Toyota: ನವೀನ ವೈಶಿಷ್ಟ್ಯಗಳೊಂದಿಗೆ ಹೊಸ ಟೊಯೋಟಾ ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಇಂದು ತನ್ನ ಜನಪ್ರಿಯ ಎಸ್‌ಯುವಿ ಆಗಿರುವ ಅರ್ಬನ್ ಕ್ರೂಸರ್ ಹೈರೈಡರ್ (Urban Cruiser Hyryder) ನಲ್ಲಿ ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಸಲುವಾಗಿ ಹೊಸ ಫೀಚರ್‌ಗಳ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಇದೀಗ ಪರಿಚಯಿಸಿರುವ ಹೊಸ ಫೀಚರ್‌ಗಳು ಗ್ರಾಹಕರ ಆದ್ಯತೆಯನ್ನು ಪರಿಶೀಲಿಸಿ ನೀಡಲಾಗಿದೆ. ಗ್ರಾಹಕರ ಚಾಲನಾ ಅನುಭವವನ್ನು ಹೆಚ್ಚಿಸಲು ಮತ್ತು ವಿಕಸನಗೊಳ್ಳುತ್ತಿರುವ ಮಾರುಕಟ್ಟೆ ಪ್ರವೃತ್ತಿಗಳನ್ನು ಮನಗಂಡು ಹೊಸ ಅಪ್‌ಡೇಟ್‌ಗಳನ್ನು ಘೋಷಿಸಿರುವುದಾಗಿ ಟೊಯೋಟಾ ಕಂಪನಿ ಹೇಳಿದೆ.

ಅರ್ಬನ್ ಕ್ರೂಸರ್ ಹೈರೈಡರ್ ಭಾರತದ ಮೊದಲ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಎಸ್‌ಯುವಿ ಎಂದು ವ್ಯಾಪಕವಾಗಿ ಜನಪ್ರಿಯವಾಗುತ್ತಿದೆ. ಈಗಾಗಲೇ 1 ಲಕ್ಷ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳು ಮಾರಾಟವಾಗಿವೆ. ಇದು ತನ್ನ ನವೀನ ತಂತ್ರಜ್ಞಾನ, ಅಸಾಧಾರಣ ಮೈಲೇಜ್, ಉತ್ತಮ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಚಾಲನಾ ಅನುಭವದೊಂದಿಗೆ ಭಾರತೀಯರ ಹೃದಯಗಳನ್ನು ಗೆದ್ದಿದೆ ಎಂದು ಕಂಪನಿ ಹೇಳಿದೆ.

toyota-urban-cruiser-hyryder-launched-with-new-updated-features

ಅರ್ಬನ್ ಕ್ರೂಸರ್ ಹೈರೈಡರ್‌ನ ಹೊಸ ಫೀಚರ್ ಅಪ್‌ಡೇಟ್‌ಗಳು: ಸುಧಾರಿತ ಸುರಕ್ಷತೆಗಾಗಿ ಎಲ್ಲಾ ವೇರಿಯೆಂಟ್‌ಗಳಲ್ಲಿ ರಚನಾತ್ಮಕ ವರ್ಧನೆಗಳನ್ನು ಪರಿಚಯಿಸಲಾಗಿದೆ. ವರ್ಧಿತ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ 6 ಏರ್‌ಬ್ಯಾಗ್‌ಗಳು ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿ ಇರಲಿವೆ. ಹೆಚ್ಚುವರಿ ಅನುಕೂಲತೆ ಮತ್ತು ಸುರಕ್ಷತೆಗಾಗಿ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (ಇಪಿಬಿ) ಅನ್ನು ಕೆಲವು ವೇರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸೇರಿಸಲಾಗಿದೆ.

ಸುಧಾರಿತ ಪರ್ಫಾಮೆನ್ಸ್‌ಗಾಗಿ ಈ ಹಿಂದಿದ್ದ AWD 5 - ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಬದಲಿಸಿ ಈಗ ಹೊಸ 6 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (6AT) ವೇರಿಯೆಂಟ್‌ನಲ್ಲಿ AWD (ಆಲ್‌ ವೀಲ್ ಡ್ರೈವ್) ನೀಡಲಾಗಿದೆ. ಸೌಕರ್ಯ ಮತ್ತು ಅನುಕೂಲತೆ ಹೆಚ್ಚಿಸಲು ವೈಯಕ್ತಿಕಗೊಳಿಸಿದ ಡ್ರೈವಿಂಗ್ ಪೊಸಿಷನ್‌ಗಾಗಿ 8-ವೇ ಹೊಂದಾಣಿಕೆ ಮಾಡಬಹುದಾದ ಪವರ್ ಡ್ರೈವರ್ ಸೀಟ್ ಈಗ ಟಾಪ್‌ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

