10 ರಿಂದ 15 ಲಕ್ಷ ರೂ. ಬೆಲೆಯಲ್ಲಿ ADAS ಫೀಚರ್ ಜೊತೆಗೆ ಬರುವ ಟಾಪ್ ಕಾರುಗಳಿವು!

ಭಾರತೀಯ ವಾಹನ ಮಾರುಕಟ್ಟೆ ವೇಗವಾಗಿ ವಿಕಸನಗೊಳ್ಳುತ್ತಿದೆ. ಗ್ರಾಹಕರ ಆದ್ಯತೆಗಳಲ್ಲಿನ ಬೃಹತ್ ವಿಕಾಸವು ವಾಹನ ತಯಾರಕರನ್ನು ಸುಧಾರಿತ ತಂತ್ರಜ್ಞಾನದೊಂದಿಗಿನ ಫೀಚರ್‌ಗಳನ್ನು ಸೇರಿಸಲು ಪ್ರೇರೇಪಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಹೆಚ್ಚಾಗಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಇದು ಬಜೆಟ್ ಕಾರುಗಳಲ್ಲಿಯೂ ಸಿಗುತ್ತಿರುವುದು ಹಲವರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಈ ADAS ತಂತ್ರಜ್ಞಾನ ಒಂದು ಕಾಲದಲ್ಲಿ ಐಷಾರಾಮಿ ಮತ್ತು ಪ್ರೀಮಿಯಂ ಕಾರುಗಳಲ್ಲಿ ಮಾತ್ರ ಇತ್ತು. ಆದರೆ ಈಗ 10 ರಿಂದ 15 ಲಕ್ಷ ರೂ.ಗಳ ಬೆಲೆಯಲ್ಲಿ ADAS ಇರುವ ಕಾರನ್ನು ಖರೀದಿಸಬಹುದು.

ಹೋಂಡಾ ಅಮೇಜ್: ಹೋಂಡಾ ಅಮೇಜ್ ಭಾರತದಲ್ಲಿ ಅತ್ಯಂತ ಕೈಗೆಟುಕುವ ADAS ಫೀಚರ್ ಹೊಂದಿರುವ ಕಾರಾಗಿದೆ. ಟಾಪ್ ವೇರಿಯೆಂಟ್‌ಗಳ MT/CVT ಅವಲಂಬಿಸಿ ರೂ.9.7 ರಿಂದ ರೂ.10.9 ಲಕ್ಷ ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ ಹೋಂಡಾ ಸೆನ್ಸಿಂಗ್ ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪಿಂಗ್ ಅಸಿಸ್ಟ್, ಕೊಲಿಷನ್ ಮಿಟಿಗೇಷನ್ ಮತ್ತು ಆಟೋ ಹೈ ಬೀಮ್‌ನಂತಹ ಲೆವೆಲ್ 2 ಫೀಚರ್‌ಗಳನ್ನು ಹೊಂದಿದೆ.

top-cars-with-adas-feature-in-the-price-range-of-rs-10-to-15-lakh

ಹ್ಯುಂಡೈ ವೆನ್ಯೂ (ಐಚ್ಛಿಕ ADAS ಪ್ಯಾಕೇಜ್): ಪ್ರಮುಖ ವಾಹನ ತಯಾರಕರಾದ ಹ್ಯುಂಡೈ, ವೆರಿಯೆಂಟ್ ಅವಲಂಬಿಸಿ ರೂ. 11 ರಿಂದ ರೂ. 12 ಲಕ್ಷ ವ್ಯಾಪ್ತಿಯೊಳಗೆ ಕೆಲವು ಟ್ರಿಮ್‌ಗಳಲ್ಲಿ ಲೆವೆಲ್ 1 ADAS ಅನ್ನು ನೀಡುತ್ತದೆ. ಮುಖ್ಯವಾಗಿ ಹ್ಯುಂಡೈ ವೆನ್ಯೂ ತನ್ನ SX (o) ಟ್ರಿಮ್ ನಲ್ಲಿ ಲೆವೆಲ್ 1 ಎಡಿಎಎಸ್ ನೀಡುತ್ತಿದೆ. ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ 2025 ನವೆಂಬರ್ 4 ರಂದು ಬಿಡುಗಡೆಯಾಗಿದ್ದು, ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.

