ಮೆಚ್ಚಿನ ಫ್ಯಾಮಿಲಿ ಕಾರಿನ ಪ್ರಯಾಣಕ್ಕಾಗಿ ಹೆಚ್ಚು ಖರ್ಚು ಮಾಡಬೇಕು: ಇನ್ನೋವಾ ಕ್ರಿಸ್ಟಾ ಎಷ್ಟು ದುಬಾರಿ?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ತನ್ನ ಫಾರ್ಚುನರ್ ನಂತರ, ಇನ್ನೋವಾ ಕ್ರಿಸ್ಟಾ ಎಂಪಿವಿ ಬೆಲೆಗಳನ್ನು ಪರಿಷ್ಕರಿಸಿದೆ. ಇದರ ಪರಿಣಾಮವಾಗಿ ಈ ಟೊಯೊಟಾ ಇನೋವಾ ಕ್ರಿಸ್ಟಾದ ಬೆಲೆಯು ರೂ.27,000 ವರೆಗೆ ಹೆಚ್ಚಿಸಲಾಗಿದೆ. ಈ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಬಿಡುಗಡೆಯಾದಗಿನಿಂದಲೂ ಬಹುಬೇಡಿಕೆಯ ಎಂಪಿವಿಯಾಗಿದೆ. ಈ ಕಾರಿಗೆ ಸರಿಯಾದ ಪೈಪೋಟಿಗೆ ಯಾವುದು ಇಲ್ಲ ಎಂದು ಹೇಳಬಹುದು. ಟೋಯೊಟಾ ಇನೋವಾ ಲಕ್ಷಾಂತರ ಕಿ.ಮೀ ಚಲಿಸಿದರೂ ಎಂಜಿನ್ ಉತ್ತಮ ಸ್ಥಿತಿಯಲ್ಲಿರುತ್ತದೆ.

ಅಲ್ಲದೇ ಟೊಯೊಟಾ ಇನೋವಾ ಉತ್ತಮ ಫ್ಯಾಮಿಲಿ ಕಾರ್ ಆಗಿದೆ. ನಂತರದಲ್ಲಿ ಬಂದ ಇನೋವಾ ಕ್ರಿಸ್ಟಾ ಎಂಪಿವಿ ಕೂಡ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ಜನಪ್ರಿಯ ಟೂಯೊಟಾ ಇನೋವಾ ಕ್ರಿಸ್ಟಾ (Toyota Innova Crysta) ಎಂಪಿವಿ G, GX, GX+, VX ಮತ್ತು ZX ಎಂಬ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ.

Toyota Innova Crysta

2005ರಲ್ಲಿ ಹೆಚ್ಚು ಜನಪ್ರಿಯವಾದ ಕ್ವಾಲಿಸ್ ಅನ್ನು ಬದಲಾಯಿಸಿ ಪ್ರೀಮಿಯಂ ಎಂಪಿವಿಯಾಗಿ ಟೊಯೊಟಾ ಇನೋವಾ ಕಾರನ್ನು ಪರಿಚಯಿಸಿದರು. ಅಂದಿನಿಂದ ಇಂದಿನವರೆಗೂ ಈ ಕಾರಿಗೆ ಭಾರೀ ಬೇಡಿಕೆಯನ್ನು ಹೊಂದಿದೆ. ಇದೇ ಕಾರಣದಿಂದಾಗಿ ಟೊಯೊಟಾ ಕಂಪನಿಯು ಇನ್ನೋವಾ ಕ್ರಿಸ್ಟಾವನ್ನು ಸ್ಥಗಿತಗೊಳಿಸಿ ನಂತರ ಡೀಸೆಲ್ ಎಂಜಿನ್ ನೊಂದಿಗೆ ಕಾರನ್ನು ಮರಳಿ ತರಲಾಯಿತು. ಈ ಟೊಯೊಟಾ ಇನೋವಾ ಕ್ರಿಸ್ಟಾ ಭಾರತೀಯರ ಮೆಚ್ಚಿದ ಎಂಪಿವಿ ಎಂದೇ ಹೆಸರುವಾಸಿಯಾಗಿದೆ.

ಈ ಟೂಯೊಟಾ ಇನ್ನೋವಾ ಕ್ರಿಸ್ಟಾ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 7, 8 ಸೀಟುಗಳ ಕಾನ್ಫಿಗರೇಶನ್‌ಗಳನ್ನು ಹೊಂದಿದೆ. ಈ ಜನಪ್ರಿಯ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಆರ್‌ಡಿಇ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸುತ್ತದೆ ಎಂದು ಕಾರು ತಯಾರಕರು ಖಚಿತಪಡಿಸಿದ್ದಾರೆ.

