8-ಸೀಟರ್.. ಆನೆಯಂತಿರುವ ಟೊಯೊಟಾ ಇನ್ನೋವಾ ಇಕ್ರಾಸ್‌ಗೆ ಫುಲ್ ಡಿಮ್ಯಾಂಡ್, ಭಾರೀ ಸಂಖ್ಯೆಯಲ್ಲಿ ಮಾರಾಟ!
ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಮುಖ ಎಂಪಿವಿಯಾಗಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈ ಜೂನ್‌ನಲ್ಲೂ ಇದೇ 'ಇನ್ನೋವಾ ಹೈಕ್ರಾಸ್' ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಒಟ್ಟು 5746 ಯುನಿಟ್‌ಗಳನ್ನು ಮಾರಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 17.46% ಏರಿಕೆಯಾಗಿದೆ. 2024ರ ಇದೇ ಅವಧಿಯಲ್ಲಿ 4,892 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು.
ಈ ವರ್ಷದ ಮೊದಲ 5 ತಿಂಗಳಲ್ಲೂ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಯು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದೆ. ಬರೋಬ್ಬರಿ 44,666 ಯುನಿಟ್‌ಗಳನ್ನುಮಾರಾಟ ಮಾಡಲಾಗಿದೆ. ಇದನ್ನು ಲೆಕ್ಕ ಹಾಕಿದಾಗ ಪ್ರತಿ ತಿಂಗಳು ಸರಾಸರಿ 8,933 ಯುನಿಟ್ 'ಇನ್ನೋವಾ ಹೈಕ್ರಾಸ್' ಕಾರುಗಳನ್ನು ಮಾರಾಟ ಮಾಡಲಾಗಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ವಿಶೇಷತೆಗಳೇನು:
ಈ ಎಂಪಿವಿ ಕೊಂಚ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದ್ದು, ದುಡಿಯುವ ಹಾಗೂ ಶ್ರೀಮಂತ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ಇದು ರೂ.19.94 ಲಕ್ಷದಿಂದ ರೂ.31.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಜಿಎಕ್ಸ್, ಜಿಎಕ್ಸ್ (ಒ), ವಿಎಕ್ಸ್, ವಿಎಕ್ಸ್ (ಒ), ಜಡ್ಎಕ್ಸ್ ಹಾಗೂ ಜಡ್ಎಕ್ಸ್ (ಒ) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ನೂತನ ಇನ್ನೋವಾ ಹೈಕ್ರಾಸ್ ಎಂಪಿವಿ ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಅಲಾಯ್ - ವೀಲ್‌ಗಳನ್ನು ಒಳಗೊಂಡಿದೆ. ಅಟಿಟ್ಯೂಡ್ ಬ್ಲ್ಯಾಕ್ ಮೈಕಾ, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ.

ಇದು ದೊಡ್ಡ ಗಾತ್ರದ ಕಾರಾಗಿದ್ದು, 4755 ಎಂಎಂ ಉದ್ದ, 1845 ಎಂಎಂ ಅಗಲ & 1795 ಎತ್ತರವು ಇದೆ. ಹಾಗೆಯೇ 185 ಗ್ರೌಂಡ್ ಕ್ಲಿಯರೆನ್ಸ್ ಮತ್ತು 2850 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 7/ 8 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು 300 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಈ ಎಂಪಿವಿ ಹೆಚ್ಚು ಶಕ್ತಿಯುತವಾದ ಎರಡು ಪವರ್‌ಟ್ರೇನ್‌ನ್ನು ಪಡೆದಿದೆ. 2.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & 2.0-ಲೀಟರ್ ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. ಸಾಮಾನ್ಯ ಬೈಕ್‌ಗಳಂತೆ 16.13 ರಿಂದ 23.24 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ.

ಹೊಸ ಇನ್ನೋವಾ ಹೈಕ್ರಾಸ್ ಎಂಪಿವಿ ಕ್ಯಾಬಿನ್ ವಿನ್ಯಾಸವು ತುಂಬಾ ಚೆನ್ನಾಗಿದೆ. ಅದಕ್ಕೆ ಅನುಗುಣವಾಗಿ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬಹುಮುಖ್ಯವಾಗಿ 10.1-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿರುವ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, 9ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಡುಯಲ್ ಜೋನ್ ಆಟೋ ಎಸಿ ಹಾಗೂ ರೇರ್ ಎಸಿ ವೆಂಟ್‌ಗಳನ್ನು ಒಳಗೊಂಡಿದೆ.
ನೂತನ ಎಂಪಿವಿ ಸುರಕ್ಷಿತ ಕಾರಾಗಿಯೂ ಹೊರಹೊಮ್ಮಿದೆ. ಇದು 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಸೀಟ್‌ಬೆಲ್ಟ್ ರಿಮೆಂಡರ್ಸ್, ಹಿಲ್ ಸ್ಟಾರ್ಟ್ ಅಸಿಸ್ಟ್ & 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








