Toyota: ಎರಡು ಕುಟುಂಬ ಪ್ರಯಾಣಿಸಬಹುದು... 23 ಕಿ.ಮೀ ಮೈಲೇಜ್ ನೀಡುವ ಬೆಸ್ಟ್ 8-ಸೀಟರ್ ಕಾರು!

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota innova hycross) ದೇಶದ ಅತ್ಯಂತ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ. ಇದರ ವಿಶಾಲತೆ, ಪ್ರೀಮಿಯಂ ಕ್ಯಾಬಿನ್ ಮತ್ತು ಪ್ರಾಯೋಗಿಕತೆಗೆ ಹೆಸರುವಾಸಿಯಾಗಿದೆ. ಈ ಬೃಹತ್ ಕಾರು 7 ಹಾಗೂ 8 ಆಸನಗಳ ಸಂರಚನೆಯಲ್ಲಿ ಖರೀದಿಗೆ ದೊರೆಯಲಿದೆ. ಇನ್ನೋವಾ ಹೈಕ್ರಾಸ್ ಅನ್ನು 10 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದರ ಬೇಸ್‌ ವೇರಿಯೆಂಟ್ GX 7STR ಮತ್ತು ಟಾಪ್ ವೇರಿಯೆಂಟ್ ZX (0) ಹೈಬ್ರಿಡ್ ಆಗಿದೆ. ಬೆಲೆಗಳು 19,94,000 ರೂ.ಗಳಿಂದ ಪ್ರಾರಂಭವಾಗಿ 31,34,000 ರೂ.ಗಳವರೆಗೆ (ಎಕ್ಸ್‌ ಶೋರೂಂ) ಹೋಗುತ್ತದೆ.

ಟೊಯೋಟಾ ಇನ್ನೋವಾ ಹೈಕ್ರಾಸ್ 8-ಸೀಟರ್ (Toyota Innova Hycross 8 - Seater) ಆವೃತ್ತಿಯ ಬೆಲೆಯು 19,99,000 ರೂ.ಗಳಿಂದ ಪ್ರಾರಂಭವಾದರೆ, 8-ಸೀಟರ್ ಕಾನ್ಫಿಗರೇಶನ್ ಹೊಂದಿರುವ ಹೈಬ್ರಿಡ್ ಮಾದರಿಗಳು 26,36,000 ರೂ.ಗಳಿಂದ ಪ್ರಾರಂಭವಾಗುತ್ತವೆ (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ). ಟೊಯೋಟಾ ಇನ್ನೋವಾ ಹೈಕ್ರಾಸ್ ಸಿವಿಟಿಯೊಂದಿಗೆ 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು ಸಿವಿಟಿಯೊಂದಿಗೆ 2.0 ಲೀಟರ್ ನಾನ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

toyota-innova-hycross-8-seater-variant-details

ಇದರ 2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟೋಲ್ ಎಂಜಿನ್ 175 ಪಿಎಸ್ ಪವರ್ ಮತ್ತು 209 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 2-ಲೀಟರ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) 186 ಪಿಎಸ್ ಪವರ್ ಹಾಗೂ 188 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಸಿವಿಟಿ ಹಾಗೂ ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಹೈಬ್ರಿಡ್ ಆವೃತ್ತಿಯು 23.24 ಕಿಮೀ/ಲೀ ಮೈಲೇಜ್ ನೀಡುತ್ತದೆ. ಟೊಯೊಟಾ 9.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ ಎಂದು ಹೇಳಿಕೊಂಡಿದೆ. ಸ್ಪೋರ್ಟ್, ನಾರ್ಮಲ್ ಮತ್ತು ಇಕೋ ಎಂಬ ಡ್ರೈವ್ ಮೋಡ್‌ಗಳೂ ಇವೆ. ಪ್ರಮುಖ ವೈಶಿಷ್ಟ್ಯಗಳಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಸಹ ಹೊಂದಿದೆ.

toyota-innova-hycross-8-seater-variant-details

7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ADAS ನಂತಹ ಆಧುನಿಕ ಫೀಚರ್ಸ್, ಚಾಲಕನ ಮುಂಭಾಗದಲ್ಲಿ 7 ಇಂಚಿನ ಅನಲಾಗ್ ಮತ್ತು ಡಿಜಿಟಲ್ ಬಣ್ಣದ ಎಂಐಡಿ ಸಾಕಷ್ಟು ಮಾಹಿತಿಯೊಂದಿಗೆ ಅಚ್ಚುಕಟ್ಟಾದ ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ವಿನ್ಯಾಸ, ಫೀಚರ್ಸ್ ಮತ್ತು ಸ್ಥಳಾವಕಾಶವು ಹೈಕ್ರಾಸ್‌ನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಹೈಕ್ರಾಸ್ ಸುರಕ್ಷತೆ ವಿಚಾರಕ್ಕೆ ಬಂದರೆ ಇದರಲ್ಲಿ ಆರು ಏರ್ ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ಟಿಪಿಎಂಎಸ್, ಎಡಿಎಎಸ್ ಸೂಟ್ ಅನ್ನು ಒಳಗೊಂಡಿದೆ, ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್ ಸೇರಿವೆ.

toyota-innova-hycross-8-seater-variant-details

ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಹೈಬ್ರಿಡ್ ರೂಪಾಂತರವು 4755 ಎಂಎಂ ಉದ್ದ, 1845 ಎಂಎಂ ಅಗಲ, 1795 ಎಂಎಂ ಎತ್ತರ ಮತ್ತು 2850 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ನೂತನ ಇನ್ನೋವಾ ಹೈಕ್ರಾಸ್ ಕಾರು ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಪರ್ಲ್ ಮತ್ತು ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 20, 2025, 13:12 [IST]
English summary
Toyota innova hycross 8 seater variant details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+