ಶೀಘ್ರದಲ್ಲೇ 6 ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಗೆ ಸಜ್ಜು: ಮಿಂಚಲಿದೆ ಹೊಸ ಟೊಯೋಟಾ ಇವಿ!
ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ, ಹಲವಾರು ಪ್ರಮುಖ ವಾಹನ ತಯಾರಕರು ಹೊಸ ಮಾದರಿಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಕಿಯಾ, ಎಂಜಿ, ಮಾರುತಿ ಸುಜುಕಿ, ಟೊಯೊಟಾ, ಟಾಟಾ ಮೋಟಾರ್ಸ್ ನಂತಹ ಬ್ರಾಂಡ್‌ಗಳು ಹೊಸ ಇವಿಗಳನ್ನು ಬಿಡುಗಡೆ ಮಾಡಲಿವೆ. ಇದರಲ್ಲಿ ಬಹುನಿರೀಕ್ಷಿತ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಇವಿ ಕ್ಷೇತ್ರಕ್ಕೆ ಪ್ರವೇಶಿಸಲು ಸಜ್ಜಾಗಿದೆ. ಈ ಎಲ್ಲಾ ಬ್ರಾಂಡ್‌ಗಳ ಇವಿ ಕಾರುಗಳ ವಿಶೇಷತೆಗಳನ್ನು ಇಲ್ಲಿ ವಿವರವಾಗಿ ನೋಡೋಣ.
ಮಾರುತಿ ಸುಜುಕಿ ಇ ವಿಟಾರಾ: ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ರಲ್ಲಿ ಪ್ರದರ್ಶಿಸಿದ ನಂತರ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಮಾದರಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಹಾಗೆಯೇ ಸಿಂಗಲ್ ಚಾರ್ಜ್‌ನಲ್ಲಿ 500 ಕಿ.ಮೀಗಿಂತ ಹೆಚ್ಚಿನ ರೇಂಜ್ ನೀಡುವ ನಿರೀಕ್ಷೆಯಿದೆ.

ಟಾಟಾ ಹ್ಯಾರಿಯರ್ ಇವಿ: ಟಾಟಾ ಹ್ಯಾರಿಯರ್ ಇವಿ ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ಸಿಂಗಲ್-ಮತ್ತು ಡ್ಯುಯಲ್-ಮೋಟಾರ್ ಕಾನ್ಫಿಗರೇಶನ್ ಗಳಲ್ಲಿ ನೀಡಲಾಗುವುದು, ಎರಡನೆಯದು ಆಲ್-ವ್ಹೀಲ್-ಡ್ರೈವ್ ಸೆಟಪ್ ಹೊಂದಿರುತ್ತದೆ. ಅಂದಾಜು 500 ಕಿ.ಮೀ ರೇಂಜ್ ನೀಡಲಿದೆ. ಹ್ಯಾರಿಯರ್ ಇವಿ ಟಾಟಾದ ಎಲೆಕ್ಟ್ರಿಕ್ ಪೋರ್ಟ್ಫೋಲಿಯೊದಲ್ಲಿ ಕರ್ವ್ ಇವಿಗಿಂತ ಮೇಲಿರುತ್ತದೆ.
ಕಿಯಾ ಕ್ಲಾವಿಸ್ ಇವಿ: ಕಿಯಾ ಕ್ಲಾವಿಸ್ ಇವಿ ಶೀಘ್ರದಲ್ಲೇ ಬಿಡುಗಡೆಯಾಗಿವ ನಿರೀಕ್ಷೆಯಿದೆ. ಅಂದಾಜಿನ ಪ್ರಕಾರ ಪೂರ್ಣ ಚಾರ್ಜ್ ಮಾಡಿದರೆ ಗರಿಷ್ಠ 450 ಕಿ.ಮೀ ರೇಂಜ್ ನೀಡಬಹುದು ಎನ್ನಲಾಗಿದೆ. ಈ ಕಾರು ಇದೇ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಕ್ರೆಟಾ ಎಲೆಕ್ಟ್ರಿಕ್‌ನೊಂದಿಗೆ ತನ್ನ ಅಂತರ್ಗತ ಎಲೆಕ್ಟ್ರಿಕ್ ಡಿಸೈನ್ ಹಂಚಿಕೊಳ್ಳುವ ನಿರೀಕ್ಷೆಯಿದೆ. ಇದು ಎರಡು ಬ್ಯಾಟರಿ ಆಯ್ಕೆಗಳಲ್ಲಿ ನೀಡಬಹುದು.

