Tata: ಟಾಟಾ ಬ್ರಹ್ಮಾಸ್ತ್ರ ಬಿಡುಗಡೆಗೆ ಸಜ್ಜು: ಪ್ರತಿಸ್ಪರ್ಧಿಗಳ ಎದೆಯಲ್ಲಿ ನಡುಕ: ಶೇಕ್ ಆಗಲಿದೆ ಮಾರುಕಟ್ಟೆ
ಟಾಟಾ ಮೋಟಾರ್ಸ್ (Tata Motors) ತನ್ನ ಅತ್ಯಂತ ಪ್ರತಿಷ್ಠಿತ SUV ಗಳಲ್ಲಿ ಒಂದಾದ ಟಾಟಾ ಸಿಯೆರಾ (Tata Sierra)ವನ್ನು ಆಧುನಿಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಮತ್ತೆ ಪರಿಚಯಿಸಲು ಸಜ್ಜಾಗಿದ್ದು, ನವೆಂಬರ್ 2025 ರಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿರುವುದಾಗಿ ವರದಿಯಾಗಿದೆ. ಮುಂಬರುವ ಸಿಯೆರಾ ICE (ಪೆಟ್ರೋಲ್ ಹಾಗೂ ಡೀಸೆಲ್) ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರಲಿದೆ, ಸಿಟಿ ಮತ್ತು ಅಡ್ವೆಂಚರ್ ಪ್ರಿಯ ಖರೀದಿದಾರರಿಗೆ ಬಹುಮುಖ SUV ಆಗಿ ಎಂಟ್ರಿ ಕೊಡಲಿದೆ.
ಹೊಸ ಟಾಟಾ ಸಿಯೆರಾ ನಿರೀಕ್ಷೆಗಳು: ಹೊಸ ಟಾಟಾ ಸಿಯೆರಾ ತನ್ನ ಟ್ರೇಡ್‌ಮಾರ್ಕ್ ಬಾಕ್ಸೀ ಸಿಲೂಯೆಟ್ ಮತ್ತು "ಇನ್ಫಿನಿಟಿ ವಿಂಡೋ" ಹಿಂಭಾಗದ ವಿನ್ಯಾಸವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಕನೆಕ್ಟೆಡ್ LED ಟೈಲ್ ಲ್ಯಾಂಪ್‌ಗಳು, ಸ್ಪ್ಲಿಟ್ LED ಹೆಡ್‌ಲ್ಯಾಂಪ್‌ಗಳು ಮತ್ತು ಬ್ಲಾಕ್ ರೂಫ್‌ನಂತಹ ಫ್ಯೂಚರಿಸ್ಟಿಕ್ ಸ್ಟೈಲಿಂಗ್ ಅಂಶಗಳನ್ನು ಹೊಂದಿರಲಿದೆ. ಹಳೆಯ ಲೆಜೆಂಡ್ ಲುಕ್ ಹಾಗೆಯೇ ಉಳಿಸಿಕೊಂಡು ಹೊಸ ವಿನ್ಯಾಸವನ್ನು ಅಲ್ಲಲ್ಲಿ ಸೇರಿಸಲಾಗುವುದು.

ಟಾಟಾದ ಹೊಸ Acti.ev+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಇದು ಆಧುನಿಕ ಸೌಂದರ್ಯದೊಂದಿಗೆ ಬರಲಿದೆ. ಒಳಗೆ, ಈ SUV ಮೊದಲ ಬಾರಿಗೆ ಟ್ರಿಪಲ್-ಸ್ಕ್ರೀನ್ ಸೆಟಪ್ ಅನ್ನು ಪಡಯುತ್ತಿದೆ - ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ದೊಡ್ಡ ಸೆಂಟ್ರಲ್ ಇನ್ಫೋಟೈನ್ಮೆಂಟ್ ಸ್ಕ್ರೀನ್ ಮತ್ತು ಸಹ - ಚಾಲಕನಿಗೆ ಹೆಚ್ಚುವರಿ ಸ್ಕ್ರೀನ್ ಅನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಆಕರ್ಷಕ ಪ್ರೀಮಿಯಂ ನೋಟಕ್ಕಾಗಿ ಒಂದೇ ಗಾಜಿನ ಪ್ಯಾನಲ್ ಆಗಿ ಸಂಯೋಜಿಸಲ್ಪಟ್ಟಿವೆ.
ಆಂತರಿಕ ಸೌಕರ್ಯದ ವಿಷಯದಲ್ಲಿ, ಸಿಯೆರಾ ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಡ್ಯುಯಲ್ - ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್ ಮತ್ತು JBL ಪ್ರೀಮಿಯಂ ಆಡಿಯೊ ಸಿಸ್ಟಮ್ ಅನ್ನು ಹೊಂದಿರಲಿದೆ. ಕ್ಯಾಬಿನ್ ಪ್ರೀಮಿಯಂ ಭಾವನೆಗಾಗಿ ಸಾಫ್ಟ್ - ಟಚ್ ಮೆಟೀರಿಯಲ್‌ಗಳು ಮತ್ತು ಮೆಟಾಲಿಕ್ ಅಸೆಂಟ್‌ಗಳನ್ನು ಬಳಸುವ ನಿರೀಕ್ಷೆಯಿದೆ.

