Toyota: ಇದೇ ಬಲಭೀಮ.. ನೂತನ ಟೊಯೊಟಾ ಕಾರಿನ ಕುರಿತ ಪ್ರಮುಖಾಂಶಗಳಿವು, ಯಾರು ಹೇಳಲ್ಲ!
ಭಾರತದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ 'ಹಿಲಕ್ಸ್ ಬ್ಲ್ಯಾಕ್ ಎಡಿಷನ್' ಪಿಕ್ಅಪ್ ಟ್ರಕ್‌ನ್ನು ಬಿಡುಗಡೆಗೊಳಿಸಿತ್ತು. ಈ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೊಂಚ ಹೆಚ್ಚಿನ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ.. ಈ ಪಿಕ್ಅಪ್ ಟ್ರಕ್‌ನ ವಿಶೇಷತೆಗಳನ್ನು ಒಳಗೊಂಡ ಪ್ರಮುಖಾಂಶಗಳನ್ನು ತಿಳಿಯೋಣ.
ಬೆಲೆ (Price): ನೂತನ ಟೊಯೊಟಾ ಹಿಲಕ್ಸ್ ಬ್ಲ್ಯಾಕ್ ಎಡಿಷನ್ (Toyota Hilux Black Edition) ಪಿಕ್ಅಪ್ ಟ್ರಕ್ ಹೆಚ್ಚು ಪ್ರೀಮಿಯಂ ಆಗಿರುವುದರಿಂದ ಸ್ವಲ್ಪ ಅಧಿಕ ದರವನ್ನು ಹೊಂದಿದೆ. ಇದು ರೂ.37.90 ಲಕ್ಷ (ಎಕ್ಸ್ - ಶೋರೂಂ) ಬೆಲೆಯನ್ನು ಪಡೆದಿದೆ.

ವಿನ್ಯಾಸ (Design): ಹೊಸ ಪಿಕ್ಅಪ್ ಟ್ರಕ್ ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಹೊರಭಾಗದಲ್ಲಿ ಕಪ್ಪು (ಬ್ಲ್ಯಾಕ್) ಬಣ್ಣದ ಥೀಮ್‌ನ್ನು ಹೊಂದಿದೆ. ಇದರ ಗ್ರಿಲ್, ಅಲಾಯ್ ವೀಲ್‌ಗಳು, ರೇರ್‌ವ್ಯೂ ಮಿರರ್‌ಗಳು ಹಾಗೂ ಡೋರ್ ಹ್ಯಾಂಡಲ್‌ಗಳು ಸಹ ಕಪ್ಪು ಬಣ್ಣವನ್ನೇ ಪಡೆದಿವೆ. ಇದು ಬಿಟ್ಟರೆ, ಸ್ಟ್ಯಾಂಡರ್ಡ್ ಹಿಲಕ್ಸ್ ಮಾಡೆಲ್‌ನಂತೆಯೇ ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್‌ಗಳು ಹಾಗೂ ಎಲ್ಇಡಿ ಟೈಲ್ ಲೈಟ್‌ಗಳನ್ನು ಒಳಗೊಂಡಿದೆ.
ಕಾರ್ಯಕ್ಷಮತೆ (Performance): ನೂತನ ಟೊಯೊಟಾ ಹಿಲಕ್ಸ್ ಬ್ಲ್ಯಾಕ್ ಎಡಿಷನ್ ಮಾಡೆಲ್ ಶಕ್ತಿಯುತವಾದ 2.8-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದ್ದು, 204 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 500 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. 12 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಆಸನ ಆಯ್ಕೆ & ಬೂಟ್ ಸ್ಪೇಸ್ (Seat Capacity & Boot Space): ಈ ಪಿಕ್ಅಪ್ ಟ್ರಕ್ 5 ಆಸನಗಳನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡ ಹೋಗಲು 435 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.
ವೈಶಿಷ್ಟ್ಯಗಳು (Features): ಈ ಟೊಯೊಟಾ ಹಿಲಕ್ಸ್ ಬ್ಲ್ಯಾಕ್ ಎಡಿಷನ್ ಪಿಕ್ಅಪ್ ಟ್ರಕ್ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅನಲಾಗ್ ಇನ್ಸ್ಟ್ರುಮೆಂಟ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್ - ಝೋನ್ ಆಟೋ ಕ್ಲೇಮೇಟ್ ಕಂಟ್ರೋಲ್, ಡುಯಲ್ - ಜೋನ್ ಎಸಿ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features): ನೂತನ ಪಿಕ್ಅಪ್ ಟ್ರಕ್ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌ಗಳು, ಹೆಚ್ಎಸಿ (ಹಿಲ್ ಅಸಿಸ್ಟ್ ಕಂಟ್ರೋಲ್), ಬ್ರೇಕ್ ಅಸಿಸ್ಟ್, ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








