Toyota: ಹೊಸ ಟೊಯೋಟಾ ಹೈಬ್ರಿಡ್ ಕಾರು ಬಿಡುಗಡೆ: 25.49 ಕಿ.ಮೀ ಮೈಲೇಜ್
ಜನಪ್ರಿಯ ಕಾರು ಕಂಪನಿಯಾದ ಟೊಯೋಟಾ (Toyota), ಇಂದು ತನ್ನ ಐಕಾನಿಕ್ ಐಷಾರಾಮಿ ಹೈಬ್ರಿಡ್ ಎಲೆಕ್ಟ್ರಿಕ್ ಸೆಡಾನ್ ಆಗಿರುವ 'ಕ್ಯಾಮ್ರಿ-ಸ್ಪ್ರಿಂಟ್ ಎಡಿಷನ್' (Camry Sprint Edition) ಅನ್ನು ಬಿಡುಗಡೆ ಮಾಡಿದೆ. ಗಮನಾರ್ಹವಾದ ಡ್ಯುಯಲ್-ಟೋನ್ ಬಾಹ್ಯ, ಮ್ಯಾಟ್ ಬ್ಲಾಕ್ ವರ್ಧನೆಗಳು ಮತ್ತು ವಿಶೇಷ ಸ್ಪೋರ್ಟ್ಸ್ ಕಿಟ್ ಅನ್ನು ಒಳಗೊಂಡಿರುವ ಈ ಹೊಸ ವೇರಿಯೆಂಟ್ ಸಂಸ್ಕರಿಸಿದ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ. ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯು ಉತ್ಸಾಹಭರಿತ ಪರ್ಫಾಮೆನ್ಸ್ - ಸ್ಪೋರ್ಟಿ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಜೊತೆಗೆ ಮೋಜಿನ ಡ್ರೈವ್ ಅನುಭವ ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಟೊಯೋಟಾ ಹೇಳಿದೆ.
ಟೊಯೋಟಾ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಸ್ಪ್ರಿಂಟ್ ಆವೃತ್ತಿಯು ಸುಧಾರಿತ 5ನೇ ತಲೆಮಾರಿನ ಹೈಬ್ರಿಡ್ ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಹೊಂದಿದ್ದು, ಪರ್ಫಾಮೆನ್ಸ್ ಮತ್ತು ಮೈಲೇಜ್ ನಡುವೆ ಬಲವಾದ ಮಿಶ್ರಣವನ್ನು ನೀಡುತ್ತದೆ. ಈ ಸಿಸ್ಟಮ್ ಒಟ್ಟು 169 kW (230 PS) ಪವರ್ ಉತ್ಪಾದಿಸುತ್ತದೆ. ಜೊತೆಗೆ 25.49 km/l ಅತ್ಯುತ್ತಮ - ದರ್ಜೆಯ ಇಂಧನ ದಕ್ಷತೆಯನ್ನು (ಮೈಲೇಜ್) ನೀಡುತ್ತದೆ.

ಇಕೋ, ನಾರ್ಮಲ್ ಮತ್ತು ಸ್ಪೋರ್ಟ್‌ನಂತಹ ಡ್ರೈವ್ ಮೋಡ್‌ಗಳೊಂದಿಗೆ, ವಾಹನವು ವಿವಿಧ ಚಾಲನಾ ಆದ್ಯತೆಗಳಿಗೆ ಸಲೀಸಾಗಿ ಹೊಂದಿಕೊಳ್ಳುತ್ತದೆ. ಟೊಯೋಟಾ ಸೇಫ್ಟಿ ಸೆನ್ಸ್ 3.0 ನೊಂದಿಗೆ ಸಜ್ಜುಗೊಂಡಿರುವ ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯು ಪ್ರಿ-ಕೊಲಿಷನ್ ಸಿಸ್ಟಮ್, ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್ ಜೊತೆಗೆ ಫುಲ್ - ಸ್ಪೀಡ್ ರೇಂಜ್, ಲೇನ್ ಡಿಪಾರ್ಚರ್ ಅಲರ್ಟ್, ಲೇನ್ ಟ್ರೇಸಿಂಗ್ ಅಸಿಸ್ಟ್ ಮತ್ತು ಆಟೋಮ್ಯಾಟಿಕ್ ಹೈ ಬೀಮ್ ಸೇರಿದಂತೆ ಸಮಗ್ರ ವೈಶಿಷ್ಟ್ಯಗಳನ್ನು ನೀಡುತ್ತದೆ.
ಸುರಕ್ಷತೆ ವಿಷಯಕ್ಕೆ ಬಂದರೆ 9 SRS ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹೆಚ್ಚುವರಿ ಗೋಚರತೆ ಮತ್ತು ವಿಶ್ವಾಸಕ್ಕಾಗಿ 360° ಪನೋರಮಿಕ್ ವ್ಯೂ ಮಾನಿಟರ್ ಇವುಗಳನ್ನು ಬೆಂಬಲಿಸುತ್ತದೆ.
