TATA: ಜನ ಕ್ಯೂ ನಿಲ್ಲುವರು, ಅತಿ ಶೀಘ್ರದಲ್ಲೇ ಟಾಟಾದಿಂದ 5 ಹೊಸ ಕಾರುಗಳು ಮಾರಾಟಕ್ಕೆ.. ಒಂದಕ್ಕಿಂತ ಒಂದು ಚೆನ್ನಾಗಿವೆ!

ಟಾಟಾ ಮೋಟಾರ್ಸ್ (Tata Motors) ಜನ ಮೆಚ್ಚಿದ ವಾಹನ ತಯಾರಕ ಕಂಪನಿಯಾಗಿದೆ. ಹೊಚ್ಚ ಹೊಸ 'ಸಿಯೆರಾ' ಕಾರಿನ ಬಿಡುಗಡೆಯೊಂದಿಗೆ ಅಬ್ಬರಿಸುತ್ತಿದೆ. ಇದು 70,000ಕ್ಕೂ ಅಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್‌ನ್ನು ಪಡೆದಿದೆ. '2026' ಕಂಪನಿಗೆ ಮಹತ್ವದ ವರ್ಷವಾಗಿದ್ದು, 3 ನೂತನ ಎಸ್‌ಯುವಿಗಳನ್ನು ಮಾರಾಟಕ್ಕೆ ತರಲಿದೆ. ಎಲ್ಲವು ಅಂದುಕೊಂಡಂತೆ ನಡೆದರೆ ಸಿಯೆರಾ ಇವಿ, ಸಫಾರಿ (ಪೆಟ್ರೋಲ್), ಹ್ಯಾರಿಯರ್ (ಪೆಟ್ರೋಲ್), ಪಂಚ್ ಫೇಸ್‌ಲಿಫ್ಟ್ ಹಾಗೂ ಹೊಸ ತಲೆಮಾರಿನ ನೆಕ್ಸಾನ್ ಕಾರುಗಳನ್ನು ಪರಿಚಯಿಸಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟಾಟಾ ಸಿಯೆರಾ ಇವಿ (Tata Sierra EV):

ನೂತನ 'ಸಿಯೆರಾ' ಎಲೆಕ್ಟ್ರಿಕ್ ಎಸ್‌ಯುವಿ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಈ ಕಾರು 2026ರ ಮೊದಲ ತ್ರೈಮಾಸಿಕದಲ್ಲಿ (ಜನವರಿ - ಮಾರ್ಚ್) ಬಿಡುಗಡೆಗೊಳ್ಳುವ ನೀರಿಕ್ಷೆಯಿದೆ. ರೂ.16 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ.

Upcoming Tata Cars In 2026 Sierra EV Safari amp amp Harrier Petrol Punch facelift And New Gen Nexon

ಈ ಎಸ್‌ಯುವಿಯ ವಿನ್ಯಾಸವು ಸ್ಟ್ಯಾಂಡರ್ಡ್ 'ಸಿಯೆರಾ'ದಂತೆ ಇರಲಿದೆ. ಅಂಡಮಾನ್ ಅಡ್ವೆಂಚರ್ (ಯೆಲ್ಲೋ), ಬೆಂಗಾಲ್ ರೂಜ್ (ರೆಡ್), ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಮುನ್ನಾರ್ ಮಿಸ್ಟ್ (ಗ್ರೀನ್), ಮಿಂಟಲ್ ಗ್ರೇ ಹಾಗೂ ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳೊಂದಿಗೂ ಲಭ್ಯವಾಗಲಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ & 2,730 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿರಲಿದೆ. 5 ಆಸನಗಳನ್ನು ಒಳಗೊಂಡಿರಲಿದೆ.

ಇದು 65 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 538 ರಿಂದ 627 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡಲಿದೆ ಎಂದು ಹೇಳಲಾಗಿದೆ. ಟ್ರಿಪಲ್ ಸ್ಕ್ರೀನ್ ಸೆಟಪ್ (ಡಿಜಿಟಲ್ ಡ್ರೈವರ್ ಡಿಸ್​ಪ್ಲೇ, ಟಚ್‌ಸ್ಕ್ರೀನ್ ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪ್ಯಾಸೆಂಜರ್ ಸೈಡ್ ಡಿಸ್​ಪ್ಲೇ), ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್‌, ಸನ್‌ರೂಫ್ ಹಾಗೂ ರೇರ್ ಎಸಿ ವೆಂಟ್‌ಗಳನ್ನು ತನ್ನದಾಗಿಸಿಕೊಂಡಿರಲಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ಪಡೆದಿರಲಿದೆ.

Upcoming Tata Cars In 2026 Sierra EV Safari amp amp Harrier Petrol Punch facelift And New Gen Nexon

ಟಾಟಾ ಸಫಾರಿ & ಹ್ಯಾರಿಯರ್ ಪೆಟ್ರೋಲ್ (Tata Safari & Harrier Petrol):

ಹೊಸ ಪವರ್‌ಟ್ರೇನ್‌ನ್ನು ಹೊಂದಿರುವ ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎಸ್‌ಯುವಿಗಳು, 2026ರ ಜನವರಿಯಲ್ಲಿಯೇ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಇವೆರೆಡು ಕಾರುಗಳು 1.5-ಲೀಟರ್ ಟರ್ಬೊ 4-ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿರಲಿವೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿವೆ.

ಸದ್ಯ ಗ್ರಾಹಕರ ಖರೀದಿಗೆ ದೊರೆಯುವ ಸಫಾರಿ, ರೂ.14.66 ಲಕ್ಷದಿಂದ ರೂ.25.96 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 6/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಅದೇ ರೀತಿಯಲ್ಲಿ ಹ್ಯಾರಿಯರ್ ರೂ.14 ಲಕ್ಷದಿಂದ ರೂ.25.25 ಲಕ್ಷ ದರವನ್ನು ಒಳಗೊಂಡಿದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ.

Upcoming Tata Cars In 2026 Sierra EV Safari amp amp Harrier Petrol Punch facelift And New Gen Nexon

ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift):

ಇದು ಕೂಡ ಜನಪ್ರಿಯ ಮೈಕ್ರೋ ಎಸ್‌ಯುವಿಯಾಗಿದ್ದು, 2026ರ ಆರಂಭದಲ್ಲಿ ಹಲವು ನವೀಕರಣಕ್ಕೆ ಒಳಗಾದ 'ಫೇಸ್‌ಲಿಫ್ಟ್' ಮಾಡೆಲ್ ಬಿಡುಗಡೆಯಾಗಲಿದೆ. ರೂ.6 ಲಕ್ಷದಿಂದ ರೂ.9.5 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳಿರಲಿದ್ದು, 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಹೊಸ ತಲೆಮಾರಿನ ಟಾಟಾ ನೆಕ್ಸಾನ್ (New Gen Tata Nexon):

ಈ ಕಾರನ್ನು 2026ರ ಅಂತ್ಯದಲ್ಲಿ ಅಥವಾ 2027ರ ಶುರುವಿನಲ್ಲಿ ಪರಿಚಯಬಹುದು. ರೂ.8 ಲಕ್ಷದಿಂದ ರೂ.17 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಹೇಳಲಾಗಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿರಬಹುದು. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿರಲಿದೆ. ಜೊತೆಗೆ ಆಕರ್ಷಕ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿರಲಿದೆ.

More from DriveSpark

Article Published On: Sunday, December 21, 2025, 9:39 [IST]
English summary
Upcoming tata cars in 2026 sierra ev safari harrier petrol punch facelift and new gen nexon
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+