಇದು ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಈ ಕಾರು 2005ರಲ್ಲಿ ಬಿಡುಗಡೆಯಾಗಿದ್ದು, ಈಗಲೂ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇದೇ ಮಾರ್ಚ್‌ನಲ್ಲಿ 17,746 ಯುನಿಟ್‌ಗಳನ್ನು ಗ್ರಾಹಕರು ಖರೀದಿ ಮಾಡಿದ್ದಾರೆ. ನೂತನ ಸ್ವಿಫ್ಟ್ ರೂ.6.49 ಲಕ್ಷದಿಂದ ರೂ.9.64 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತದೆ.

Top 9 Most Iconic Revolutionary Cars In India Maruti 800 Ambassador Nano Indica Santro to Creta

ಹಿಂದೂಸ್ತಾನ್ ಅಂಬಾಸಿಡರ್‌ (Hindustan Ambassador): ಭಾರತದ ಗ್ರಾಹಕರಿಗಾಗಿ ಹಿಂದೂಸ್ತಾನ್ ಮೋಟಾರ್, ಇಂಗ್ಲೆಂಡ್‌ನ ಮಾರಿಸ್ ಆಕ್ಸ್‌ಫೋರ್ಡ್ ಕಂಪನಿಯ ಈ ಅಂಬಾಸಿಡರ್‌ ಕಾರನ್ನು ಮಾರಾಟಕ್ಕೆ ತಂದಿತ್ತು. 1957 ರಿಂದ 2014 ವರೆಗೆ ಅಂಬಾಸಿಡರ್‌ ಕಾರುಗಳು ದಾಖಲೆ ಸಂಖ್ಯೆಯಲ್ಲಿ ಮಾರಾಟಗೊಂಡವು. ಆದರೆ, ಇತರೆ ಕಂಪನಿಗಳ ತೀವ್ರ ಪೈಪೋಟಿಯಿಂದ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಕಡೆಯದಾಗಿ ಅಂಬಾಸಿಡರ್‌ ರೂ.4 ಆರಂಭಿಕ ಬೆಲೆಯನ್ನು ಹೊಂದಿತ್ತು.

ಮಹೀಂದ್ರಾ ಸ್ಕಾರ್ಪಿಯೋ (Mahindra Scorpio): ದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಎಸ್‌ಯುವಿಯಾಗಿಯಾಗಿದೆ. 2002ರಲ್ಲಿ ಈ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಪ್ರಸ್ತುತ ಸ್ಕಾರ್ಪಿಯೋ ಎನ್ & ಸ್ಕಾರ್ಪಿಯೋ ಕ್ಲಾಸಿಕ್ ಎಂಬ ಎರಡು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಸ್ಕಾರ್ಪಿಯೋ ಎನ್ ರೂ.13.99 ಲಕ್ಷದಿಂದ ರೂ.24.89 ಲಕ್ಷ ಹಾಗೂ ಸ್ಕಾರ್ಪಿಯೋ ಕ್ಲಾಸಿಕ್ ರೂ.13.62 ಲಕ್ಷದಿಂದ ರೂ.17.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Top 9 Most Iconic Revolutionary Cars In India Maruti 800 Ambassador Nano Indica Santro to Creta

ಟಾಟಾ ನ್ಯಾನೋ (Tata Nano): ಇದು ಬಡವರ ಕಾರೆಂದು ಜನಮನ್ನಣೆ ಗಳಿಸಿತ್ತು. 'ನ್ಯಾನೋ' ಕಾರು ದಿವಂಗತ ರತನ್ ಟಾಟಾ ಅವರ ಕನಸಿನ ಕೂಸಾಗಿತ್ತು. 2008ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಟಾಟಾ ನ್ಯಾನೋ ಕಾರನ್ನು ಅನಾವರಣಗೊಳಿಸಲಾಗಿತ್ತು. ಮರು ವರ್ಷ (2009) ದೇಶೀಯ ಮಾರುಕಟ್ಟೆಯಲ್ಲಿ ಆದ್ದೂರಿಯಾಗಿ ಮಾರಾಟಕ್ಕೆ ತರಲಾಗಿತ್ತು.

ಆದರೆ, ನಿರೀಕ್ಷಿತ ಮಟ್ಟದಲ್ಲಿ 'ಟಾಟಾ ನ್ಯಾನೋ' ಕಾರು ಮಾರಾಟವಾಗಲಿಲ್ಲ. ಈ ಹಿನ್ನೆಲೆ, 2018ರಲ್ಲಿ ಈ ಕಾರಿನ ಮಾರಾಟವನ್ನು ನಿಲ್ಲಿಸಲಾಯಿತು. ಕೊನೆಯ ಬಾರಿಗೆ ನ್ಯಾನೋ ಕಾರು ರೂ.2.47 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿತ್ತು. 624 ಸಿಸಿ ಸಾಮರ್ಥ್ಯವಿರುವ ಪೆಟ್ರೋಲ್ & ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿತ್ತು. 21.9 ರಿಂದ 36 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತಿತ್ತು.

