28 ಕಿ.ಮೀ ಮೈಲೇಜ್.. 5-ಸೀಟರ್, 7 ಲಕ್ಷ.. ಈ ಜನಪ್ರಿಯ ಟೊಯೊಟಾ ಕಾರಿಗೆ ಫುಲ್ ಡಿಮ್ಯಾಂಡ್!

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor), ವಿಶ್ವಾಸಾರ್ಹ ಎಸ್‌ಯುವಿಯಾಗಿದೆ. ಇದು 'ಮಾರುತಿ ಸುಜುಕಿ ಫ್ರಾಂಕ್ಸ್' ಕಾರಿನ ರೀ-ಬ್ಯಾಡ್ಜ್ ಮಾಡೆಲ್ ಆಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡುಗರ ಕಣ್ಣು ಕುಕುವಂತಿದೆ. ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ಟೈಸರ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,297 ಯುನಿಟ್‌ಗಳನ್ನು ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2,278 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯಲ್ಲಿ ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 1% ಪ್ರಗತಿಯಾಗಿದೆ.

'ಟೊಯೊಟಾ ಟೈಸರ್' ವಿಶೇಷತೆಗಳೇನು:

ಇದು ಕೈಗೆಟುಕುವ ಬೆಲೆಯಲ್ಲಿ ಖರೀದಿದಾರರಿಗೆ ಲಭ್ಯವಿದೆ. ಕನಿಷ್ಠ ರೂ.7.21 ಲಕ್ಷ ಹಾಗೂ ಗರಿಷ್ಠ ರೂ.12.06 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದ್ದು, ಎಲ್ಲ ವರ್ಗದ ಗ್ರಾಹಕರಿಗೆ ಸುಲಭವಾಗಿ ಕೈಗೆಟುತ್ತದೆ. ಇ, ಜಿ, ಎಸ್ ಹಾಗೂ ಎಸ್ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

Toyota Urban Cruiser Taisor Suv September 2025 Sales Report

ಈ ಕಾರು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು & 16 ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಲ್ಯೂಸೆಂಟ್ ಆರೆಂಜ್, ಸ್ಪೋರ್ಟಿನ್ ರೆಡ್, ಕೆಫೆ ವೈಟ್, ಬ್ಲ್ಯೂಯಿಸ್ ಬ್ಲ್ಯಾಕ್ ಮತ್ತು ಗೇಮಿಂಗ್ ಗ್ರೇ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.

ನೂತನ 'ಟೈಸರ್' ಕೊಂಚ ಮಟ್ಟಿಗೆ ದೊಡ್ಡ ಗಾತ್ರದಲ್ಲಿದೆ. 3,995 ಮಿ.ಮೀ ಉದ್ದ, 1,765 ಮಿ.ಮೀ ಅಗಲ & 1,550 ಮಿ.ಮೀ ಎತ್ತರವಿದೆ. ಜೊತೆಗಿದು 190 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,520 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಬರೋಬ್ಬರಿ 1,060 ಕೆಜಿ ತೂಕವಿದೆ.

Toyota Urban Cruiser Taisor Suv September 2025 Sales Report

ಇದು 3 ಪವರ್‌ಟ್ರೇನ್ ಆಯ್ಕೆಯಲ್ಲಿ ಸಿಗುತ್ತದೆ. 1.2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.0-ಲೀ. ಟರ್ಬೊ ಪೆಟ್ರೋಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಹಾಗೂ 6-ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

ಈ ಕಾರು ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 19 ರಿಂದ 28 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 37 ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. 175 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 10.98 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

Toyota Urban Cruiser Taisor Suv September 2025 Sales Report

ಹೊಸ 'ಟೊಯೊಟಾ ಟೈಸರ್' 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 308 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.

ಇದರ ಕ್ಯಾಬಿನ್ ವಿನ್ಯಾಸವು ಅತ್ಯುತ್ತಮವಾಗಿದೆ. ಅದಕ್ಕೆ ತಕ್ಕಂತೆ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ವೈರ್‌ಲೆಸ್ - ಫೋನ್ ಚಾರ್ಜಿಂಗ್, ಪ್ಯಾಡಲ್ ಶಿಫ್ಟರ್‌ಗಳು & ರೇರ್ ಎಸಿ ವೆಂಟ್‌ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಕ್ರೂಸ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ & 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

More from DriveSpark

Article Published On: Tuesday, October 14, 2025, 8:30 [IST]
English summary
Toyota urban cruiser taisor suv september 2025 sales report
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+