Mahindra: ಮಹೀಂದ್ರಾದಿಂದ ಹೊಸ SUVಗಳ ಬಿಡುಗಡೆಗೆ ಸಿದ್ಧತೆ: ನ್ಯೂ-ಜೆನ್ XUV 3XO & ಮಿನಿ ಸ್ಕಾರ್ಪಿಯೋ ಮಾರಾಟಕ್ಕೆ?

ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ & ಮಹೀಂದ್ರಾ (Mahindra & Mahindra) ಜನಮೆಚ್ಚಿದ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಹಲವು ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಕಂಪನಿಯು ವಿವಿಧ ನೂತನ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲು ಕೂಡ ತಯಾರಿ ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, 2026ರಲ್ಲಿ ಹೊಸ ತಲೆಮಾರಿನ 'ಎಕ್ಸ್‌ಯುವಿ 3ಎಕ್ಸ್ಒ' & 2027ರಲ್ಲಿ 'ಮಿನಿ ಸ್ಕಾರ್ಪಿಯೋ'ವನ್ನು ಪರಿಚಯಿಸಲಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೊಸ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (New-Gen Mahindra XUV 3XO):

ಇದೇ ವರ್ಷದ ಸ್ವಾತಂತ್ರ್ಯ ದಿನದಂದು 'ಮಹೀಂದ್ರಾ ವಿಷನ್ ಎಕ್ಸ್' ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಲಾಗಿತ್ತು. ಅದನ್ನೇ 'ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ' ಹೆಸರಿನಲ್ಲಿ ಮಾರಾಟಕ್ಕೆ ತರಬಹುದು ಎನ್ನಲಾಗದೆ. ಆದರೆ, ಈ ಬಗ್ಗೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

Upcoming Two Mahindra SUVs New Generation XUV 3XO And Mini Scorpio Details

ನೂತನ 'ವಿಷನ್ ಎಕ್ಸ್' ಕಾನ್ಸೆಪ್ಟ್ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಉತ್ತಮವಾದ ಸ್ಪ್ಲಿಟ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಕ್ಲಾಮ್‌ಶೆಲ್ ಬಾನೆಟ್, ಫ್ಲಶ್ ಡೋರ್ ಹ್ಯಾಂಡಲ್‌ಗಳು, ರೂಫ್ ರೈಲ್‌ಗಳು, ಥೀಕ್-ಸಿ ಪಿಲ್ಲರ್‌ಗಳು, ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳು, ಸ್ಪೋರ್ಟಿ ಸ್ಪ್ಲಿಟ್ ರೂಫ್ ಸ್ಪಾಯ್ಲರ್, ಎಲ್ಇಡಿ ಸಿಗ್ನೇಚರ್ ಟೈಲ್ ಲೈಟ್‍ ಹಾಗೂ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.

ಈ 'ವಿಷನ್ ಎಕ್ಸ್' ಕಾರಿನ ಒಳಭಾಗವು ವಿನ್ಯಾಸವು ಚೆನಾಗಿರಲಿದ್ದು, ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ವಿಶೇಷವಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ & ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಡುಯಲ್ ಸ್ಕ್ರೀನ್ ಸೆಟಪ್‌ಗಳು, ಡಬಲ್ ಡಿ-ಕಟ್ ಸ್ಟೀರಿಂಗ್ ಮತ್ತು ಟ್ವಿನ್ ಕಪ್ ಹೋಲ್ಡರ್‌ಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ.

Upcoming Two Mahindra SUVs New Generation XUV 3XO And Mini Scorpio Details

ಇದು 5 ಆಸನಗಳನ್ನು ಹೊಂದಿರಲಿದ್ದು, ಪ್ರಯಾಣಿಕರು ದೂರದ ಊರುಗಳಿಗೆ ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. 1.2-ಲೀಟರ್ ಪೆಟ್ರೋಲ್, ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.

ಮಹೀಂದ್ರಾ ಮಿನಿ ಸ್ಕಾರ್ಪಿಯೋ (Mini Mahindra Scorpio):

ಈ ವರ್ಷದ ಸ್ವಾತಂತ್ರ್ಯ ದಿನದಂದೇ 'ಮಹೀಂದ್ರಾ ವಿಷನ್ ಎಸ್ ಕಾನ್ಸೆಪ್ಟ್' ಕಾರನ್ನು ಪ್ರದರ್ಶನ ಮಾಡಲಾಗಿತ್ತು. ಇದನ್ನೇ 'ಮಿನಿ ಸ್ಕಾರ್ಪಿಯೋ' ರೂಪದಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ. ಆದರೆ, ಈ ಸಂಬಂಧ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.

ಹೊಸ 'ವಿಷನ್ ಎಸ್' ಕಾನ್ಸೆಪ್ಟ್ ನೋಡಲು ಆಫ್-ರೋಡ್ ಎಸ್‌ಯುವಿ ರೀತಿಯಲ್ಲಿದೆ. ಅತುತ್ತಮವಾದ ಎಲ್ಇಡಿ ಹೆಡ್‌ಲೈಟ್‌ಗಳು, 6-ಸ್ಲಾಟ್ ಗ್ರಿಲ್, ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್‌, ಸೈಡ್ ಸ್ಟೋರೇಜ್ ಬಾಕ್ಸ್, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಹಾಗೂ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

ಇದು 5 ಆಸನಗಳನ್ನು ಪಡೆದಿರಲಿದೆ. ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ಡುಯಲ್ ಸ್ಕ್ರೀನ್ ಸೆಟಪ್, 2-ಸ್ಪೋಕ್ ಸ್ಟೀರಿಂಗ್ ವೀಲ್, ಪನೋರಮಿಕ್ ಸನ್‌ರೂಫ್ ಹಾಗೂ ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಪೆಟ್ರೋಲ್, ಡೀಸೆಲ್, ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಮಾರಾಟಕ್ಕೂ ಬರಬಹುದು. ಇದರೊಂದಿಗೆ ಬಜೆಟ್ ದರದಲ್ಲೂ ಸಿಗಬಹುದು ಎನ್ನಲಾಗಿದೆ.

ಒಟ್ಟಾರೆಯಾಗಿ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಹಾಗೂ ಮಹೀಂದ್ರಾ ಮಿನಿ ಸ್ಕಾರ್ಪಿಯೋಗಳು ಬಿಡುಗಡೆಯಾಗುತ್ತದೆ ಎಂಬ ವಿಚಾರವು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇವು ಆಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. ಈ ಕಾರುಗಳು ಮಾರಾಟಕ್ಕೆ ಬಂದ ಖರೀದಿದಾರರು ಮುಗಿಬಿದ್ದು ಕೊಂಡುಕೊಂಡರೂ ಅಚ್ಚರಿಪಡಬೇಕಾಗಿಲ್ಲ.

More from DriveSpark

Article Published On: Monday, October 27, 2025, 16:45 [IST]
English summary
Upcoming two mahindra suvs new generation xuv 3xo and mini scorpio details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+