ಟಾಟಾ ನೆಕ್ಸಾನ್: ಪ್ರಮುಖ ಸ್ವದೇಶಿ ಕಾರು ತಯಾರಕ ಕಂಪನಿಯಾಗಿರುವ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್‌ನಲ್ಲಿ ADAS ನೀಡುತ್ತಿದೆ. ಇದರ ಬೆಲೆಯು ರೂ. 13 ನಿಂದ ರೂ. 14 ಲಕ್ಷ (ಎಕ್ಸ್-ಶೋರೂಂ) ನಡುವಿನ ಬೆಲೆಯಿರುವ ಹೆಚ್ಚಿನ ಟ್ರಿಮ್‌ಗಳಲ್ಲಿ ಸುಧಾರಿತ ADAS ಲಭ್ಯವಿದೆ. ಬಲವಾದ ಸುರಕ್ಷತಾ ರೇಟಿಂಗ್‌ ಜೊತೆಗೆ ADAS ಕೂಡ ಸಿಗುತ್ತಿರುವುದು ಭಾರತೀಯ ಖರೀದಿದಾರರಿಗೆ ಬೆಸ್ಟ್ ಆಯ್ಕೆಯಾಗಿದೆ.

top-cars-with-adas-feature-in-the-price-range-of-rs-10-to-15-lakh

ಕಿಯಾ ಸೋನೆಟ್: ಕಿಯಾ ಸೊನೆಟ್ ಭಾರತದಲ್ಲಿ ಪ್ರಬಲ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಆಗಿದ್ದು, ರೂ. 13.51 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ವೆನ್ಯೂ ಮತ್ತು ನೆಕ್ಸಾನ್‌ಗೆ ಪೈಪೋಟಿ ನೀಡಲು ADAS ನೊಂದಿಗೆ ಬರುತ್ತದೆ. ಕಿಯಾ ಸೊನೆಟ್ GTX ಪ್ಲಸ್ ಟ್ರಿಮ್ ನಲ್ಲಿ ಲೆವೆಲ್ 1 ADAS ಸೂಟ್ ನೊಂದಿಗೆ ಬರುತ್ತದೆ. ಈ ಕಾಂಪ್ಯಾಕ್ಟ್ SUV ಗ್ರಾಹಕರಿಗೆ ವೈಶಿಷ್ಟ್ಯ - ಭರಿತ ಪ್ಯಾಕೇಜ್ ಅನ್ನು ನೀಡುತ್ತದೆ.

ಮಹೀಂದ್ರಾ XUV 3X0: ಇದು ದೇಶಿಯ ಮಾರುಕಟ್ಟೆಯಲ್ಲಿ ಕಾರು ತಯಾರಕರ ಏಕೈಕ ಸಬ್ - ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ. ಮಹೀಂದ್ರಾ AX5L ಟ್ರಿಮ್ ADAS ನೊಂದಿಗೆ ಬರುತ್ತದೆ. ಇದರ ಬೆಲೆ ರೂ. 11.50 ಲಕ್ಷ (ಎಕ್ಸ್-ಶೋರೂಂ) ಆಗಿದೆ. ಈ ಕಾರು ಅದರ ಪ್ರತಿಸ್ಪರ್ಧಿಗಳಂತೆ ಜನಪ್ರಿಯವಾಗಿಲ್ಲದಿದ್ದರೂ, ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.

top-cars-with-adas-feature-in-the-price-range-of-rs-10-to-15-lakh

ಹೋಂಡಾ ಸಿಟಿ: ಹೋಂಡಾ ಕಂಪನಿಯಲ್ಲಿ ಅತಿ ಹೆಚ್ಚು ಮಾರಾಟ ಕಾಣುವ ಪ್ರಮುಖ ಕಾರುಗಳಲ್ಲಿ ಹೋಂಡಾ ಸಿಟಿ ಕೂಡ ಒಂದು. ಇದು ದೀರ್ಘಕಾಲದವರೆಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸೆಡಾನ್ ಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ಮಧ್ಯಮ ಗಾತ್ರದ ಸೆಡಾನ್‌ನ V ಟ್ರಿಮ್ ADAS ಅನ್ನು ಹೊಂದಿದ್ದು, ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.12.79 ಲಕ್ಷಗಳಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, November 11, 2025, 16:58 [IST]
English summary
Top cars with adas feature in the price range of rs 10 to 15 lakh
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+