Toyota: ದೈತ್ಯ ಫಾರ್ಚೂನರ್ ಖರೀದಿದಾರರಿಗೆ ಸಡನ್ ಶಾಕ್ ಕೊಟ್ಟ ಟೊಯೋಟಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ (Toyota), ಭಾರತದಲ್ಲಿ ವ್ಯಾಪಕ ಮಾರುಕಟ್ಟೆಯನ್ನು ಹೊಂದಿದೆ. ಕಂಪನಿಯು ತನ್ನ ದೈತ್ಯ ಫಾರ್ಚೂನರ್ ಹಾಗೂ ಲೆಜೆಂಡರ್ ಎಸ್‌ಯುವಿಗಳನ್ನು ವಿಭಾಗದ ಪ್ರಮುಖ ಎಸ್‌ಯುವಿಗಳಾಗಿ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಫಾರ್ಚೂನರ್ ಶ್ರೇಣಿಯಲ್ಲಿ ಮೈಲ್ಡ್ - ಹೈಬ್ರಿಡ್ ವೇರಿಯೆಂಟ್ ಅನ್ನು ಕೂಡ ಪರಿಚಯಿಸಲಾಗಿತು. ಇದರ ಬೆಲೆಗಳು 44.72 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಆದರೆ ಈಗ, ವಾಹನ ತಯಾರಕರು ಎಸ್‌ಯುವಿಯ ಆಯ್ದ ವೇರಿಯೆಂಟ್‌ಗಳ ಬೆಲೆಗಳನ್ನು ಮತ್ತೆ ಏರಿಕೆ ಮಾಡಿದ್ದಾರೆ.
ಟೊಯೊಟಾ ಫಾರ್ಚೂನರ್ 4x2 ಪೆಟ್ರೋಲ್ AT ವೇರಿಯೆಂಟ್ ಕಾರಿನ ಬೆಲೆಯು ರೂ. 68,000 ಗಳಷ್ಟು ಏರಿಕೆಯಾಗಿದೆ. ಅದೇ ಸಮಯದಲ್ಲಿ, 4x2 ಡೀಸೆಲ್ MT, 4x2 ಡೀಸೆಲ್ AT, 4x4 ಡೀಸೆಲ್ MT, ಜಿಆರ್-ಎಸ್, 4x4 ಡೀಸೆಲ್ MT ಲೆಜೆಂಡರ್ ಮತ್ತು 4x4 ಡೀಸೆಲ್ AT ಲೆಜೆಂಡರ್ ಬೆಲೆಗಳು ತಲಾ 40,000 ರೂ.ಗಳಷ್ಟು ದುಬಾರಿಯಾಗಿವೆ.

ಈ ಬೆಲೆ ಪರಿಷ್ಕರಣೆಯೊಂದಿಗೆ, ಟೊಯೊಟಾ ಫಾರ್ಚೂನರ್ ಶ್ರೇಣಿಯ ಬೆಲೆಯು ಈಗ ರೂ.36.05 ಲಕ್ಷದಿಂದ ರೂ.52.34 ಲಕ್ಷಗಳವರೆಗೆ (ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ) ಇದೆ. ಇದು 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‌ಗಳೊಂದಿಗೆ ಬರುತ್ತದೆ. 4x4 ಸಿಸ್ಟಂ ಮತ್ತು ಲೆಜೆಂಡರ್ ಡೆರಿವೇಟಿವ್ ಡೀಸೆಲ್ ಪವರ್‌ಟ್ರೇನ್ ನೊಂದಿಗೆ ಮಾತ್ರ ಲಭ್ಯವಿದೆ.
ಇತ್ತೀಚೆಗಷ್ಟೆ ಬಿಡುಗಡೆಯಾದ ಹೈಬ್ರಿಡ್ ಫಾರ್ಚೂನರ್ ವಿಶೇಷತೆಗಳು
ಇತ್ತೀಚೆಗೆ ಸುಧಾರಿತ 48-ವೋಲ್ಟ್ ಸಿಸ್ಟಮ್ ಟೆಕ್ನಾಲಜಿಯೊಂದಿಗೆ ಫಾರ್ಚುನರ್ ಹಾಗೂ ಲೆಜೆಂಡರ್‌ನ ಹೊಸ ಹೈಬ್ರಿಡ್ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಫಾರ್ಚೂನರ್ ನಿಯೋ ಡ್ರೈವ್ 48V ಬೆಲೆಯು 44,72,000 (ಎಕ್ಸ್ ಶೊರೂಂ) ಇದ್ದರೇ, ಫಾರ್ಚೂನರ್ ಲೆಜೆಂಡರ್ ನಿಯೋ ಡ್ರೈವ್ 48V ಬೆಲೆಯು 50,09,000 (ಎಕ್ಸ್ ಶೋರೂಂ) ಇದೆ.

