ಟೊಯೋಟಾ ಅಂದ್ರೆ ಭಾರತೀಯರಿಗೆ ಇಷ್ಟೊಂದು ಇಷ್ಟವೇ? ಮತ್ತೊಮ್ಮೆ ಧೂಳೆಬ್ಬಿಸಿದೆ TKM
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಮಾರಾಟದ ವೇಗವನ್ನು ಕಾಯ್ದುಕೊಂಡಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ ಕಾರುಗಳಿಗೆ ಹೋಲಿಸಿದರೆ ಶೇ 22 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ಮೇ ತಿಂಗಳಲ್ಲಿ ಕಂಪನಿಯು ಬರೋಬ್ಬರಿ 30,864 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಇದರ ದೇಶೀಯ ಮಾರಾಟದಲ್ಲಿ 29,280 ಯುನಿಟ್ ಕಾರುಗಳು ಮತ್ತು ರಫ್ತು ಮಾಡಿದ 1,584 ಯುನಿಟ್ ಕಾರುಗಳು ಸೇರಿವೆ. ಅಂದಹಾಗೆ ಕಳೆದ ವರ್ಷ ಇದೇ ಅವಧಿಯಲ್ಲಿ (ಮೇ 2024 ರಲ್ಲಿ) ಕಂಪನಿಯು 25,273 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.
2025 - 26 ರ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಕಂಪನಿಯು ಶೇ 27 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, 2024 - 25 ರ ಹಣಕಾಸು ವರ್ಷದಲ್ಲಿ ಮಾರಾಟವಾಗಿದ್ದ 45,767 ಯುನಿಟ್ ಕಾರುಗಳಿಗೆ ಹೋಲಿಸಿದರೆ ಈ ಬಾರಿ 58,188 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಟೊಯೋಟಾ ಫಾರ್ಚೂನರ್ ಮತ್ತು ಲೆಜೆಂಡರ್ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 3 ಲಕ್ಷ ಯುನಿಟ್ ವಾಹನಗಳು ಮಾರಾಟವಾಗಿವೆ. ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿವೆ. ಈ ಹೈ - ಪರ್ಫಾಮೆನ್ಸ್ ಆಫ್ ರೋಡ್ ಎಸ್‌ಯವಿಗಳು ತಮ್ಮ ಆಕರ್ಷಕ ಬೇಡಿಕೆಯನ್ನು ಉಳಿಸಿಕೊಂಡು ಮುನ್ನುಗ್ಗುತ್ತಿವೆ.
ಟೊಯೋಟಾ ಕಂಪನಿಯು ಇತ್ತೀಚೆಗೆ ತನ್ನ ಇನ್ನೋವಾ ಹೈಕ್ರಾಸ್ ಎಕ್ಸ್‌ಕ್ಲೂಸಿವ್ ಎಡಿಷನ್ ಅನ್ನು ಬಿಡುಗಡೆ ಮಾಡುವ ಮೂಲಕ MPV ಶ್ರೇಣಿಯನ್ನು ಹೆಚ್ಚಿಸಿದೆ. ಇದು ಕ್ಯುರೇಟೆಡ್ ಅಪ್‌ಗ್ರೇಡ್‌ಗಳನ್ನು ಒಳಗೊಂಡಿದೆ, ಇದರ ಹೈಬ್ರಿಡ್ ತಂತ್ರಜ್ಞಾನವು ಹೆಚ್ಚುವರಿ ಅತ್ಯಾಧುನಿಕತೆಯನ್ನು ತರುತ್ತದೆ. ಗ್ರಾಹಕರಿಂದ ಉತ್ಸಾಹಭರಿತ ಪ್ರತಿಕ್ರಿಯೆಯನ್ನು ಪಡೆದಿದೆ. ಇದು ಬಲವಾದ ಗ್ರಾಹಕರ ಮೆಚ್ಚುಗೆ ಮತ್ತು ಮಾರುಕಟ್ಟೆ ಆಕರ್ಷಣೆಯನ್ನು ಒತ್ತಿಹೇಳುತ್ತದೆ.

ಮಾರಾಟದ ಆವೇಗದ ಕುರಿತು ಮಾತನಾಡಿದ ಮಾರಾಟ-ಸೇವೆ-ಬಳಸಿದ ಕಾರು ವ್ಯವಹಾರದ ಉಪಾಧ್ಯಕ್ಷ ವರೀಂದರ್ ವಾಧ್ವಾ, ಮೇ ತಿಂಗಳಲ್ಲಿ, ನಾವು ಶೇ 22 ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದೇವೆ, ಇದು ನಮ್ಮ ಗ್ರಾಹಕರ ನಿರಂತರ ನಂಬಿಕೆ ಮತ್ತು ಬೆಂಬಲಕ್ಕೆ ಸಾಕ್ಷಿಯಾಗಿದೆ. ಇದಕ್ಕಾಗಿ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಮುಂಬರುವ ತಿಂಗಳುಗಳಲ್ಲಿ, ವಿಶೇಷವಾಗಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಉತ್ತಮ ಮಾರಾಟವನ್ನು ಕಾಣುವ ವಿಶ್ವಾಸದಲ್ಲಿದ್ದೇವೆ ಎಂದರು.
ಒಟ್ಟಾರೆ ಮಾರುಕಟ್ಟೆ ಪ್ರವೃತ್ತಿಗಳಿಗೆ ಅನುಗುಣವಾಗಿ, ನಮ್ಮ MPV ಮತ್ತು SUV ವಿಭಾಗಗಳು ಪ್ರಾಥಮಿಕ ಬೆಳವಣಿಗೆಯ ವಾಹನಗಳಾಗಿ ಮುಂದುವರೆದಿವೆ. ಇದು ವಿಶ್ವಾಸಾರ್ಹ ಮತ್ತು ಬಹುಮುಖ ಚಲನಶೀಲತೆ ಆಯ್ಕೆಗಳ ಕಡೆಗೆ ಗ್ರಾಹಕರ ಆದ್ಯತೆಯಲ್ಲಿ ಸ್ಪಷ್ಟ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಉಪಾಧ್ಯಕ್ಷ ವರೀಂದರ್ ವಾಧ್ವಾ ಹೇಳಿದರು.

ಏಪ್ರಿಲ್-ಮೇ ಹಣಕಾಸು ವರ್ಷ 2025-26 ರಲ್ಲಿ, MPV ಗಳು ಮತ್ತು SUV ಗಳ ಸಂಯೋಜಿತ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 34 ರಷ್ಟು ದೃಢವಾದ ಹೆಚ್ಚಳವನ್ನು ದಾಖಲಿಸಿದೆ. ಈ ವಿಭಾಗಗಳು ಬಲವಾದ ಮಾರಾಟವನ್ನು ಒತ್ತಿಹೇಳುತ್ತವೆ. ಇದನ್ನು ಬಲಪಡಿಸುತ್ತಾ, ಈ ತಿಂಗಳು ಟೊಯೋಟಾ ಫಾರ್ಚೂನರ್ ಮತ್ತು ಲೆಜೆಂಡರ್ ಒಂದು ಹೆಜ್ಜೆ ಮುಂದಿಡುವ ಮೂಲಕ ನಾವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದೇವೆ ವಾಧ್ವಾ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








