Toyota: 26.11 ಕಿ.ಮೀ ಮೈಲೇಜ್... 6 ಏರ್‌ಬ್ಯಾಗ್... 7-ಸೀಟರ್ ಕಾರಿಗೆ ಫುಲ್ ಡಿಮ್ಯಾಂಡ್
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ತನ್ನ ಮೆಚ್ಚುಗೆ ಪಡೆದ ಪ್ರಮುಖ 7-ಸೀಟರ್ ಫ್ಯಾಮಿಲಿ ಕಾರಾಗಿರುವ ಟೊಯೋಟಾ ರೂಮಿಯನ್‌ಗೆ ಗಮನಾರ್ಹ ವರ್ಧನೆಯನ್ನು ಘೋಷಿಸಿದೆ. ಪ್ರತಿಯೊಬ್ಬ ಪ್ರಯಾಣಿಕರಿಗೂ ಗರಿಷ್ಟ ಸುರಕ್ಷತೆಯನ್ನು ಒದಗಿಸುವ ಸಲುವಾಗಿ ಎಲ್ಲಾ ವೇರಿಯೆಂಟ್‌ಗಳಲ್ಲಿ ಈಗ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವುದಾಗಿ ಘೋಷಿಸಿದೆ. ಈ ಮೂಲಕ ಎಲ್ಲಾ ರೂಪಾಂತರಗಳು ಈಗ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎರಡು ಸೈಡ್ ಏರ್‌ಬ್ಯಾಗ್‌ಗಳು ಮತ್ತು ಎರಡು ಕರ್ಟನ್ ಶೀಲ್ಡ್ ಏರ್‌ಬ್ಯಾಗ್‌ಗಳೊಂದಿಗೆ ಸಮಗ್ರ 360 - ಡಿಗ್ರಿ ಸುರಕ್ಷತೆಯನ್ನು ಒದಗಿಸುತ್ತವೆ ಎಂದು ಟೊಯೋಟಾ ಹೇಳಿದೆ.
ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವತ್ತ ಪೂರ್ವಭಾವಿ ಹೆಜ್ಜೆಯಾಗಿ, ಟೊಯೋಟಾ ಪ್ರತಿ ರೂಮಿಯನ್ ವೇರಿಯೆಂಟ್‌ಗೆ ಆರು ಏರ್ ಬ್ಯಾಗ್‌ಗಳನ್ನು (ಮುಂಭಾಗ, ಬದಿ ಮತ್ತು ಪರದೆ ಶೀಲ್ಡ್) ಪರಿಚಯಿಸಿದೆ. ಇದು ವಿವಿಧ ಚಾಲನಾ ಸನ್ನಿವೇಶಗಳಲ್ಲಿ ಚಾಲಕ ಮತ್ತು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಖಚಿತಪಡಿಸುತ್ತದೆ. ಜೊತೆಗೆ ಪ್ರಯಾಣಿಕರ ನೆಮ್ಮದಿಯ ಪ್ರಯಾಣಕ್ಕೆ ಸಹಕರಿಸುತ್ತದೆ.

ಉನ್ನತ ದರ್ಜೆಯಲ್ಲಿ TPMS: ಟೊಯೋಟಾ ಉನ್ನತ V ದರ್ಜೆಯಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪರಿಚಯಿಸಿದೆ. ಈ ಸುಧಾರಿತ ವೈಶಿಷ್ಟ್ಯವು ವರ್ಧಿತ ಸುರಕ್ಷತೆ, ಇಂಧನ ದಕ್ಷತೆ (ಮೈಲೇಜ್) ಮತ್ತು ಅನುಕೂಲಕ್ಕಾಗಿ ಟೈರ್ ಒತ್ತಡ (ಟೈರ್ ಪ್ರೆಷರ್) ವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಭಾರತೀಯ ಕುಟುಂಬಗಳಿಗೆ ತಾಂತ್ರಿಕವಾಗಿ ಮುಂದುವರಿದ MPV ಆಗಿ ರೂಮಿಯನ್‌ನ ಸ್ಥಾನವನ್ನು ಬಲಪಡಿಸುತ್ತದೆ.
ಡಿಸೈನ್, ಉತ್ತಮ ಸ್ಥಳ ಮತ್ತು ಸುರಕ್ಷತೆಯ ಮಿಶ್ರಣ: ಟೊಯೋಟಾ ರೂಮಿಯನ್ ವಿಶಾಲವಾದ 7 - ಆಸನಗಳ ವಿನ್ಯಾಸವನ್ನು ಹೊಂದಿದೆ. ಪ್ರೀಮಿಯಂ ಕ್ರೋಮ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED ಟೈಲ್ ಲ್ಯಾಂಪ್‌ಗಳು ಮತ್ತು ಡ್ಯುಯಲ್ - ಟೋನ್ ಮೆಷಿನ್ಡ್ ಅಲಾಯ್ ವೀಲ್‌ಗಳಂತಹ ವಿಶಿಷ್ಟ ಸ್ಪರ್ಶಗಳು ಇದನ್ನು ಆಧುನಿಕ ಕುಟುಂಬಗಳಿಗೆ ಸೊಗಸಾದ ಆಯ್ಕೆಯನ್ನಾಗಿ ಮಾಡುತ್ತದೆ.

