TVS King EV Max: ಪ್ರೀಮಿಯಂ ಆಟೋ ಬಿಡುಗಡೆ ಮಾಡಿದ ಟಿವಿಎಸ್: ಕಾರಿನಂತಹ ಫೀಚರ್ಸ್!

ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ವಿಭಾಗಗಳಲ್ಲಿ ಪ್ರಮುಖ ವಾಹನ ತಯಾರಕರಾಗಿರುವ ಟಿವಿಎಸ್ ಮೋಟಾರ್ ಕಂಪನಿ, ಇಂದು ತನ್ನ ಸಂಪರ್ಕಿತ ಪ್ರಯಾಣಿಕ ಎಲೆಕ್ಟ್ರಿಕ್ ತ್ರಿಚಕ್ರ ವಾಹನ(connected passenger electric three-wheeler)ವಾದ ಟಿವಿಎಸ್ ಕಿಂಗ್ ಇವಿ ಮ್ಯಾಕ್ಸ್ (TVS King EV Max) ಅನ್ನು ಬಿಡುಗಡೆ ಮಾಡಿದೆ. ಈ ವಾಹನವು ಟಿವಿಎಸ್ ಸ್ಮಾರ್ಟ್‌ಎಕ್ಸ್‌ಕನೆಕ್ಟ್ (TVS SmartXConnect) ಮೂಲಕ ಬ್ಲೂಟೂತ್ ಸಂಪರ್ಕ ಸೇರಿದಂತೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ನವೀನ ತಂತ್ರಜ್ಞಾನದೊಂದಿಗೆ ಸುಸ್ಥಿರ ನಗರ ಚಲನಶೀಲತೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದಾಗಿ ಕಂಪನಿ ಭರವಸೆ ನೀಡಿದೆ.

ನಗರ ಪ್ರದೇಶಗಳು ಬೆಳೆಯುತ್ತಲೇ ಇರುವುದರಿಂದ, ಕ್ಲೀನ್ ಮೊಬಿಲಿಟಿ ಆಯ್ಕೆಗಳಿಗೆ ಬೇಡಿಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಟಿವಿಎಸ್ ಕಿಂಗ್ ಇವಿ ಮ್ಯಾಕ್ಸ್ ಸುಧಾರಿತ ಎಲೆಕ್ಟ್ರಿಕ್ ಪ್ರೊಪಲ್ಷನ್ ಅನ್ನು ಉತ್ತಮ ಸೌಕರ್ಯ ಮತ್ತು ಸಂಪರ್ಕದೊಂದಿಗೆ ಸಂಯೋಜಿಸುತ್ತದೆ. ದೀರ್ಘ - ಶ್ರೇಣಿಯ, ಪ್ರಭಾವಶಾಲಿ ವೇಗವರ್ಧನೆ ಮತ್ತು ತ್ವರಿತ ಚಾರ್ಜಿಂಗ್ ಸಮಯದ ವಿಶಿಷ್ಟ ಮಿಶ್ರಣವು ತನ್ನ ವಿಭಾಗದಲ್ಲಿಯೇ ಬೆಸ್ಟ್‌ ಎನ್ನಿಸಿಕೊಂಡಿದೆ.

tvs-king-ev-max-bluetooth-connected-electric-three-wheeler-launched

ಹೆಚ್ಚಿನ ಪ್ರಯಾಣಗಳನ್ನು ಸಕ್ರಿಯಗೊಳಿಸುವುದರ ಜೊತೆಗೆ ಫ್ಲೀಟ್ ಆಪರೇಟರ್‌ಗಳು ಸೇರಿದಂತೆ ಗ್ರಾಹಕರಿಗೆ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಾಹನವನ್ನು ಯುಪಿ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ತಕ್ಷಣವೇ ಬಿಡುಗಡೆ ಮಾಡಲಾಗುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಇದು ದೇಶಾದ್ಯಂತ ಲಭ್ಯವಿರುತ್ತದೆ ಎಂದು ಟಿವಿಎಸ್ ಕಂಪನಿ ತಿಳಿಸಿದೆ.