toyota-urban-cruiser-hyryder-launched-with-new-updated-features

ಸುಧಾರಿತ ಪ್ರಯಾಣಿಕರ ಸೌಕರ್ಯಕ್ಕಾಗಿ ಉನ್ನತ ರೂಪಾಂತರಗಳಲ್ಲಿ ಹಿಂಭಾಗದ ಬಾಗಿಲಿನ ಸನ್‌ಶೇಡ್ ಅನ್ನು ಪರಿಚಯಿಸಲಾಗಿದೆ. ಉತ್ತಮ ರಿಯಲ್ - ಟೈಮ್ ಟೈರ್ ಪ್ರೆಷರ್ ಮಾಹಿತಿ ಪಡೆಯಲು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಹೆಚ್ಚಿನ ವೇರಿಯೆಂಟ್‌ಗಳಲ್ಲಿ ಪರಿಚಯಿಸಲಾಗಿದೆ. ಪ್ರೀಮಿಯಂ ಕ್ಯಾಬಿನ್ ಅನುಭವವನ್ನು ಹೆಚ್ಚಿಸಲು ಟಾಪ್ ವೇರಿಯೆಂಟ್‌ಗಳಲ್ಲಿ ಆಂಬಿಯೆಂಟ್ ಲೈಟಿಂಗ್ ಅನ್ನು ಪರಿಚಯಿಸಲಾಗಿದೆ.

ಸುಧಾರಿತ ಸೌಕರ್ಯಕ್ಕಾಗಿ ಚಾಲಕ ಮತ್ತು ಸಹ-ಚಾಲಕರಿಗೆ ವೆಂಟಿಲೇಟೆಡ್ ಸೀಟ್‌ಗಳನ್ನು ಟಾಪ್ ವೇರಿಯೆಂಟ್‌ಗಳಲ್ಲಿ ಸೇರಿಸಲಾಗಿದೆ. ಸುಧಾರಿತ ಸಂಪರ್ಕಕ್ಕಾಗಿ ಟೈಪ್-ಸಿ USB ಫಾಸ್ಟ್ - ಚಾರ್ಜಿಂಗ್ ಪೋರ್ಟ್‌ಗಳನ್ನು (15W) ಪರಿಚಯಿಸಲಾಗಿದೆ. LED ಸ್ಪಾಟ್ ಮತ್ತು ರೀಡಿಂಗ್ ಲ್ಯಾಂಪ್‌ಗಳು ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿ ಪ್ರಮಾಣಿತವಾಗಿದ್ದು, ಕ್ಯಾಬಿನ್ ಅನ್ನು ಹೆಚ್ಚು ಆಕರ್ಷಕವಾಗಿಸಿವೆ.

toyota-urban-cruiser-hyryder-launched-with-new-updated-features

ಏರ್ ಕ್ವಾಲಿಟಿ ಇಂಡೆಕ್ಸ್ ಡಿಸ್ಪ್ಲೇಯನ್ನು ಆಯ್ದ ವೇರಿಯೆಂಟ್‌ಗಳಿಗೆ ಸೇರಿಸಲಾಗಿದ್ದು, ಕ್ಯಾಬಿನ್ ಒಳಗೆ ಉತ್ತಮ ಗಾಳಿಯ ಗುಣಮಟ್ಟದ ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ. ಸುಧಾರಿತ ಓದುವಿಕೆ ಮತ್ತು ಸ್ಪಷ್ಟ ಮಾಹಿತಿ ಪ್ರದರ್ಶನದೊಂದಿಗೆ ನವೀಕರಿಸಿದ ಸ್ಪೀಡೋಮೀಟರ್ ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸ್ಟೈಲಿಂಗ್ ಆಯ್ಕೆಗಳನ್ನು ಹೆಚ್ಚಿಸಲು ಆಯ್ದ ವೇರಿಯೆಂಟ್‌ಗಳಲ್ಲಿ ಡ್ಯುಯಲ್-ಟೋನ್ ಬಾಹ್ಯ ಬಣ್ಣದ ಆಯ್ಕೆಗಳನ್ನು ಪರಿಚಯಿಸಲಾಗಿದೆ.