ಒಳಗೆ, ರೂಮಿಯನ್ ಪ್ಲಶ್ ಡ್ಯುಯಲ್ - ಟೋನ್ ಕ್ಯಾಬಿನ್, ಹೊಂದಿಕೊಳ್ಳುವ 60:40 ಸ್ಪ್ಲಿಟ್ 2 ನೇ ಸಾಲು ಮತ್ತು ಒರಗಿಕೊಳ್ಳುವ 3 ನೇ ಸಾಲಿನ ಸೀಟುಗಳು, 2 ನೇ ಮತ್ತು 3 ನೇ ಸಾಲಿನ AC ವೆಂಟ್‌ಗಳು ಮತ್ತು ಉದಾರವಾದ ಲಗೇಜ್ ಸ್ಥಳವನ್ನು ನೀಡುತ್ತದೆ. ಇದು ಬಹುಮುಖವಾಗಿರುವುದರ ಜೊತೆಗೆ ಆರಾಮದಾಯಕವಾಗಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡುತ್ತದೆ.
ಗ್ರಾಹಕರನ್ನು ಪ್ರಯಾಣದಲ್ಲಿರುವಾಗ ಸಂಪರ್ಕದಲ್ಲಿರಿಸಲು, ರೂಮಿಯನ್ ಟೊಯೋಟಾ ಐ-ಕನೆಕ್ಟ್‌ನೊಂದಿಗೆ ಬರುತ್ತದೆ. ಇದು ಸ್ಮಾರ್ಟ್‌ವಾಚ್ ಹೊಂದಾಣಿಕೆ, ವಾಯಿಸ್ ಅಸಿಸ್ಟ್ ಸಪೋರ್ಟ್, ರಿಮೋಟ್ ಲಾಕ್/ಅನ್‌ಲಾಕ್, ಕ್ಲೈಮೆಟ್ ಕಂಟ್ರೋಲ್ ಮತ್ತು ಸುರಕ್ಷತಾ ಎಚ್ಚರಿಕೆಗಳನ್ನು ನೀಡುತ್ತದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಪ್ರೀಮಿಯಂ ಅರ್ಕಾಮಿಸ್ ಸರೌಂಡ್ ಸೆನ್ಸ್ ಆಡಿಯೊದೊಂದಿಗೆ 17.78 ಸೆಂ.ಮೀ ಸ್ಮಾರ್ಟ್‌ಪ್ಲೇ ಕಾಸ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಿದೆ.

ನಿಯೋಡ್ರೈವ್ (ಪೆಟ್ರೋಲ್) ಮತ್ತು ಇ-ಸಿಎನ್‌ಜಿ ಆಯ್ಕೆಗಳೊಂದಿಗೆ 1.5L ಕೆ-ಸೀರೀಸ್ ಎಂಜಿನ್‌ನಿಂದ ನಡೆಸಲ್ಪಡುವ ರೂಮಿಯನ್, ಕಾರ್ಯಕ್ಷಮತೆ ಮತ್ತು ದಕ್ಷತೆ ಎರಡರಲ್ಲೂ ಅತ್ಯುತ್ತಮವಾಗಿದೆ. ಗ್ರಾಹಕರು ಪೆಟ್ರೋಲ್‌ನಲ್ಲಿ 20.51 ಕಿಮೀ/ಲೀ (MT) ಮತ್ತು CNG ನಲ್ಲಿ 26.11 ಕಿ.ಮೀ/ಕೆ.ಜಿ ವರೆಗೆ ಮೈಲೇಜ್ ಪಡೆಯಬಹುದು ಎಂದು ಟೊಯೋಟಾ ಹೇಳಿಕೊಂಡಿದೆ. ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 5MT ಮತ್ತು 6AT ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯಬಹುದು.
ಟೊಯೋಟಾ ರೂಮಿಯನ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC), ಹಿಲ್ ಹೋಲ್ಡ್ ಅಸಿಸ್ಟ್, EBD ಯೊಂದಿಗೆ ABS, ಬ್ರೇಕ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಈಗ ಎಲ್ಲಾ ದರ್ಜೆಗಳಲ್ಲಿ ಆರು ಏರ್‌ಬ್ಯಾಗ್‌ಗಳ ಪ್ರಮಾಣಿತತೆಯಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ವಾಹನವು 3-ವರ್ಷ/1,00,000 ಕಿ.ಮೀ ವಾರಂಟಿಯೊಂದಿಗೆ ಬರುತ್ತದೆ. 24x7 ರಸ್ತೆಬದಿಯ ಸಹಾಯದೊಂದಿಗೆ 5 ವರ್ಷ/2,20,000 ಕಿ.ಮೀ ವರೆಗೆ ವಿಸ್ತರಿಸಬಹುದಾಗಿದೆ.


Click it and Unblock the Notifications








