Toyota: ಎರಡು ಅತ್ಯಾಧುನಿಕ ಟೊಯೋಟಾ ಕಾರುಗಳ ಬಿಡುಗಡೆ: ಆಫ್‌ರೋಡ್‌ ಕಿಂಗ್‌ನ ಹೊಸ ಅವತಾರ!

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಫಾರ್ಚೂನರ್ ಮತ್ತು ಲೆಜೆಂಡರ್ ಅನ್ನು ಹೊಸ ನಿಯೋ ಡ್ರೈವ್ ದರ್ಜೆಯಲ್ಲಿ ಪರಿಚಯಿಸಿದೆ. ಸುಧಾರಿತ 48-ವೋಲ್ಟ್ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿರುವ ಹೊಸ ನಿಯೋ ಡ್ರೈವ್ ವೇರಿಯೆಂಟ್‌ಗಳು ಸುಧಾರಿತ ಮೈಲೇಜ್, ವರ್ಧಿತ ಡ್ರೈವ್ ಪರ್ಫಾಮೆನ್ಸ್ ಮತ್ತು ಹೆಚ್ಚಿನ ಸೌಕರ್ಯದೊಂದಿಗೆ ಬಿಡುಗಡೆಯಾಗಿವೆ. ಇವು ನಗರದ ಸೆಟ್ಟಿಂಗ್‌ಗಳು ಮತ್ತು ಆಫ್-ರೋಡಿಂಗ್‌ಗಳಲ್ಲಿ ಹೆಚ್ಚು ಪರಿಷ್ಕೃತ ಅನುಭವವನ್ನು ನೀಡುತ್ತವೆ ಎಂದು ಕಂಪನಿ ತಿಳಿಸಿದೆ. ಹೊಸ ನಿಯೋ ಡ್ರೈವ್ ವೇರಿಯೆಂಟ್‌ಗಳ ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

2009 ರಲ್ಲಿ ಬಿಡುಗಡೆಯಾದಾಗಿನಿಂದ ಟೊಯೋಟಾ ಫಾರ್ಚೂನರ್ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ದಿಟ್ಟ ವಿನ್ಯಾಸ, ಅಸಾಧಾರಣ ಪರ್ಫಾಮೆನ್ಸ್ ಮತ್ತು ಸಾಟಿಯಿಲ್ಲದ ಎಲ್ಲಾ ಭೂಪ್ರದೇಶದಲ್ಲೂ ಮುನ್ನುಗ್ಗುವ ಸಾಮರ್ಥ್ಯದಿಂದ ಎಲ್ಲರ ಮನಗೆದ್ದಿದೆ. ಸೊಗಸಾದ ಮತ್ತು ವೈಶಿಷ್ಟ್ಯ-ವರ್ಧಿತ ಪ್ರತಿರೂಪವಾದ ಲೆಜೆಂಡರ್ ಜೊತೆಗೆ, ಫಾರ್ಚೂನರ್ ಟೊಯೋಟಾದ ಗುಣಮಟ್ಟ, ಬಾಳಿಕೆ, ವಿಶ್ವಾಸಾರ್ಹತೆಯನ್ನು ಹೊಂದಿದೆ.

toyota-fortuner-and-legender-neo-drive-48v-variants-launched

ಇದೀಗ ಪರಿಚಯಿಸಲಾದ ಹೊಸ 48V ಇಂಟಲಿಜೆಂಟ್ ಎಲೆಕ್ಟ್ರಿಕ್ ಅಸಿಸ್ಟ್ ತಂತ್ರಜ್ಞಾನದಿಂದ - ಉತ್ತಮ ಮೈಲೇಜ್ ಜೊತೆಗೆ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲಿದೆ. ನಿಯೋ ಡ್ರೈವ್ ವೇರಿಯೆಂಟ್‌ಗಳು ಟೊಯೋಟಾದ ಪವರ್‌ಫುಲ್ 2.8-ಲೀಟರ್, 4-ಸಿಲಿಂಡರ್ ಟರ್ಬೊ-ಡೀಸೆಲ್ ಎಂಜಿನ್‌ನೊಂದಿಗೆ ಸಜ್ಜುಗೊಂಡಿವೆ. ಈಗ 48-ವೋಲ್ಟ್ ಸಿಸ್ಟಮ್‌ನೊಂದಿಗೆ ಜೋಡಿಯಾಗಿದ್ದು, ಇದು ಬೆಲ್ಟ್-ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿದೆ.

ಈ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಮ್‌, ಬ್ಯಾಟರಿಯನ್ನು ವೇಗವರ್ಧನೆಯ ಸಮಯದಲ್ಲಿ ಚಾರ್ಜ್ ಮಾಡಲಾಗುತ್ತದೆ. ಹೊಸ ಸ್ಮಾರ್ಟ್ ಐಡಲ್ ಸ್ಟಾರ್ಟ್-ಸ್ಟಾಪ್ ಕಾರ್ಯವು ಮೈಲೇಜ್ ಅನ್ನು ಮತ್ತಷ್ಟು ಸುಧಾರಿಸುತ್ತದೆ. ಸ್ಥಿರವಾಗಿರುವಾಗ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡುವ ಮೂಲಕ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಮಲ್ಟಿ-ಟೆರೈನ್ ಸೆಲೆಕ್ಟ್ ಸಿಸ್ಟಮ್ ವಿವಿಧ ಭೂಪ್ರದೇಶಗಳಲ್ಲಿ ಪರ್ಫಾಮೆನ್ಸ್ ಅನ್ನು ಅತ್ಯುತ್ತಮವಾಗಿಸಲು ಥ್ರೊಟಲ್ ಪ್ರತಿಕ್ರಿಯೆ, ಬ್ರೇಕಿಂಗ್ ಮತ್ತು ಸ್ಟೆಬಿಲಿಟಿ ಕಂಟ್ರೋಲ್ ಹೊಂದಿದೆ.