ಎಂಜಿ ಎಂ 9: ಎಂಜಿ ಕಂಪನಿಯು ಮುಂಬರುವ ತಿಂಗಳುಗಳಲ್ಲಿ ಎಂ9 ಎಂಪಿವಿಯನ್ನು ಭಾರತದಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಜಾಗತಿಕವಾಗಿ, ಎಲೆಕ್ಟ್ರಿಕ್ ಎಂಪಿವಿ 90 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರಲಿದೆ. ಇದು ಫುಲ್ ಚಾರ್ಜ್‌ನಲ್ಲಿ ಸುಮಾರು 430 ಕಿ.ಮೀ ಡ್ರೈವಿಂಗ್ ರೇಂಜ್ ನೀಡುತ್ತದೆ. ಇದೇ ರೀತಿಯ ವಿಶೇಷಣಗಳು ಭಾರತೀಯ ಮಾಡಲ್‌ನಲ್ಲೂ ಲಭ್ಯವಿರುತ್ತದೆ.
ಟೊಯೊಟಾ ಅರ್ಬನ್ ಕ್ರೂಸರ್ ಬಿಇವಿ: ಟೊಯೊಟಾ ಅರ್ಬನ್ ಕ್ರೂಸರ್ ಬಿಇವಿ 2025 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ತನ್ನ ಹೆಚ್ಚಿನ ಯಾಂತ್ರಿಕ ಘಟಕಗಳನ್ನು ಮಾರುತಿ ಇ-ವಿಟಾರಾದೊಂದಿಗೆ ಹಂಚಿಕೊಳ್ಳಲಿದ್ದು, ಟೊಯೊಟಾ ಆವೃತ್ತಿಯು ವಿಭಿನ್ನ ಬಾಹ್ಯ ಸ್ಟೈಲಿಂಗ್ ಅನ್ನು ಹೊಂದಿರುತ್ತದೆ. ಮಾರುತಿ ಹಾಗೂ ಟೊಯೋಟಾ ಎರಡು ಕಾರುಗಳು ರೇಂಜ್, ಪರ್ಫಾಮೆನ್ಸ ಮತ್ತು ಫೀಚರ್ಸ್ ವಿಷಯದಲ್ಲಿ ಒಂದೇ ರೀತಿ ಇರಲಿವೆ.

ಎಂಜಿ ಸೈಬರ್‌ಸ್ಟೈರ್: ಎಂಜಿ ಸೈಬರ್ ಸ್ಟರ್ ಜಿಟಿ ಶೀಘ್ರದಲ್ಲೇ ಬರಲಿದೆ, ಡ್ಯುಯಲ್ ಮೋಟರ್ ಸೆಟಪ್ ಹೊಂದಿರುವ ಈ ಕಾರು ಪೂರ್ಣ ಚಾರ್ಜ್ ಮಾಡಿದರೆ 443 ಕಿ.ಮೀ ರೇಂಜ್ ನೀಡುವುದಾಗಿ ಎಂಜಿ ಹೇಳಿಕೊಂಡಿದೆ. ಇದು 510 ಪಿಎಸ್ ಪವರ್ ಮತ್ತು 725 ಎನ್ಎಂ ಟಾರ್ಕ್ ನೀಡುತ್ತದೆ. ಈ ಎಲೆಕ್ಟ್ರಿಕ್ ರೋಡ್ ಸ್ಟರ್ ಕೇವಲ 3.2 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications