Toyota: ಇದೇ ರಸ್ತೆ ಮೇಲಿನ 'ಬಲಭೀಮ'.. ಟೊಯೊಟಾದಿಂದ ಹೊಸ ಕಾರಿನ ಪರಿಚಯ, ಯಾವುದು ಗೊತ್ತಾ?
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor), ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಗ್ಲ್ಯಾನ್ಜಾ, ಅರ್ಬನ್ ಕ್ರೂಸರ್ ಹೈರೈಡರ್, ಅರ್ಬನ್ ಕ್ರೂಸರ್ ಟೈಸರ್ ಮತ್ತು ಇನ್ನೋವಾ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. 2022ರಲ್ಲಿ ಕಂಪನಿಯು 'ಹಿಲಕ್ಸ್ ಪಿಕ್ಅಪ್ ಟ್ರಕ್'ನ್ನು ಬಿಡುಗಡೆಗೊಳಿಸಿತ್ತು. ಸದ್ಯ ಇದೇ ಕಾರನ್ನು ಮೇಲ್ದರ್ಜೆರಿಸಲಾಗಿದೆ. ನವದೆಹಲಿಯಲ್ಲಿ ಜರುಗುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿಯೂ ಈ ಕಾರಿನ 'ಬ್ಲ್ಯಾಕ್ ಎಡಿಷನ್' ಮಾಡೆಲ್‌ನ್ನು ಅನಾವರಣಗೊಳಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಟೊಯೊಟಾ ಹಿಲಕ್ಸ್ ಬ್ಲ್ಯಾಕ್ ಎಡಿಷನ್ (Toyota Hilux Black Edition) ಪಿಕ್ಅಪ್ ಟ್ರಕ್ ಸಾಮಾನ್ಯ 'ಹಿಲಕ್ಸ್'ಗೆ ಹೋಲಿಕೆ ಮಾಡಿದರೆ, ಹೊರಭಾಗದಲ್ಲಿ ಕಪ್ಪು (ಬ್ಲ್ಯಾಕ್) ಬಣ್ಣದ ಥೀಮ್‌ನ್ನು ಒಳಗೊಂಡಿದೆ. ಇದರ ಗ್ರಿಲ್, ಅಲಾಯ್ ವೀಲ್‌ಗಳು, ರೇರ್‌ವ್ಯೂ ಮಿರರ್‌ಗಳು ಮತ್ತು ಡೋರ್ ಹ್ಯಾಂಡಲ್‌ಗಳು ಸಹ ಕಪ್ಪು ಬಣ್ಣವನ್ನೇ ಹೊಂದಿವೆ. ಇದು ಮಾತ್ರವಲ್ಲದೆ, ಹಳೆಯ ಮಾಡೆಲ್‌ನಂತೆಯೇ ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಟೈಲ್ ಲೈಟ್‌ಗಳನ್ನು ಪಡೆದಿದೆ.

ನೂತನ ಟೊಯೊಟಾ ಹಿಲಕ್ಸ್ ಬ್ಲ್ಯಾಕ್ ಎಡಿಷನ್ ಪಿಕ್ಅಪ್ ಟ್ರಕ್ ಕ್ಯಾಬಿನ್ ಕೂಡ ಕಪ್ಪು ಬಣ್ಣದ ಥೀಮ್‌ನ್ನೇ ಒಳಗೊಂಡಿದೆ. ಇದು 5 ಆಸನ ಆಯ್ಕೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 435 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಈ ಕಾರು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್-ಝೋನ್ ಆಟೋ ಕ್ಲೇಮೇಟ್ ಕಂಟ್ರೋಲ್, ಡುಯಲ್ ಜೋನ್ ಎಸಿ, ಕೂಲ್ಡ್ ಗ್ಲೋವ್‌ಬಾಕ್ಸ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್‌ನ್ನು ಹೊಂದಿದೆ.

ಹೊಸ ಟೊಯೊಟಾ ಹಿಲಕ್ಸ್ ಬ್ಲ್ಯಾಕ್ ಎಡಿಷನ್ ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಮಾಡೆಲ್, 204 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 420 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಮತ್ತೊಂದು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಪಡೆದಿರುವ ಮಾಡೆಲ್, 204 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 500 (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4ಡಬ್ಲ್ಯೂಡಿ (ಫೋರ್ - ವೀಲ್ ಡ್ರೈವ್) ಟೆಕ್ನಾಲಜಿಯನ್ನು ಒಳಗೊಂಡಿದೆ. 12 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಹಿಲಕ್ಸ್ ಬ್ಲ್ಯಾಕ್ ಎಡಿಷನ್ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಹಳೆಯ ಮಾಡೆಲ್‌ನಂತೆಯೇ ಸುರಕ್ಷತೆಯ ದೃಷ್ಟಿಯಿಂದ 7-ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಬ್ರೇಕ್ ಅಸಿಸ್ಟ್, ಫ್ರಂಟ್, ರೇರ್ ಪಾರ್ಕಿಂಗ್ ಸೇನಾರ್ಸ್ ಮತ್ತು ರಿವರ್ಸಿಂಗ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು, ಈ ಕಾರು ಅತಿ ಶೀಘ್ರದಲ್ಲಿಯೇ ಮಾರಾಟಕ್ಕೆ ಬರಲಿದ್ದು, ರೂ.30 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