toyota-fortuner-and-legender-neo-drive-48v-variants-launched

ಆಕರ್ಷಕ ಮತ್ತು ಪ್ರಾಬಲ್ಯದ ದೇಹ: ಫಾರ್ಚೂನರ್ ತನ್ನ ದಿಟ್ಟ ಆಕರ್ಷಣೆಯನ್ನು ಉಳಿಸಿಕೊಂಡಿದ್ದರೆ, ಲೆಜೆಂಡರ್ ತನ್ನ ಗಮನಾರ್ಹ ಡ್ಯುಯಲ್-ಟೋನ್ ಬಾಡಿ ಬಣ್ಣಗಳು, ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಸ್ಲೀಕರ್ ಫ್ಯಾಸಿಯಾದೊಂದಿಗೆ ಹೆಚ್ಚು ಕ್ರಿಯಾತ್ಮಕ ಮತ್ತು ಪ್ರೀಮಿಯಂ ಉಪಸ್ಥಿತಿಯನ್ನು ನೀಡುತ್ತದೆ. ಎರಡೂ ಮಾದರಿಗಳು ಡ್ಯುಯಲ್-ಟೋನ್ ಲೆದರ್ ಅಪ್ಹೋಲ್ಸ್ಟರಿ, ಸಾಫ್ಟ್-ಟಚ್ ಮೆಟೀರಿಯಲ್‌ಗಳು ಅತ್ಯುತ್ತಮ ಆಸನಗಳನ್ನು ಒಳಗೊಂಡಿವೆ.

ಸುರಕ್ಷತೆಯು ಆದ್ಯತೆಯಾಗಿದೆ: ಫಾರ್ಚೂನರ್ ಮತ್ತು ಲೆಜೆಂಡರ್‌ಗಳಲ್ಲಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್, ಬ್ರೇಕ್ ಅಸಿಸ್ಟ್‌ನೊಂದಿಗೆ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, WIL ಕಾನ್ಸೆಪ್ಟ್ ಸೀಟ್‌ಗಳು, ಹಿಲ್ ಅಸಿಸ್ಟ್ ಕಂಟ್ರೋಲ್, ಟಿಆರ್‌ಸಿ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಚೈಲ್ಡ್ ರೆಸ್ಟ್ರೈಂಟ್ ಸಿಸ್ಟಮ್, ಪ್ರಿ-ಟೆನ್ಷನರ್ + ಫೋರ್ಸ್ ಲಿಮಿಟರ್‌ನೊಂದಿಗೆ ಮುಂಭಾಗದ ಸಾಲಿನ ಸೀಟ್‌ಬೆಲ್ಟ್‌ಗಲಂತಹ ಸುರಕ್ಷತಾ ವಶಿಷ್ಟ್ಯಗಳನ್ನು ಹೊಂದಿದೆ.

ಕಂಪನಿಯ ಪ್ರಕಾರ, ಫಾರ್ಚೂನರ್ ಮತ್ತು ಲೆಜೆಂಡರ್ ನಿಯೋ ಡ್ರೈವ್ ವೇರಿಯೆಂಟ್‌ಗಳು ಐದು ವರ್ಷಗಳ ಉಚಿತ ರಸ್ತೆಬದಿಯ ನೆರವು ಮತ್ತು ಪ್ರಮಾಣಿತ 3-ವರ್ಷ ಅಥವಾ 1,00,000 ಕಿ.ಮೀ ವಾರಂಟಿ, 5 ವರ್ಷ ಅಥವಾ 2,20,000 ಕಿಮೀವರೆಗೆ ವಿಸ್ತರಿಸಬಹುದಾದ ಜೊತೆಗೆ ಕಸ್ಟಮೈಸ್ ಮಾಡಬಹುದಾದ ಟೊಯೋಟಾ ಸ್ಮೈಲ್ಸ್ ಪ್ಲಸ್ ಸೇವಾ ಪ್ಯಾಕೇಜ್‌ ಹೊಂದಿದೆ.

ಫಾರ್ಚೂನರ್ ಮತ್ತು ಲೆಜೆಂಡರ್ ನಿಯೋ ಡ್ರೈವ್ ರೂಪಾಂತರಗಳ ಬುಕಿಂಗ್‌ಗಳು ಜೂನ್ 02, 2025 ರಿಂದ ತೆರೆದಿರುತ್ತವೆ, ಜೂನ್ 3 ನೇ ವಾರದಿಂದ ವಿತರಣೆಗಳು ಪ್ರಾರಂಭವಾಗುತ್ತವೆ. ಫಾರ್ಚೂನರ್ ಲೆಜೆಂಡರ್ ನಿಯೋ ಡ್ರೈವ್ 48V ಬೆಲೆಯು 50,09,000 (ಎಕ್ಸ್ ಶೋರೂಂ) ಹಾಗೂ ಫಾರ್ಚೂನರ್ ನಿಯೋ ಡ್ರೈವ್ 48V ಬೆಲೆಯು 44,72,000 (ಎಕ್ಸ್‌ ಶೊರೂಂ) ಇದೆ.

More from DriveSpark

Article Published On: Monday, June 2, 2025, 16:46 [IST]
English summary
Toyota fortuner and legender neo drive 48v variants launched
Read more on toyota new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+