ಸಿಯೆರಾವನ್ನು ಬಹು ಪವರ್‌ಟ್ರೇನ್‌ಗಳೊಂದಿಗೆ ನೀಡಲಾಗುವುದು: ಇದರಲ್ಲಿ ಮೊದಲನೇಯದು 1.5 - ಲೀಟರ್ ಟರ್ಬೊ - ಪೆಟ್ರೋಲ್ ಎಂಜಿನ್ ಆಗಿದ್ದು, ಇದು 170 PS ಪವರ್ ಹಾಗೂ 280 Nm ಟಾರ್ಕ್ ಹೊರಹಾಕುತ್ತದೆ. ಎರಡನೇಯದು 2.0 - ಲೀಟರ್ ಕ್ರಯೋಟೆಕ್ ಡೀಸೆಲ್ ಎಂಜಿನ್ ಆಗಿದ್ದು, ಇದು 170bhp ಪವರ್ ಹಾಗೂ 350 Nm ಟಾರ್ಕ್ ಹೊರಹಾಕುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಒಳಗೊಂಡಿರುತ್ತವೆ.
ಇನ್ನು ಮೂರನೇಯದು ಎಲೆಕ್ಟ್ರಿಕ್ ಆವೃತ್ತಿಯಾಗಿದ್ದು, ಇದು ಆಯ್ಕೆಯನ್ನು ಅವಲಂಬಿಸಿ 65 kWh ಅಥವಾ 75 kWh ವರೆಗೆ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿರಲಿದೆ. ಇವು ಸಿಂಗಲ್ ಚಾರ್ಜ್‌ನಲ್ಲಿ ಸಣ್ಣ ಬ್ಯಾಟರಿ ಪ್ಯಾಕ್ 450 ಕಿ.ಮೀ ರೇಂಜ್ ಹಾಗೂ ದೊಡ್ಡ ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್‌ನಲ್ಲಿ 600 ಕಿ.ಮೀ ರೇಂಜ್ ನೀಡುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳುತ್ತಿವೆ.

ಟಾಟಾ ಕಂಪನಿಯು ಸುರಕ್ಷತೆಗೆ ಯಾವಾಗಲೂ ಆದ್ಯತೆ ನೀಡುತ್ತಾ ಬಂದಿರುವುದರಿಂದ 7 ಏರ್‌ಬ್ಯಾಗ್‌ಗಳು, 360 - ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಹೊಂದಿರಬಹುದು. ಟಾಟಾ ಕಾರು ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ವೈಶಿಷ್ಟ್ಯಗಳನ್ನು ಸಹ ಹೊಂದಿರಲಿದ್ದು, ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್ ಸೇರಿವೆ.
ಹೊಸ ಟಾಟಾ ಸಿಯೆರಾ ಬೆಲೆ ವಿಷಯಕ್ಕೆ ಬಂದರೆ ರೂ. 15 ರಿಂದ 25 ಲಕ್ಷ (ಎಕ್ಸ್-ಶೋರೂಂ) ದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಟಾಟಾ ಸಿಯೆರಾ ಎಸ್‌ಯುವಿ ಬಿಡುಗಡೆ ನಂತರ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾದಂತಹ ಮಾಡಲ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇದು ಟಾಟಾದ ಪ್ರೀಮಿಯಂ SUV ವಿಭಾಗದಲ್ಲಿ ಹೊಸ ಅಲೆ ಎಬ್ಬಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.


Click it and Unblock the Notifications