ಅರ್ಬನ್ ಕ್ರೂಸರ್ ಹೈರೈಡರ್ ಹೊಸ ಅಪ್‌ಡೇಟ್‌ಗಳ ಪರಿಚಯದ ಕುರಿತು ಮಾತನಾಡಿದ ಕಾರು ವ್ಯವಹಾರದ ಉಪಾಧ್ಯಕ್ಷ ವರೀಂದರ್ ವಾಧ್ವಾ, "ಎಸ್‌ಯುವಿ ವಿಭಾಗವು ವಿಕಸನಗೊಳ್ಳುತ್ತಿದ್ದಂತೆ, ನಾವು ನಮ್ಮ ಶ್ರೇಣಿಯನ್ನು ರಿಫ್ರೆಶ್ ಮಾಡುವುದನ್ನು ಮತ್ತು ಉನ್ನತೀಕರಿಸುವುದನ್ನು ಮುಂದುವರಿಸುತ್ತೇವೆ. ಇತ್ತೀಚಿನ ಅರ್ಬನ್ ಕ್ರೂಸರ್ ಹೈರೈಡರ್ ವಿಭಾಗದಲ್ಲಿ ಅತ್ಯುತ್ತಮ ತಂತ್ರಜ್ಞಾನ, ಸುಧಾರಿತ ಸುರಕ್ಷತೆ ಮತ್ತು ಉತ್ತಮ ಸೌಕರ್ಯಕ್ಕಾಗಿ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ.

ಆಧುನಿಕ ಎಸ್‌ಯುವಿ ಖರೀದಿದಾರರಿಗಾಗಿ ರಚಿಸಲಾದ ಇದು ಟೊಯೋಟಾದ ಉತ್ತಮ ಗುಣಮಟ್ಟ, ಸುಸ್ಥಿರತೆ ಮತ್ತು ಚಾಲನಾ ಆನಂದವನ್ನು ಹೆಚ್ಚಿಸಲು ನಿರ್ಮಾಣಗೊಳಿಸಲಾಗಿದೆ. ಈ ಇತ್ತೀಚಿನ ನವೀಕರಣಗಳೊಂದಿಗೆ, ಹೈರೈಡರ್ ಇನ್ನೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತದೆ, ಭಾರತದ ಅತ್ಯುತ್ತಮ ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ನಮಗೆ ವಿಶ್ವಾಸವಿದೆ.

ವರ್ಧಿತ ಪರ್ಫಾಮೆನ್ಸ್ ಮತ್ತು ದಕ್ಷತೆಗಿಂತ ಹೆಚ್ಚಾಗಿ, ಈ ಸಂಸ್ಕರಿಸಿದ ಎಸ್‌ಯುವಿ ಹೈಬ್ರಿಡ್ ತಂತ್ರಜ್ಞಾನ, ಸುರಕ್ಷತೆ ಮತ್ತು ಸಂಪರ್ಕಿತ ಚಲನಶೀಲತೆಯಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ. ಇಂದಿನ ಗ್ರಾಹಕರ ಕ್ರಿಯಾತ್ಮಕ ಅಗತ್ಯಗಳಿಗೆ ಅನುಗುಣವಾಗಿ ಭವಿಷ್ಯ ಸಿದ್ಧ ಚಾಲನಾ ಅನುಭವವನ್ನು ನೀಡುತ್ತದೆ" ಎಂದು ಕಾರು ವ್ಯವಹಾರದ ಉಪಾಧ್ಯಕ್ಷ ವರೀಂದರ್ ವಾಧ್ವಾ ವಿಶ್ವಾಶ ವ್ಯಕ್ತಪಡಿಸಿದರು.

ಕಾರಿನ ವಿಶೇಷತೆಗಳು: 2021 ರಲ್ಲಿ ಬಿಡುಗಡೆಯಾದ ಅರ್ಬನ್ ಕ್ರೂಸರ್ ಹೈರೈಡರ್, ಟೊಯೋಟಾದ ಜಾಗತಿಕ SUV ಪರಂಪರೆಯನ್ನು ದಿಟ್ಟ ಶೈಲಿ, ಸುಧಾರಿತ ತಂತ್ರಜ್ಞಾನ ಮತ್ತು ಸುಸ್ಥಿರತೆಯೊಂದಿಗೆ ಹೊರಹೊಮ್ಮಿತ್ತು. ಪ್ರಸ್ತುತ ವರ್ಧಿತ ವೈಶಿಷ್ಟ್ಯ ನವೀಕರಣಗಳೊಂದಿಗೆ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆಯು ರೂ. 11.34 ಲಕ್ಷಗಳ (ಎಕ್ಸ್ ಶೋ ರೂಂ) ಆರಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಮೈಲೇಜ್ ಮತ್ತು ಪರ್ಫಾಮೆನ್ಸ್‌ಗಾಗಿ ವಿನ್ಯಾಸಗೊಳಿಸಲಾದ ಇದು, ನಿಯೋ ಡ್ರೈವ್ (ISG) ನೊಂದಿಗೆ 1.5L K-ಸಿರೀಸ್ ಎಂಜಿನ್, 5-ಸ್ಪೀಡ್ ಮ್ಯಾನುವಲ್, 2WD ಮತ್ತು 4WD ಆಯ್ಕೆಗಳೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಹೆಚ್ಚು ಪರಿಣಾಮಕಾರಿಯಾದ ಸೆಲ್ಫ್ - ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಹೊಂದಿದೆ.

ಇದರ ಆಕರ್ಷಕ ಹೊರಭಾಗವು LED ಪ್ರಾಜೆಕ್ಟ್ ಹೆಡ್‌ಲ್ಯಾಂಪ್‌ಗಳು, ಟ್ವಿನ್ LED DRL ಗಳು, ಸ್ಪೋರ್ಟಿ ಸ್ಕಿಡ್ ಪ್ಲೇಟ್, ಕ್ರಿಸ್ಟಲ್ ಅಕ್ರಿಲಿಕ್ ಗ್ರಿಲ್ ಮತ್ತು 17-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಈ ಕಾರು ಏಳು ಮೋನೋಟೋನ್ ಮತ್ತು ನಾಲ್ಕು ಡ್ಯುಯಲ್ - ಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಒಳಗೆ ಪ್ರೀಮಿಯಂ ಕ್ಯಾಬಿನ್ 9 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಲೆದರ್ ಸೀಟ್‌ಗಳು, 360 - ಡಿಗ್ರಿ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್, ಹೆಡ್ - ಅಪ್ ಡಿಸ್ಪ್ಲೇ ಸೇರಿದಂತೆ ಗೂಗಲ್ ಮತ್ತು ಸಿರಿ ವಾಯ್ಸ್ ಅಸಿಸ್ಟೆಂಟ್‌ಗಳನ್ನು ಒಳಗೊಂಡಿದೆ.

ಇವಿಷ್ಟೇ ಅಲ್ಲದೇ ಹಿಂಭಾಗದ ಪ್ರಯಾಣಿಕರು ಒರಗುವ ಸೀಟುಗಳು, ಹಿಂಭಾಗದ AC ವೆಂಟ್‌ಗಳು, USB ಚಾರ್ಜಿಂಗ್ ಮತ್ತು 60:40 ಸ್ಪ್ಲಿಟ್ ಸೀಟ್‌ಗಳಿಂದ ಈ ಅರ್ಬನ್ ಕ್ರೂಸರ್ ಹೈರೈಡರ್ ಸಜ್ಜುಗೊಂಡಿದೆ. ಟೊಯೋಟಾ 66 ವಿಶೇಷ ಪರಿಕರಗಳು, 3-ವರ್ಷ ಅಥವಾ 1,00,000 ಕಿ.ಮೀ ವಾರಂಟಿ (5 ವರ್ಷ/2.20,000 ಕಿ.ಮೀ ವರೆಗೆ ವಿಸ್ತರಿಸಬಹುದು) ಮತ್ತು 8-ವರ್ಷ/1,60,000 ಕಿಮೀ ಹೈಬ್ರಿಡ್ ಬ್ಯಾಟರಿ ವಾರಂಟಿಯೊಂದಿಗೆ ಬರುತ್ತದೆ.

ಇದು ಪ್ರೀಮಿಯಂ ಮತ್ತು ತೊಂದರೆ - ಮುಕ್ತ ಚಾಲನಾ ಅನುಭವವನ್ನು ಖಚಿತಪಡಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಹೊಸ ಅಪ್‌ಡೇಟ್‌ಗಳೊಂದಿಗೆ ವರ್ಧಿತ ಅರ್ಬನ್ ಕ್ರೂಸರ್ ಹೈರೈಡರ್‌ಗಾಗಿ ಬುಕಿಂಗ್‌ಗಳು ಈಗ ತೆರೆದಿವೆ. ಗ್ರಾಹಕರು ತಮ್ಮ ಹತ್ತಿರದ ಟೊಯೋಟಾ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು ಅಥವಾ ಆನ್‌ಲೈನ್‌ನಲ್ಲಿ ಕಾರನ್ನು ಬುಕ್ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 7, 2025, 17:14 [IST]
English summary
Toyota urban cruiser hyryder launched with new updated features
Read more on toyota new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+