Toyota: ಮುಂಬರುವ ಹೊಸ ಟೊಯೊಟಾ ಕಾರಿದು.. 5-ಸೀಟರ್, ಲಕ್ಷುರಿ ಫೀಚರ್ಸ್.. ಬೆಲೆ ಎಷ್ಟು?
ಟೊಯೊಟಾ ಮೋಟಾರ್ ಕಾರ್ಪೊರೇಷನ್ (Toyota Motor Corporation), ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ವಿಶ್ವಾದ್ಯಂತ 2030ರ ವೇಳೆಗೆ 15 ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ ಈ ಅಕ್ಟೋಬರ್‌ನಲ್ಲಿ ಟೋಕಿಯೋ ನಗರದಲ್ಲಿ ಜರುಗಿದ 2025ರ ಜಪಾನ್ ಮೊಬಿಲಿಟಿ ಶೋನಲ್ಲಿ 'ಬೇಬಿ ಲ್ಯಾಂಡ್ ಕ್ರೂಸರ್' ಎಂದೇ ಹೆಸರಿಸಲಾದ ಹೊಚ್ಚ ಹೊಸ 'ಎಫ್‌ಜೆ ಕ್ರೂಸರ್' ಎಸ್‌ಯುವಿಯನ್ನು ಪ್ರದರ್ಶಿಸಿತ್ತು. ಇದು ಭಾರತದ ಮಾರುಕಟ್ಟೆಯಲ್ಲಿಯೂ ಮಾರಾಟಕ್ಕೆ ಬರಲಿದೆ ಎಂದು ವರದಿಯಾಗಿದೆ.
ನೂತನ ಟೊಯೊಟಾ ಎಫ್‌ಜೆ ಕ್ರೂಸರ್ (Toyota FJ Cruiser), ಜಪಾನ್‌ನಲ್ಲಿ 2026ರ ಮಧ್ಯಭಾಗದಲ್ಲಿ ಅದ್ದೂರಿಯಾಗಿ ಮಾರಾಟಕ್ಕೆ ಬರಲಿದೆ. ಆ ನಂತರ, ಅಂದರೆ 2028ರಲ್ಲಿ ದೇಶೀಯವಾಗಿ ಪರಿಚಯಗೊಳ್ಳುವ ನಿರೀಕ್ಷೆಯಿದೆ. ಸರಿ ಸುಮಾರು ರೂ.20 ಲಕ್ಷದಿಂದ ರೂ.26 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಕಾರನ್ನು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಕಂಪನಿಯ ಉತ್ಪಾದನಾ ಘಟಕದಲ್ಲಿ ಸಿದ್ಧಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದು, ನೋಡಲು ಚೆನ್ನಾಗಿದೆ. 'ಬಾಕ್ಸಿ ಸ್ಟೈಲ್'ನ ಬಾಡಿಯನ್ನು ಹೊಂದಿದೆ ಸ್ಪೋರ್ಟಿ ಬಂಪರ್, ಎಲ್‌ಇಡಿ ಹೆಡ್‌ಲೈಟ್‌ಗಳು, 'ಸಿ' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, ಫ್ಲೇರ್ಡ್ ಫೆಂಡರ್‌ಗಳು, ರೂಫ್ ರೈಲ್‌ಗಳು, ವಿಂಡ್‌ಸ್ಕ್ರೀನ್, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
ಹೊಸ 'ಎಫ್‌ಜೆ ಕ್ರೂಸರ್' ಹೆಚ್ಚು ವಿಶಾಲವಾಗಿದೆ. 4,575 ಎಂಎಂ ಉದ್ದ, 1,855 ಎಂಎಂ ಅಗಲ ಹಾಗೂ 1,960 ಎಂಎಂ ಎತ್ತರವಿದೆ. ಹಾಗೆಯೇ 215 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,580 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಈ ಕಾರು 5-ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಓಡಾಟ ನಡೆಸಬಹುದು. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಪ್ರವಾಸಕ್ಕೆ ತೆರಳಗುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು ಬೃಹದಾಕಾರದ ಬೂಟ್ ಸ್ಪೇಸ್‌ನ್ನು ಪಡೆದಿರುವ ಸಾಧ್ಯತೆಯಿದೆ.
ಇದು ಹೆಚ್ಚು ಬಲಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 2.7-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 163 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 246 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 6-ಸ್ಪೀಡ್ ಇಸಿಟಿ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 12 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.
ನೂತನ 'ಟೊಯೊಟಾ ಎಫ್‌ಜೆ ಕ್ರೂಸರ್' ಕ್ಯಾಬಿನ್ ವಿನ್ಯಾಸವು ಉತ್ತಮವವಾಗಿರಲಿದೆ. ಇನ್ಫೋಟೈನ್‌ಮೆಂಟ್ - ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಸ್ಕ್ರೀನ್ ಸೆಟಪ್, 3-ಸ್ಪೋಕ್ ಸ್ಟೀರಿಂಗ್ ವೀಲ್, ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ ರೌಂಡ್ ಎಸಿ ವೆಂಟ್‌ಗಳನ್ನು ಒಳಗೊಂಡಿದೆ.
ದೇಶೀಯವಾಗಿ ಮಾರಾಟಕ್ಕೆ ಬರುವ ಈ ಕಾರಿಗೆ ನೇರವಾದ ಯಾವುದೇ ಎದುರಾಳಿಯಿಲ್ಲ. ಮಹೀಂದ್ರಾ ಥಾರ್ ರಾಕ್ಸ್, ಮಾರುತಿ ಸುಜುಕಿ ಜಿಮ್ನಿ, ಫೋರ್ಸ್ ಗೂರ್ಖಾ, ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಹಾಗೂ ಮಹೀಂದ್ರಾ ಸ್ಕಾರ್ಪಿಯೋ ಎನ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.
ಮುಂಬರುವ ಹೊಸ 'ಟೊಯೊಟಾ ಎಫ್‌ಜೆ ಕ್ರೂಸರ್' ಎಸ್‌ಯುವಿ ಬಗ್ಗೆ ಗ್ರಾಹಕರು ಸಹ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬಹುಮುಖ್ಯವಾಗಿ ವಾರ್ಷಿಕ 89,000 ಯುನಿಟ್ ಕಾರುಗಳನ್ನು ತಯಾರಿಸಲು ಕಂಪನಿಯು ಉದ್ದೇಶಿಸಿದೆ. ಅದರಲ್ಲಿ 40,000 ಯುನಿಟ್‌ಗಳನ್ನು ಮಧ್ಯಪ್ರಾಚ್ಯ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲಿದೆ. ಉಳಿದವುಗಳನ್ನು ಭಾರತದಲ್ಲಿ ಮಾರಾಟಗೊಳಿಸಲಿದೆ.


Click it and Unblock the Notifications








