ಭಾರತದಲ್ಲಿ ಪ್ರತಿಷ್ಠಿತ ಲ್ಯಾಂಡ್ ಕ್ರೂಸರ್ 300 ಬುಕಿಂಗ್ಸ್ ಪ್ರಾರಂಭಿಸಿದ ಟೊಯೋಟಾ! ವಿಶೇಷತೆಗಳೇನು?
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೋಟಾ (Toyota) ಇಂದು ಪ್ರತಿಷ್ಠೆ, ಪವರ್ ಮತ್ತು ದೃಢವಾದ ಸಾಮರ್ಥ್ಯದ ಐಕಾನ್ ಆಗಿರುವ ಹೊಸ ಲ್ಯಾಂಡ್ ಕ್ರೂಸರ್ 300 (Land Cruiser 300) ಎಸ್‌ಯುವಿಯ ಬುಕಿಂಗ್ ಪ್ರಾರಂಭಿಸಿದೆ. 70 ವರ್ಷಗಳಿಗೂ ಹೆಚ್ಚಿನ ಪರಂಪರೆಯ ಮೇಲೆ ನಿರ್ಮಿಸಲಾದ ಲ್ಯಾಂಡ್ ಕ್ರೂಸರ್ 300, ಟೊಯೋಟಾದ ಎಂಜಿನಿಯರಿಂಗ್ ಶ್ರೇಷ್ಠತೆಯ ಅಂತಿಮ ಅಭಿವ್ಯಕ್ತಿಯಾಗಿದೆ. ಐಷಾರಾಮಿ ಅನ್ವೇಷಕರು ಮತ್ತು ಆಫ್ - ರೋಡ್ ಉತ್ಸಾಹಿಗಳ ನಿರೀಕ್ಷೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿರುವ ಜನಪ್ರಿಯ ಎಸ್‌ಯುವಿ ಇದಾಗಿದೆ.
ಅಪ್ರತಿಮ ವಿಶ್ವಾಸಾರ್ಹತೆ, ಅತ್ಯುನ್ನತ ಉಪಸ್ಥಿತಿ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯಾದ ಲ್ಯಾಂಡ್ ಕ್ರೂಸರ್ 300 ಟೊಯೋಟಾದ ಜಾಗತಿಕ ಶ್ರೇಣಿಯ ಪ್ರಮುಖ SUV ಆಗಿದೆ. ಇತ್ತೀಚಿನ ಲ್ಯಾಂಡ್ ಕ್ರೂಸರ್ 300 ಹೊಸ ಪ್ಲಾಟ್‌ಫಾರ್ಮ್, ಸುಧಾರಿತ ಪವರ್‌ಟ್ರೇನ್, ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಐಷಾರಾಮಿ ಒಳಾಂಗಣವನ್ನು ಹೊಂದಿದೆ.

ಇದು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗುವ ಮಾದರಿಯಾಗಿದ್ದು, ಸಂಪೂರ್ಣವಾಗಿ ನಿರ್ಮಿಸಲಾದ ಘಟಕ (CBU) ವಾಗಿ, ZX ಮತ್ತು GR-S ಎಂಬ ಎರಡು ವಿಭಿನ್ನ ಶ್ರೇಣಿಗಳಲ್ಲಿ ಲಭ್ಯವಿದೆ. ಇದರ ಜೊತೆಗೆ GR ಸ್ಪೋರ್ಟ್ ಬ್ರ್ಯಾಂಡಿಂಗ್‌ನೊಂದಿಗೆ ಹೊಸ GR-S ದರ್ಜೆಯನ್ನು ಪರಿಚಯಿಸಲಾಗುತ್ತಿದೆ. ತೀವ್ರ ಪರಿಸ್ಥಿತಿಗಳನ್ನು ಸುಲಭವಾಗಿ ನಿಭಾಯಿಸಲು ಟೊಯೋಟಾದ TNGA-F ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.
ಉತ್ತಮ ಬಿಗಿತ, ಚುರುಕುತನ ಮತ್ತು ಆಫ್-ರೋಡ್ ಸಾಮರ್ಥ್ಯಕ್ಕಾಗಿ ಆಫ್-ರೋಡ್-ಟ್ಯೂನ್ಡ್ ಸಸ್ಪೆನ್ಷನ್ ಹೊಂದಿದ್ದು, ಡಿಫರೆನ್ಷಿಯಲ್ ಲಾಕ್‌ಗಳು ಮತ್ತು ಸುಧಾರಿತ ಶಾಕ್ ಅಬ್ಸಾರ್ಬರ್‌ಗಳನ್ನು ಒಳಗೊಂಡಿದೆ. ಇತ್ತೀಚಿನ ಟೊಯೋಟಾ ಸೇಫ್ಟಿ ಸೆನ್ಸ್ 3.0 (TSS 3.0) ಸುಧಾರಿತ ಚಾಲಕ ಸಹಾಯ ವೈಶಿಷ್ಟ್ಯಗಳೊಂದಿಗೆ, ಅತ್ಯುತ್ತಮ ದರ್ಜೆಯ ಸುರಕ್ಷತೆ ಮತ್ತು ಅನುಕೂಲತೆಯನ್ನು ನೀಡುತ್ತದೆ.

