ಕಾರು ಖರೀದಿಸುವ ಪ್ಲಾನ್ ಇದೆಯೇ? ಇನ್ನೇನು ವರ್ಷ ಮುಗೀತು... ಜನವರಿಯಲ್ಲಿ 3 ಫೇಸ್‌ಲಿಫ್ಟ್‌ಗಳ ಎಂಟ್ರಿ!

ನೀವು ಹೊಸ ಕಾರು ಖರೀದಿಸುವ ಪ್ಲಾನ್ ಇದ್ದರೆ ಸ್ವಲ್ಪ ತಡಿಯಿರಿ, ಹೊಸ ಕಾರುಗಳು ಮಾರುಕಟ್ಟೆಗೆ ಬರಲು ರೆಡಿಯಾಗಿವೆ. ಹೌದು, ಹೊಸ ವರ್ಷ 2026ಕ್ಕೆ ಕಾಲಿಡುತ್ತಿದ್ದಂತೆ SUV ಮಾರುಕಟ್ಟೆಯು ಜನವರಿ ತಿಂಗಳಲ್ಲೇ ಐದು ಹೊಸ ಮಾಡಲ್‌ಗಳನ್ನು ಸ್ವಾಗತಿಸಲು ಸಜ್ಜಾಗಿದೆ. ಕೈಗೆಟುಕುವ 7-ಸೀಟರ್‌ಗಳಿಂದ ಹಿಡಿದು ಮಿಡ್‌ಸೈಜ್ ಎಸ್‌ಯುವಿಗಳವರೆಗೆ, ಜನವರಿ 2026 ರಲ್ಲಿ ನೀವು ಎದುರು ನೋಡಬಹುದಾದ ಐದು ರೋಮಾಂಚಕಾರಿ ಕಾರುಗಳು ಅನಾವರಣಗೊಳ್ಳಲಿವೆ. ಬನ್ನಿ ಹಾಗಾದರೆ ಯಾವೆಲ್ಲಾ ಕಾರುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗಿವೆ ನೋಡೋಣ.

ಮಹೀಂದ್ರಾ XUV 7XO: 2026 ರಲ್ಲಿ ಮಹೀಂದ್ರಾ ಹಲವಾರು ಹೊಸ SUV ಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ, ಅದರಲ್ಲಿ XUV700 ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯಾದ XUV 7XO ಅತ್ಯಂತ ನಿರೀಕ್ಷಿತ SUV ಗಳಲ್ಲಿ ಒಂದಾಗಿದೆ. ಕಂಪನಿಯು ಇದನ್ನು ಜನವರಿ 5, 2026 ರಂದು ಪರಿಚಯಿಸುವುದಾಗಿ ಹೇಳಿದೆ. ಈ ಕಾರು ಕ್ಯಾಬಿನ್ ಒಳಗೆ-ಹೊರಗೆ ಮರುವಿನ್ಯಾಸ, ಹೈಟೆಕ್ ನವೀಕರಣಗಳನ್ನು ಪಡೆದಿದೆ ಎಂದು ಹೇಳಲಾಗುತ್ತಿದೆ.

upcoming-cars-in-2026-jan-by-nissan-mahindra-renault

ಮಹೀಂದ್ರಾ XUV 7XO ಎಸ್‌ಯುವಿಯು ಲೆವೆಲ್ 2 ADAS ಸೇರಿದಂತೆ ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಮರುವಿನ್ಯಾಸಗೊಳಿಸಲಾದ ಸ್ಟೀರಿಂಗ್ ವೀಲ್, ಡಾಲ್ಬಿ ಅಟ್ಮಾಸ್‌ನೊಂದಿಗೆ 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯಲಿದೆ. ಇತರ ಮುಖ್ಯಾಂಶಗಳಲ್ಲಿ ಎಲೆಕ್ಟ್ರಿಕ್ ಬಾಸ್ ಮೋಡ್, ಆಟೋ-ಡಿಮ್ಮಿಂಗ್ IRVM, XEV 9e ಮತ್ತು 9S ನಲ್ಲಿ ನೀಡಲಾದಂತೆಯೇ ಮೂರು-ಸ್ಕ್ರೀನ್ ಡಿಜಿಟಲ್ ಕ್ಲಸ್ಟರ್ ಸೇರಿವೆ.