10-ವೇ ಪವರ್-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ವೆಂಟಿಲೇಟೆಡ್ ಮುಂಭಾಗದ ಆಸನಗಳು, ಪ್ಯಾಡಲ್ ಶಿಫ್ಟರ್‌ಗಳು, ವೈರ್‌ಲೆಸ್ ಚಾರ್ಜರ್, ಹೆಡ್ಸ್ - ಅಪ್ ಡಿಸ್ಪ್ಲೇ ಮತ್ತು ಮೆಮೊರಿಯಂತಹ ವೈಶಿಷ್ಟ್ಯಗಳು ಔಟ್‌ಸೈಡ್ ರಿಯರ್ - ವ್ಯೂ ಮಿರರ್ (ORVM) ಮತ್ತು ಟಿಲ್ಟ್ - ಟೆಲಿಸ್ಕೋಪಿಕ್ ಸ್ಟೀರಿಂಗ್ ಕಾಲಮ್‌ಗಾಗಿ ಸೆಟ್ಟಿಂಗ್‌ಗಳು ಇದರಲ್ಲಿ ಲಭ್ಯವಿದೆ.
2.5L ಡೈನಾಮಿಕ್ ಫೋರ್ಸ್ ಎಂಜಿನ್ ಹೊಂದಿರುವ ಸ್ಪ್ರಿಂಟ್ ಆವೃತ್ತಿಯು ಇ-ಸಿವಿಟಿ ಟ್ರಾನ್ಸ್‌ಮಿಷನ್ ಹೊಂದಿದೆ. ಹೆಚ್ಚಿನ ಸಾಮರ್ಥ್ಯದ ಲಿಥಿಯಂ - ಐಯಾನ್ ಬ್ಯಾಟರಿಯೊಂದಿಗೆ ಇದು ವರ್ಧಿತ ಇಂಧನ ದಕ್ಷತೆ (ಮೈಲೇಜ್), ಕಡಿಮೆ ಕಾರ್ಬನ್ ಹೊರಸೂಸುವಿಕೆ ಮತ್ತು ತಡೆರಹಿತ ಹೈಬ್ರಿಡ್ ಚಾಲನಾ ಅನುಭವವನ್ನು ನೀಡುತ್ತದೆ. ರೂ. 48,50,000 ಎಕ್ಸ್ - ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಟೊಯೋಟಾ ಹೈಬ್ರಿಡ್ ಬ್ಯಾಟರಿಯ ಮೇಲೆ 8 ವರ್ಷ ಅಥವಾ 1,60,000 ಕಿಮೀ ವಾರಂಟಿಯನ್ನು (ಯಾವುದು ಮೊದಲು ಬರುತ್ತದೆಯೋ ಅದು) ನೀಡುತ್ತಿದೆ. ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯ ಬುಕಿಂಗ್‌ಗಳು ಈಗ ತೆರೆದಿವೆ. ಗ್ರಾಹಕರು ಟೊಯೋಟಾ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಬುಕಿಂಗ್‌ಗಳನ್ನು ಮಾಡಬಹುದು ಅಥವಾ ಹತ್ತಿರದ ಟೊಯೋಟಾ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು.
ಎಮೋಷನಲ್ ರೆಡ್ & ಮ್ಯಾಟ್ ಬ್ಲ್ಯಾಕ್, ಪ್ಲಾಟಿನಂ ವೈಟ್ ಪರ್ಲ್ & ಮ್ಯಾಟ್ ಬ್ಲಾಕ್, ಸಿಮೆಂಟ್ ಗ್ರೇ & ಮ್ಯಾಟ್ ಬ್ಲಾಕ್, ಪ್ರೆಷಿಯಸ್ ಮೆಟಲ್ & ಮ್ಯಾಟ್ ಬ್ಲಾಕ್, ಡಾರ್ಕ್ ಬ್ಲೂ ಮೆಟಾಲಿಕ್ & ಮ್ಯಾಟ್ ಬ್ಲಾಕ್ ಎಂಬ 5 ಡ್ಯುಯಲ್ ಟೋನ್ ಸ್ಪೋರ್ಟಿ ಬಣ್ಣಗಳಲ್ಲಿ ಲಭ್ಯವಿದೆ. ಒಟ್ಟಾರೆ ಕ್ಯಾಮ್ರಿ ಸ್ಪ್ರಿಂಟ್ ಆವೃತ್ತಿಯು ಪ್ರೀಮಿಯಂ ಹೈಬ್ರಿಡ್ ಸೆಡಾನ್ ಅನ್ನು ಹೊಸ ಅಂಚಿನೊಂದಿಗೆ ಮರುರೂಪಿಸುತ್ತದೆ.


Click it and Unblock the Notifications