ಒಂದೇ ಚಾರ್ಜ್‌ನಲ್ಲಿ 179 ಕಿ.ಮೀ.ಗಳ ರೇಂಜ್‌ನೊಂದಿಗೆ, ಕೇವಲ 2 ಗಂಟೆ 15 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್‌ ಆಗುವ ಸಾಮರ್ಥ್ಯವನ್ನು ಹೊಂದಿದೆ. ಶೇ 100 ರಷ್ಟು ಚಾರ್ಜ್‌ ಆಗಲು 3.5 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. TVS SmartXonnect ನಂತಹ ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಅತ್ಯಾಧುನಿಕ ವಾಹನಗಳಲ್ಲಿ ಸಿಗುವ ಫೀಚರ್ಸ್ ಅನ್ನು ಈ ತ್ರಿಚಕ್ರ ವಾಹನದಲ್ಲೂ ಪಡೆಯಬಹುದಾಗಿದೆ.

tvs-king-ev-max-bluetooth-connected-electric-three-wheeler-launched

ಕಿಂಗ್ EV MAX ಬಳಕೆದಾರರಿಗೆ ಟಿವಿಎಸ್ ಸ್ಮಾರ್ಟ್‌ಎಕ್ಸ್‌ಕನೆಕ್ಟ್ ಮುಖಾಂತರ ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ನೈಜ-ಸಮಯದ ಸಂಚರಣೆ, ಎಚ್ಚರಿಕೆಗಳು ಮತ್ತು ವಾಹನ ರೋಗನಿರ್ಣಯ (Vehicle diagnostics)ದ ಬಗ್ಗೆ ಮಾಹಿತಿ ನೀಡುತ್ತದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ, ಸೌಕರ್ಯ ಮತ್ತು ಸಂಪರ್ಕವನ್ನು ಸಂಯೋಜಿಸುತ್ತದೆ. ಆಧುನಿಕ ನಗರ ಚಲನಶೀಲತೆಗೆ ಎದ್ದುಕಾಣುವ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಟಿವಿಎಸ್ ಕಿಂಗ್ ಇವಿ ಮ್ಯಾಕ್ಸ್ ಹೈ ಪರ್ಫಾಮೆನ್ಸ್ 51.2V ಲಿಥಿಯಂ-ಐಯಾನ್ LFP ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಗಂಟೆಗೆ 60 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದ್ದು, ಮೂರು ರೈಡ್‌ ಮೋಡ್‌ಗಳನ್ನು ಒದಗಿಸಲಾಗಿದೆ. ಎಕೊ ಮೋಡ್ 40 ಕಿ.ಮೀ ಸ್ಪೀಡ್, ಸಿಟಿ ಮೋಡ್‌ನಲ್ಲಿ 50 ಕಿ.ಮೀ ಸ್ಪೀಡ್, ಪವರ್ ಮೋಡ್‌ನಲ್ಲಿ 60 ಕಿ.ಮೀ ವೇಗವನ್ನು ತಲುಪಬಲ್ಲದು.

ತನ್ನ ವಿಶಾಲವಾದ ಕ್ಯಾಬಿನ್ ಮತ್ತು ಉತ್ತಮ ಆಸನ ವಿನ್ಯಾಸದ ಮೂಲಕ ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಸುಖಕರ ಪ್ರಯಾಣವನ್ನು ಖಚಿತಪಡಿಸುತ್ತದೆ. ನಗರ ಪ್ರದೇಶಗಳು ಬೆಳೆಯುತ್ತಲೇ ಇರುವುದರಿಂದ, ಕ್ಲೀನ್ ಮೊಬಿಲಿಟಿ ಆಯ್ಕೆಗಳಿಗೆ ಬೇಡಿಕೆ ಹಿಂದೆಂದಿಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದ್ದು, ನಮ್ಮ ವಾಹನವು ಗ್ರಾಹಕರಿಗೆ ಬೆಸ್ಟ್‌ ಆಯ್ಕೆಯಾಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

TVS ಕಿಂಗ್ EV MAX ಈಗ ಉತ್ತರ ಪ್ರದೇಶ, ಬಿಹಾರ, J&K, ದೆಹಲಿ ಮತ್ತು ಪಶ್ಚಿಮ ಬಂಗಾಳದ ಆಯ್ದ ಡೀಲರ್‌ಶಿಪ್‌ಗಳಲ್ಲಿ ರೂ. 2,95,000 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 6 ವರ್ಷಗಳು ಅಥವಾ 1,50,000 ಕಿ.ಮೀ.ಗಳ ವಾರಂಟಿ ಜೊತೆಗೆ ಮೊದಲ 3 ವರ್ಷಗಳವರೆಗೆ 24/7 ರಸ್ತೆ ಬದಿಯ ಸಹಾಯದೊಂದಿಗೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.

More from DriveSpark

Article Published On: Tuesday, January 21, 2025, 9:52 [IST]
English summary
Tvs king ev max bluetooth connected electric three wheeler launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+