ನಿಸ್ಸಾನ್ ಗ್ರಾವೈಟ್: ತನ್ನ ಇತ್ತೀಚಿನ ಮೂರು SUV ಕಾರ್ಯತಂತ್ರದ ಭಾಗವಾಗಿ, ನಿಸ್ಸಾನ್ ಇಂಡಿಯಾ ಜನವರಿ 2026 ರ ಆರಂಭದಲ್ಲಿ ದೇಶದಲ್ಲಿ ಗ್ರಾವೈಟ್ 7 - ಸೀಟರ್ MPV ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಇದರ ಬಿಡುಗಡೆ ಮೂಲಕ ನಿಸ್ಸಾನ್ ಬಜೆಟ್ ಸ್ನೇಹಿ MPV ವಾಹನ ವಿಭಾಗಕ್ಕೆ ದಿಟ್ಟ ಹೆಜ್ಜೆ ಇಡಲಿದೆ. ನಿರೀಕ್ಷಿತ ಬೆಲೆಯು ರೂ. 6.20 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿರುವ ಸಾಧ್ಯತೆ ಇದೆ.

upcoming-cars-in-2026-jan-by-nissan-mahindra-renault

ಹೊರಭಾಗವು ಆಕರ್ಷಕ ಮುಂಭಾಗದ ಗ್ರಿಲ್, 15 - ಇಂಚಿನ ಅಲಾಯ್ ವೀಲ್‌ಗಳು ಮತ್ತು ನಯವಾದ LED ಟೈಲ್ - ಲ್ಯಾಂಪ್‌ಗಳು, ಒಳಗೆ ಡ್ಯುಯಲ್ - ಟೋನ್ ಅಪ್ಹೋಲ್ಸ್ಟರಿಯೊಂದಿಗೆ ಪ್ರೀಮಿಯಂ ಕ್ಯಾಬಿನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾಡುವ 8 - ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪುಶ್-ಬಟನ್ ಸ್ಟಾರ್ಟ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ನಿರೀಕ್ಷಿಸಲಾಗಿದೆ.

ಹೊಸ ರೆನಾಲ್ಟ್ ಡಸ್ಟರ್: ಹೊಸ ರೆನಾಲ್ಟ್ ಡಸ್ಟರ್ ಸಿ-ಸೆಗ್ಮೆಂಟ್ ಎಸ್‌ಯುವಿ ಬಿಡುಗಡೆಯು ಹೆಚ್ಚು ನಿರೀಕ್ಷಿತವಾಗಿದೆ. ಜನವರಿ 26 ರಂದು ಅನಾವರಣವಾಗಲಿರುವ ಹೊಸ ಡಸ್ಟರ್, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಸೆಗ್‌ಮೆಂಟ್ ಲೀಡರ್‌ಗಳಿಗೆ ಪೈಪೋಟಿ ನೀಡಲಿದೆ. ತೀಕ್ಷ್ಣವಾದ Y- ಆಕಾರದ LED DRL ಗಳು ಮತ್ತು ಮಸ್ಕುಲರ್ ರಗಡ್ ಬಂಪರ್‌ಗಳು, ಶಾರ್ಕ್ ಫಿನ್ ಆಂಟೆನಾ, ರೂಫ್ ರೈಲ್‌ಗಳು, ವಿಶಾಲ ಗ್ರಿಲ್‌ನೊಂದಿಗೆ ಒರಟಾದ ನೋಟವನ್ನು ಹೊಂದಿದೆ.

upcoming-cars-in-2026-jan-by-nissan-mahindra-renault

ಕ್ಯಾಬಿನ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಫ್ಲೋಟಿಂಗ್ 10 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ವೆಂಟಿಲೇಟೆಡ್ ಹಾಗೂ ಪವರ್ಡ್ ಸೀಟುಗಳು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಪ್ರೀಮಿಯಂ ಸ್ಪರ್ಶಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜನವರಿಯಲ್ಲಿ ಮಾರುಕಟ್ಟೆಗೆ ಎಂಟ್ರಿಕೊಡಲಿರುವ ಈ ಮೂರು ಕಾರುಗಳ ಮೇಲೆ ಭಾರೀ ನಿರೀಕ್ಷೆಗಳಿವೆ. ಮಹೀಂದ್ರಾ, ನಿಸ್ಸಾನ್, ರೆನಾಲ್ಟ್ ಬ್ರಾಂಡ್‌ಗಳಿಗೆ ಈ ಮಾಡಲ್‌ಗಳ ಬಿಡುಗಡೆಗಳು ನಿರ್ಣಾಯಕವಾಗಿವೆ. ಗ್ರಾಹಕರನ್ನು ಸೆಳೆಯಲು ಹಲವು ಹೊಸ ಅಪ್‌ಡೇಟ್‌ಗಳನ್ನು ನೀಡಿ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ. ಬಿಡುಗಡೆ ಬಳಿಕ ಯಾವ ಮಟ್ಟಿಗೆ ಯಶಸ್ಸು ಕಾಣಲಿವೆ ಕಾದುನೋಡಬೇಕಿದೆ.

More from DriveSpark

Article Published On: Wednesday, December 24, 2025, 14:49 [IST]
English summary
Upcoming cars in 2026 jan by nissan mahindra renault
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+