Toyota: ಇನ್ನೋವಾ ಎಲೆಕ್ಟ್ರಿಕ್ ಕಾರಿನ ಮೊದಲ ಪ್ರದರ್ಶನ: ಶೀಘ್ರದಲ್ಲೆ ಬಿಡುಗಡೆಗೆ... ವಿಶೇಷತೆಗಳೇನು?
ಭಾರತದಂತೆಯೇ ವಿಶ್ವದ ಹಲವು ದೇಶಗಳಲ್ಲಿ ವಿವಿಧ ಹೆಸರುಗಳಲ್ಲಿ ಟೊಯೋಟಾ ಇನ್ನೋವಾ ಮಾರಾಟ ಕಾಣುತ್ತಿದೆ. ಇತ್ತೀಚೆಗೆ ನಡೆದ ಐಐಎಂಎಸ್ 2025 (ಇಂಡೋನೇಷ್ಯಾ ಇಂಟರ್ನ್ಯಾಷನಲ್ ಮೋಟಾರ್ ಶೋ)ನಲ್ಲಿ ಟೊಯೊಟಾ ಕಂಪನಿಯು ಕಿಜಾಂಗ್ ಇನ್ನೋವಾ ಬಿಇವಿ ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದೆ. ಇದು ಸಂಪೂರ್ಣ ಎಲೆಕ್ಟ್ರಿಕ್ ಕಾರಾಗಿದ್ದು, ಇದು ಇಂಡೋನೇಷ್ಯಾದಲ್ಲಿ ಮುಂಬರುವ ವರ್ಷಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿಲ್ಲವಾದರೂ, ಭವಿಷ್ಯದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾದರೆ ಖಂಡಿತ ಇದನ್ನು ಬಿಡುಗಡೆ ಮಾಡಬಹುದು.
ಎಲೆಕ್ಟ್ರಿಕ್ ಇನ್ನೋವಾ ವಿಶೆಷತೆಗಳು: 7- ಸೀಟರ್ ಟೊಯೊಟಾ ಇನ್ನೋವಾ ಬಿಇವಿ ಕಾನ್ಸೆಪ್ಟ್ ಮಾಡಲ್, 59.3 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಬ್ಯಾಟರಿಯನ್ನು ಫ್ಲೋರ್ ಬೋರ್ಡ್‌ನಲ್ಲಿ ಅನೇಕ ಸಣ್ಣ ಮಾಡ್ಯೂಲ್‌ಗಳೊಂದಿಗೆ ಅಳವಡಿಸಲಾಗಿದೆ. ಜೊತೆಗೆ ಮುಂಭಾಗದಲ್ಲಿ, ಎಂಜಿನ್ ಬೇಯಲ್ಲಿ ದೊಡ್ಡ ಘಟಕವನ್ನು ಸ್ಥಾಪಿಸಲಾಗಿದೆ.

ವಾಹನದ ಹಿಂಭಾಗದಲ್ಲಿ ಚಾರ್ಜರ್ ಮತ್ತು ಇನ್ವರ್ಟರ್ ಅನ್ನು ಅಳವಡಿಸಲಾಗಿದ್ದು, ಇನ್ನೋವಾ ಬಿಇವಿ ಟೈಪ್ -2 ಎಸಿ ಮತ್ತು ಸಿಸಿಎಸ್-2 ಡಿಸಿ ಚಾರ್ಜರ್‌ಗಳನ್ನು ಸಪೋರ್ಟ್ ಮಾಡುತ್ತದೆ. ಒಮ್ಮೆ ಚಾರ್ಜ್ ಮಾಡಿದ್ರೆ ಎಷ್ಟು ದೂರ ಓಡಬಲ್ಲದು ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇದನ್ನು ಮೊದಲು ಎಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ಭಾರತದಲ್ಲಿ ಅದರ ಬಿಡುಗಡೆಯ ಸಾಧ್ಯತೆಗಳ ಬಗ್ಗೆ ಮುಂಬರುವ ದಿನಗಳಲ್ಲಿ ಮಾಹಿತಿ ಹೊರಬರಬಹುದು.
ಇಂಟೀರಿಯರ್ ಬಗ್ಗೆ ಹೇಳುವುದಾದ್ರೆ, ವಿಶಾಲವಾದ ಕ್ಯಾಬಿನ್‌ನಲ್ಲಿ ಸುಧಾರಿತ ವೈಶಿಷ್ಟ್ಯಗಳನ್ನು ನೀಡಲಾಗಿದೆ. ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಎಂಐಡಿಯೊಂದಿಗೆ ಅನಲಾಗ್ ಡಯಲ್‌ಗಳನ್ನು ನೀಡಲಾಗಿದೆ. ಲೆದರ್ಡ್ ಸ್ಟೀರಿಂಗ್ ವೀಲ್ ಜೊತೆಗೆ ಮೌಂಟೆಡ್ ಬಟನ್‌ಗಳು, ಆಂಬಿಯೆಂಟ್ ಲೈಟಿಂಗ್, ವೈರ್ಲೆಸ್ ಫೋನ್ ಚಾರ್ಜರ್, ಡ್ಯುಯಲ್ ಟೋನ್ ಇಂಟಿರಿಯರ್ ಮತ್ತು ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳು ಪ್ರಮುಖ ಹೈಲೈಟ್‌ಗಳಾಗಿವೆ.