Toyota Innova Crysta

ಈ ಎಂಜಿನ್ 147.9 ಬಿಹೆಚ್‍ಪಿ ಪವರ್ ಮತ್ತು 343 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನೋವಾ ಕ್ರಿಸ್ಟಾ ಎಂಪಿವಿಯು ಇಕೋ ಮತ್ತು ಪವರ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಒಳಗೊಂಡಿದೆ. ಇನೋವಾ ಕ್ರಿಸ್ಟಾ ಕಾರಿನ ZX ರೂಪಾಂತರದಲ್ಲಿ 7-ಸೀಟುಗಳ ಲೇಔಟ್‌ನಲ್ಲಿ 8-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ಹೊಂದಿದೆ.

ಈ ಕಾರಿನಲ್ಲಿ ಹೀಟ್ ರಿಜೆಕ್ಟಿಂಗ್ ಫ್ರಂಟ್ ಮತ್ತು ಸೈಡ್ ಗ್ಲಾಸ್, 2 ಎನ್‌ಡಿ ರೋ ಆರ್ಮ್‌ರೆಸ್ಟ್, 'ಕ್ರಿಸ್ಟಾ' ಚಿಹ್ನೆಯೊಂದಿಗೆ ಸಜ್ಜುಗೊಳಿಸಲಾದ ಬ್ಲ್ಯಾಕ್ ಅಥವಾ ಕ್ಯಾಮೆಲ್ ಟ್ಯಾನ್ ಲೆದರ್ ಸೀಟ್‌ಗಳಂತಹ ಫೀಚರ್ಸ್ ಗಳನ್ನು ಹೊಂದಿವೆ. ಇನ್ನೋವಾ ಕ್ರಿಸ್ಟಾದ G ಎಂಬ ಮೂಲ ರೂಪಾಂತರದಲ್ಲಿ 7 ಮತ್ತು 8-ಸೀಟುಗಳ ವಿನ್ಯಾಸದಲ್ಲಿ ಮುಂಭಾಗದ ಪ್ರತ್ಯೇಕ ಸೀಟುಗಳು ಮತ್ತು ಸ್ಲೈಡ್ ಮತ್ತು ರಿಕ್ಲೈನ್ ಫಂಕ್ಷನ್ ನೊಂದಿಗೆ ಬಂದಿದೆ.

Toyota Innova Crysta

ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ VX ರೂಪಾಂತರದಲ್ಲಿ ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, 6-ಸ್ಪೀಕರ್‌ಗಳು, ಸೀಟ್ ಬ್ಯಾಕ್ ಟೇಬಲ್, ಕ್ರೂಸ್ ಕಂಟ್ರೋಲ್, ಸ್ಪೀಡ್ & ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, 1 USB ಫಾಸ್ಟ್ ಚಾರ್ಜಿಂಗ್ ಪವರ್, MID ಮುಂಭಾಗದ ಕ್ಲಿಯರೆನ್ಸ್ ಸೋನಾರ್, Isofix X2 ಮುಂತಾದ ಫೀಚರ್ಸ್ ಗಳನ್ನು ಹೊಂದಿವೆ.

ಇದರೊಂದಿಗೆ ಟೆಥರ್ ಆಂಕರ್, ಸೈರನ್‌ನೊಂದಿಗೆ ಆಂಟಿ-ಥೆಫ್ಟ್ ಸಿಸ್ಟಮ್ ಇಮೊಬಿಲೈಸರ್, ಅಲ್ಟ್ರಾಸಾನಿಕ್ ಮತ್ತು ಗ್ಲಾಸ್ ಬ್ರೇಕ್ ಸೆನ್ಸಾರ್, TFT MID ಯುನಿಟ್, ಸಿಲ್ವರ್ ಮತ್ತು ವುಡ್ ಫಿನಿಶ್‌ನೊಂದಿಗೆ ಯುರೆಥೇನ್‌ನೊಂದಿಗೆ ಸ್ಟೀರಿಂಗ್, ಆಟೋಮ್ಯಾಟಿಕ್ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಎಲ್ಇಡಿ ಕ್ಲಿಯರೆನ್ಸ್ ಲ್ಯಾಂಪ್ ಅನ್ನು ಹೊಂದಿದೆ. ಈ ಎಂಪಿವಿಯು ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಅವಂತ್-ಗಾರ್ಡ್ ಕಂಚು, ಸಿಲ್ವರ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

More from DriveSpark

Article Published On: Thursday, January 16, 2025, 8:30 [IST]
English summary
Toyota innova crysta mpv prices hikes details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+