Top 9 Most Iconic Revolutionary Cars In India Maruti 800 Ambassador Nano Indica Santro to Creta

ಹೋಂಡಾ ಸಿಟಿ (Honda City): 1998 ರಿಂದಲ್ಲೂ ಈ ಕಾರನ್ನು ದೇಶೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತಿದೆ. ಇದೊಂದು ಸೆಡಾನ್ ಆಗಿದ್ದು, ಹೆಚ್ಚಿನ ಲಗೇಜ್ ಸಾಗಿಲು ದೊಡ್ಡ ಗಾತ್ರದ ಬೂಟ್ ಸ್ಪೇಸ್‌ನ್ನು ಒಳಗೊಂಡಿರುವುದರಿಂದ ಗ್ರಾಹಕರ ಮೆಚ್ಚಿನ ಕಾರಾಗಿದೆ. ಹೊಸ ಹೋಂಡಾ ಸಿಟಿ ಕಾರು ರೂ.12.28 ಲಕ್ಷದಿಂದ ರೂ.16.55 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಈ ಹೋಂಡಾ ಸಿಟಿ ಸೆಡಾನ್ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 12-15 ರಿಂದ 17-20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಸಿಂಗಲ್-ಪೇನ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Top 9 Most Iconic Revolutionary Cars In India Maruti 800 Ambassador Nano Indica Santro to Creta

ಟಾಟಾ ಇಂಡಿಕಾ (Tata Indica): ಇದು ಹ್ಯಾಚ್‌ಬ್ಯಾಕ್ ಆಗಿತ್ತು. 1998ರಲ್ಲಿ ಬಿಡುಗಡೆಯಾದ ಈ ಕಾರು, ಎರಡು ದಶಕಗಳ ಕಾಲ ಅಬ್ಬರಿಸಿತ್ತು. ಆದರೆ, ಹಲವು ಕಾರಣಗಳಿಗೆ 2018ರಲ್ಲಿ ಈ ಹ್ಯಾಚ್‌ಬ್ಯಾಕ್‌ನ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಕೊನೆಯ ಬಾರಿಗೆ ಟಾಟಾ ಇಂಡಿಕಾ ರೂ.3.32 ಲಕ್ಷದಿಂದ ರೂ.6.83 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿತ್ತು.

ಈ ಇಂಡಿಕಾ ಕಾರು 1.4 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿತ್ತು. ಜೊತೆಗೆ ಸಿಎನ್‌ಜಿ ಪವರ್‌ಟ್ರೇನ್‌ನ್ನು ಪಡೆದಿತ್ತು. 16.84 ರಿಂದ 25 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತಿತ್ತು. ಇದರಲ್ಲಿಯೂ 5 ಮಂದಿ ಪ್ರಯಾಣ ಮಾಡಬಹುದಾಗಿತ್ತು. ಇದೀಗ ಟಾಟಾ ಇಂಡಿಕಾ ಜಾಗದಲ್ಲಿ 'ಟಿಯಾಗೊ' ಕಾರನ್ನು ಮಾರಾಟಗೊಳಿಸಲಾಗುತ್ತಿದೆ.

Top 9 Most Iconic Revolutionary Cars In India Maruti 800 Ambassador Nano Indica Santro to Creta

ಹ್ಯುಂಡೈ ಸ್ಯಾಂಟ್ರೋ (Hyundai Santro): ಈ ಹ್ಯಾಚ್‌ಬ್ಯಾಕ್‌ನ್ನು 1998ರಲ್ಲಿ ಬಿಡುಗಡೆಗೊಳಿಸಲಾಯಿತು. ಇದನ್ನು ಗ್ರಾಹಕರು ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದರು. ಆದರೆ, 2022ರಲ್ಲಿ ಸ್ಯಾಂಟ್ರೋ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಕೊನೆಯ ಬಾರಿಗೆ ಈ ಕಾರು, ರೂ.2.72 ರಿಂದ ರೂ.6.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿತ್ತು.

ಹ್ಯುಂಡೈ ಕ್ರೆಟಾ (Hyundai Creta): ಮೊದಲ ಬಾರಿಗೆ ಈ ಕಾರನ್ನು 2015ರಲ್ಲಿ ಬಿಡುಗಡೆಗೊಳಿಸಲಾಯಿತು. ಇದೊಂದು ಎಸ್‌ಯುವಿಯಾಗಿದ್ದು, ಪ್ರತಿ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಸ್ಥಾನವೊಂದನ್ನು ಖಚಿತವಾಗಿ ಪಡೆದಿರುತ್ತದೆ. ನೂತನ ಹ್ಯುಂಡೈ ಕ್ರೆಟಾ ಎಸ್‌ಯುವಿ, ರೂ.11 ರಿಂದ ರೂ.20.42 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Top 9 Most Iconic Revolutionary Cars In India Maruti 800 Ambassador Nano Indica Santro to Creta

ನೂತನ ಹ್ಯುಂಡೈ ಕ್ರೆಟಾ ಕಾರು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯನ್ನು ಪಡೆದಿದೆ. 17.4 ರಿಂದ 21.8 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಈ ಎಸ್‌ಯುವಿಯಲ್ಲಿ 5 ಆಸನಗಳಿವೆ. ಡುಯಲ್ ಡಿಸ್‌ಪ್ಲೇ ಹಾಗೂ ಡುಯಲ್-ಝೋನ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 16, 2025, 15:41 [IST]
English summary
Top 9 most iconic revolutionary cars in india maruti 800 ambassador nano indica santro to creta
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+