ಹೊಳೆಯುವ ಗ್ರಿಲ್, ಸಿಗ್ನೇಚರ್ LED ಲೈಟಿಂಗ್ ಮತ್ತು ಹೆಚ್ಚು ಏರೋಡೈನಮಿಕ್ ಸಿಲೂಯೆಟ್‌ನೊಂದಿಗೆ ಮಸ್ಕುಲರ್ ವಿನ್ಯಾಸವನ್ನು ಹೊಂದಿದೆ. ಟ್ವಿನ್-ಟರ್ಬೊ V6 ಎಂಜಿನ್‌ನಿಂದ ಚಾಲಿತವಾಗಿರುವ ಈ ಕಾರು, ಡೀಸೆಲ್‌ನಲ್ಲಿ ಲಭ್ಯವಿದೆ. ಗರಿಷ್ಠ 227kW ಪವರ್ ಹಾಗೂ 700 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.
10-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಎಲ್ಲಾ ಭೂಪ್ರದೇಶಗಳಲ್ಲಿ ಉತ್ತಮ ಟ್ರಾಕ್ಷನ್‌ಗಾಗಿ ಟೊಯೋಟಾದ AWD (ಆಲ್ ವೀಲ್ ಡ್ರೈವ್) ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ (AIM) ನೊಂದಿಗೆ ಸಂಯೋಜಿಸಲ್ಪಟ್ಟ ಪೂರ್ಣ-ಸಮಯದ 4WD ವ್ಯವಸ್ಥೆ ಹೊಂದಿದೆ. ಇದು ಮಲ್ಟಿ-ಟೆರೈನ್ ಸೆಲೆಕ್ಟ್ (MTS) ಮತ್ತು ಮಲ್ಟಿ-ಟೆರೈನ್ ಮಾನಿಟರ್, ತೀವ್ರ ಪರಿಸ್ಥಿತಿಗಳಲ್ಲಿ ಓಡಿಸಲು ನೈಜ-ಸಮಯದ ಸಹಾಯವನ್ನು ಒದಗಿಸುತ್ತದೆ.
ಫೀಚರ್ಸ್: ವಿಶಾಲ ಮತ್ತು ಪ್ರೀಮಿಯಂ ಕ್ಯಾಬಿನ್, ಉತ್ತಮ ಗುಣಮಟ್ಟದ ಲೆದರ್‌ನೊಂದಿಗೆ ಇಂಟೀರಿಯರ್ ಅಲಂಕರಿಸಲ್ಪಟ್ಟಿದೆ. 4-ಝೋನ್ ಕ್ಲೈಮೆಟ್ ಕಂಟ್ರೋಲ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಸುಧಾರಿತ ನ್ಯಾವಿಗೇಷನ್ ಸಿಸ್ಟಮ್‌ನೊಂದಿಗೆ ಹೊಸ 31.24cm ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪವರ್-ಅಡ್ಜಸ್ಟಬಲ್ ಸ್ಟೀರಿಂಗ್ ಕಾಲಮ್ ನೀಡಲಾಗಿದೆ.
ಇವಿಷ್ಟೇ ಅಲ್ಲದೇ ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ ಸ್ಮಾರ್ಟ್ ಎಂಟ್ರಿ ಸಿಸ್ಟಮ್ ಟೊಯೋಟಾ ಐ-ಕನೆಕ್ಟ್ ಟೆಲಿಮ್ಯಾಟಿಕ್ಸ್ ಹಾಗೂ ಹೆಡ್-ಅಪ್ ಡಿಸ್ಪ್ಲೇ (HUD), ರಿಮೋಟ್ ಫಂಕ್ಷನ್ ಒಳಗೊಂಡಿದೆ. ಈ ಎಲ್ಲಾ ಪ್ಯಾಕೇಜ್‌ನೊಂದಿಗೆ ಹೊಸ ಲ್ಯಾಂಡ್ ಕ್ರೂಸರ್ 300 'ZX ಗ್ರೇಡ್' ರೂ. 2,31,00,000 ಎಕ್ಸ್-ಶೋರೂಂ ಮತ್ತು 'GR-S ಗ್ರೇಡ್' ಗೆ ರೂ. 2,41,00,000 ಎಕ್ಸ್-ಶೋರೂಂ ಬೆಲೆಯಿದೆ (ಎಕ್ಸ್-ಶೋರೂಂ ಮಟ್ಟದಲ್ಲಿ ದೇಶಾದ್ಯಂತ ಬೆಲೆಗಳು ಒಂದೇ ಆಗಿರುತ್ತವೆ).
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








