ಮಾರಾಟದಲ್ಲಿ ಬಿರುಗಾಳಿ: ಯಾವುದೇ ಕಾರು ಬಂದರೂ ಟೊಯೊಟಾ ಇನೋವಾ ಅಲುಗಾಡಿಸಲು ಸಾಧ್ಯವಾಗಿಲ್ಲ!

ಟೊಯೊಟಾ ಇನೋವಾ (Toyota Innova) ಕಾರು ಬಿಡುಗಡೆಯಾದಗಿನಿಂದಲೂ ಬಹುಬೇಡಿಕೆಯ ಎಂಪಿವಿಯಾಗಿದೆ. ಈ ಕಾರಿಗೆ ಸರಿಯಾದ ಪೈಪೋಟಿಗೆ ಯಾವುದು ಇಲ್ಲ ಎಂದು ಹೇಳಬಹುದು. ಟೋಯೊಟಾ ಇನೋವಾ ಲಕ್ಷಾಂತರ ಕಿ.ಮೀ ಚಲಿಸಿದರೂ ಎಂಜಿನ್ ಉತ್ತಮ ಸ್ಥಿತಿಯಲ್ಲಿರುತ್ತದೆ. ಅಲ್ಲದೇ ಟೊಯೊಟಾ ಇನೋವಾ ಉತ್ತಮ ಫ್ಯಾಮಿಲಿ ಕಾರ್ ಆಗಿದೆ. ನಂತರದಲ್ಲಿ ಬಂದ ಇನೋವಾ ಕ್ರಿಸ್ಟಾ ಎಂಪಿವಿ ಕೂಡ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರ ನಂತರ ಬಂದ ಮಾದರಿ ಹೈಕ್ರಾಸ್ ಆಗಿದೆ. ಇನ್ನೋವಾ ಹೈಕ್ರಾಸ್ ಕೂಡ ಭರ್ಜರಿ ಮಾರಾಟವಾಗಿ ಹೊಸ ಇತಿಹಾಸ ನಿರ್ಮಿಸುತ್ತಿದೆ.

ಟೊಯೊಟಾ ಕಂಪನಿಯು ಕಳೆದ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. 2024ರ ಡಿಸೆಂಬರ್ ತಿಂಗಳಿನಲ್ಲಿ ಟೊಯೊಟಾ ಇನೋವಾ ಮತ್ತು ಹೈಕ್ರಾಸ್ ಮಾದರಿಗಳ 9,700 ಯುನಿಟ್ ಗಳು ಮಾರಾಟವಾಗಿವೆ. ಇನ್ನು 2023ರ ಡಿಸೆಂಬರ್ ತಿಂಗಳಿನಲ್ಲಿ ಟೊಯೊಟಾ ಇನೋವಾ ಮತ್ತು ಹೈಕ್ರಾಸ್ ಮಾದರಿಗಳ 7,832 ಯುನಿಟ್ ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.24 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

Toyota Innova

ನೂತನ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಎಂಪಿವಿಯನ್ನು 2022ರ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಈ ಕಾರನ್ನು ಖರೀದಿಸುತ್ತಿದ್ದಾರೆ. ಇನ್ನೋವಾ ಹೈಕ್ರಾಸ್ ಮಾರಾಟಕ್ಕೆ ಬಂದು ಎರಡು ವರ್ಷದಲ್ಲೇ 1 ಲಕ್ಷಕ್ಕೂ ಹೆಚ್ಚು ಯುನಿಟ್ ಕಾರುಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ದೊಡ್ಡ ಮೈಲಿಗಲ್ಲೊಂದನ್ನು ಸಾಧಿಸಲಾಗಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಮಾದರಿಯು ಜಿಎಕ್ಸ್, ಜಿಎಕ್ಸ್ (ಒ), ವಿಎಕ್ಸ್, ವಿಎಕ್ಸ್ (ಒ), ಝಡ್ಎಕ್ಸ್ ಮತ್ತು ಝಡ್ಎಕ್ಸ್ (ಒ) ಎಂಬ ರೂಪಾಂತರಗಳನ್ನು ಪಡೆದಿದೆ. ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್ & ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಈ ಎಂಪಿವಿ ಎರಡು ರೂಪದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ.

Toyota Innova

ಇದರ 2-ಲೀಟರ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್ 186 ಪಿಎಸ್ ಪವರ್ ಉತ್ಪಾದಿಸುತ್ತದೆ. ಇ-ಸಿವಿಟಿ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. ಮತ್ತೊಂದು 2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 175 ಪಿಎಸ್ ಪವರ್ ಮತ್ತು 209 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಹೊಸ ಇನ್ನೋವಾ ಹೈಕ್ರಾಸ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಫ್ರಂಟ್ - ರೇರ್ ಪಾರ್ಕಿಂಗ್ ಸೆನ್ಸರ್ಸ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

Toyota Innova

ಇನ್ನು ಟೂಯೊಟಾ ಇನೋವಾ ಕ್ರಿಸ್ಟಾ (Toyota Innova Crysta) ಎಂಪಿವಿ G, GX, GX+, VX ಮತ್ತು ZX ಎಂಬ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಆರ್‌ಡಿಇ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸುತ್ತದೆ ಎಂದು ಕಾರು ತಯಾರಕರು ಖಚಿತಪಡಿಸಿದ್ದಾರೆ.

ಈ ಎಂಜಿನ್ 147.9 ಬಿಹೆಚ್‍ಪಿ ಪವರ್ ಮತ್ತು 343 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನೋವಾ ಕ್ರಿಸ್ಟಾ ಎಂಪಿವಿಯು ಇಕೋ ಮತ್ತು ಪವರ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಒಳಗೊಂಡಿದೆ. ಇನೋವಾ ಕ್ರಿಸ್ಟಾ ಕಾರಿನ ZX ರೂಪಾಂತರದಲ್ಲಿ 7-ಸೀಟುಗಳ ಲೇಔಟ್‌ನಲ್ಲಿ 8-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ಹೊಂದಿದೆ.

More from DriveSpark

Article Published On: Wednesday, January 15, 2025, 13:29 [IST]
English summary
Toyota innova sales in december 2024 details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+