2ನೇ ಸಾಲಿನ ಪ್ರಯಾಣಿಕರಿಗೆ, ಮೀಸಲಾದ ಹಿಂಭಾಗದ ಸೀಟ್‌ಗಳಿಗೆ ಎಂಟರ್‌ಟೈನ್ಮೆಂಟ್ ಸ್ಕ್ರೀನ್‌ಗಳನ್ನು ಒದಗಿಸಲಾಗಿದೆ. ಹೊರಗಿನ ಡಿಸೈನ್ ಬಗ್ಗೆ ಹೇಳುವುದಾದ್ರೆ, ಸ್ಪೋರ್ಟಿಯರ್ ಹೆಡ್‌ಲ್ಯಾಂಪ್ ಮತ್ತು ಡಿಆರ್‌ಎಲ್, ಟಾಪ್ ಮೌಂಟೆಡ್ ಎಲ್‌ಇಡಿ ಸ್ಟ್ರಿಪ್, ಕ್ಲೋಸ್ಡ್-ಆಫ್ ಗ್ರಿಲ್ ಮತ್ತು ಹೊಸ ಬಂಪರ್‌ನೊಂದಿಗೆ ಇನ್ನೋವಾ ಬಿಇವಿ ಕಾನ್ಸೆಪ್ಟ್ ಮಾದರಿಯು ಇಂಡೋನೇಷ್ಯಾದಲ್ಲಿ ನೀಡಲಾಗುವ ಡೀಸೆಲ್ ಕಿಜಾಂಗ್ ಇನ್ನೋವಾದಂತೆಯೇ ಕಾಣುತ್ತದೆ.
ಮಲ್ಟಿ-ಕಲರ್ ಗ್ರಾಫಿಕ್ಸ್ ಸೇರ್ಪಡೆಯೊಂದಿಗೆ ಸೈಡ್ ಪ್ರೊಫೈಲ್ ಅನ್ನು ಮತ್ತಷ್ಟು ಆಕರ್ಷಕ ಲುಕ್ ನೀಡಲಾಗಿದೆ. ಸ್ಪೋರ್ಟಿ 16-ಇಂಚಿನ ಅಲಾಯ್ ವೀಲ್‌ಗಳು, ಕ್ರೋಮ್ ಫಿನಿಶ್ ನಲ್ಲಿ ಸಾಂಪ್ರದಾಯಿಕ ಡೋರ್ ಹ್ಯಾಂಡಲ್‌ಗಳು ಮತ್ತು ಇಂಟಿಗ್ರೇಟೆಡ್ ಇಂಡಿಕೇಟರ್‌ಗಳೊಂದಿಗೆ ಡ್ಯುಯಲ್-ಟೋನ್ ಒಆರ್‌ವಿಎಂಗಳು ಇತರ ಪ್ರಮುಖ ಹೈಲೈಟ್ ಗಳಾಗಿವೆ.
ಟೊಯೊಟಾ ಐಸಿಇ ಮತ್ತು ಹೈಬ್ರಿಡ್‌ಗಳ ಮೇಲೆ ಗಮನ ಹರಿಸುವುದನ್ನು ಮುಂದುವರಿಸುತ್ತಿದ್ದು, ಜೈವಿಕ ಇಂಧನಗಳು ಮತ್ತು ಹೈಡ್ರೋಜನ್ ನಂತಹ ಇತರ ಹಸಿರು ಇಂಧನ ಆಯ್ಕೆಗಳ ಬಗ್ಗೆಯೂ ಕೆಲಸ ಮಾಡುತ್ತಿದೆ. ಭಾರತದಲ್ಲಿ, ಇನ್ನೋವಾ ಪ್ರಸ್ತುತ ಪೆಟ್ರೋಲ್ ಮತ್ತು ಸ್ಟ್ರಾಂಗ್ ಹೈಬ್ರಿಡ್‌ಗಳಲ್ಲಿ (ಹೈಕ್ರಾಸ್) ಡೀಸೆಲ್ (ಕ್ರಿಸ್ಟಾ) ಜೊತೆಗೆ ಲಭ್ಯವಿದೆ. ಈಗ ಸಂಪೂರ್ಣ ಎಲೆಕ್ಟ್ರಿಕ್ ಮಾದರಿ ಕೂಡ ಎಂಟ್ರಿಕೊಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