ಹೊಸ 48V ಇಂಟಲಿಜೆಂಟ್ ಎಲೆಕ್ಟ್ರಿಕ್ ಅಸಿಸ್ಟ್ ತಂತ್ರಜ್ಞಾವು - ಉತ್ತಮ ಮೈಲೇಜ್ ಜೊತೆಗೆ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲಿದೆ. ನಿಯೋ ಡ್ರೈವ್ ವೇರಿಯೆಂಟ್‌ಗಳು ಟೊಯೋಟಾದ ಪವರ್‌ಫುಲ್ 2.8-ಲೀಟರ್, 4-ಸಿಲಿಂಡರ್ ಟರ್ಬೊ - ಡೀಸೆಲ್ ಎಂಜಿನ್‌ನೊಂದಿಗೆ ಸಜ್ಜುಗೊಂಡಿವೆ. ಬೆಲ್ಟ್-ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿರುವುದರಿಂದ, ಮಲ್ಟಿ-ಟೆರೈನ್ ಸೆಲೆಕ್ಟ್ ಸಿಸ್ಟಮ್ ಥ್ರೊಟಲ್ ಪ್ರತಿಕ್ರಿಯೆ, ಬ್ರೇಕಿಂಗ್ ಮತ್ತು ಸ್ಟೆಬಿಲಿಟಿ ಕಂಟ್ರೋಲ್ ಹೊಂದಿದೆ.
ಫಾರ್ಚೂನರ್ ಮತ್ತು ಲೆಜೆಂಡರ್‌ಗಳಲ್ಲಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್, ಟಿಆರ್‌ಸಿ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಚೈಲ್ಡ್ ರೆಸ್ಟ್ರೈಂಟ್ ಸಿಸ್ಟಮ್, ಬ್ರೇಕ್ ಅಸಿಸ್ಟ್‌ನೊಂದಿಗೆ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, WIL ಕಾನ್ಸೆಪ್ಟ್ ಸೀಟ್‌ಗಳು, ಹಿಲ್ ಅಸಿಸ್ಟ್ ಕಂಟ್ರೋಲ್, ಪ್ರಿ-ಟೆನ್ಷನರ್ + ಫೋರ್ಸ್ ಲಿಮಿಟರ್‌ನೊಂದಿಗೆ ಮುಂಭಾಗದ ಸಾಲಿನ ಸೀಟ್‌ಬೆಲ್ಟ್‌ಗಲಂತಹ ಸುರಕ್ಷತಾ ವಶಿಷ್ಟ್ಯಗಳನ್ನು ಹೊಂದಿದೆ.
ಫಾರ್ಚೂನರ್ ಮತ್ತು ಲೆಜೆಂಡರ್ ನಿಯೋ ಡ್ರೈವ್ ರೂಪಾಂತರಗಳ ಬುಕಿಂಗ್‌ಗಳು ಜೂನ್ 02, 2025 ರಿಂದ ತೆರೆದಿರುತ್ತವೆ, ಜೂನ್ 3 ನೇ ವಾರದಿಂದ ವಿತರಣೆಗಳು ಪ್ರಾರಂಭವಾಗುತ್ತವೆ. ಕಂಪನಿಯ ಪ್ರಕಾರ, ಪ್ರಮಾಣಿತ 3-ವರ್ಷ ಅಥವಾ 1,00,000 ಕಿ.ಮೀ ವಾರಂಟಿ, 5 ವರ್ಷ ಅಥವಾ 2,20,000 ಕಿಮೀವರೆಗೆ ವಿಸ್ತರಿಸಬಹುದಾದ ಜೊತೆಗೆ ಕಸ್ಟಮೈಸ್ ಮಾಡಬಹುದಾದ ಟೊಯೋಟಾ ಸ್ಮೈಲ್ಸ್ ಪ್ಲಸ್ ಸೇವಾ ಪ್ಯಾಕೇಜ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








