ಪ್ರೇಮಿಗಳ ದಿನ: ನಿಮ್ಮ ಹೆಂಡತಿಗೆ ಸರ್ಪ್ರೈಸ್ ಗಿಫ್ಟ್ ನೀಡಬೇಕೇ.. ಈ ಕಾರುಗಳು ಬೆಸ್ಟ್, ಅತಿ ಕಡಿಮೆ ಬೆಲೆ!

ಪ್ರಪಂಚದಾದ್ಯಂತ ನಾಳೆ (ಫೆ.14) ಪ್ರೇಮಿಗಳ ದಿನವನ್ನು (Valentine's Day) ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ತಮ್ಮ ಪ್ರೇಯಸಿಗೆ ವಿಶೇಷ ಉಡುಗೊರೆ ನೀಡಿ, ಪ್ರಪೋಸ್ ಮಾಡಬೇಕೆಂಬುದು ಹಲವು ಯುವಕರ ಹೆಬ್ಬಯಕೆಯಾಗಿರುತ್ತದೆ. ನೀವು ಪ್ರೀತಿಸಿ ಮದುವೆಯಾಗಿದ್ದು, ನಿಮ್ಮ ಮಡದಿಗೆ ಸರ್ಪ್ರೈಸ್ ಗಿಫ್ಟ್ ನೀಡಲು ಆಲೋಚಿಸುತ್ತಿದ್ದೀರಾ.. ಹಾಗಾದರೆ, ಮಾರುತಿ ಸುಜುಕಿ ಆಲ್ಟೋ 10, ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್, ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹಾಗೂ ಎಂಜಿ ಕಾಮೆಟ್ ಇವಿಗಳು ಉತ್ತಮ ಆಯ್ಕೆಯಾಗಲಿವೆ. ಬನ್ನಿ.. ಈ ಕಾರುಗಳ ವಿಶೇಷತೆ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಮೊದಲಿಗೆ ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಬಗ್ಗೆ ಹ್ಯಾಚ್‌ಬ್ಯಾಕ್ ಮಾತನಾಡೋಣ. ಇದು ಕನಿಷ್ಠ ರೂ.4.09 ಲಕ್ಷ ಹಾಗೂ ಗರಿಷ್ಠ ರೂ5.99 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. 1-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಪಡೆದಿದೆ. 24.39 ರಿಂದ 33.85 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Valentine s Day Good And Low Price Cars To Gift For Your Wife Alto Tiago Kwid Grand i10 Nios Comet

ಟಾಟಾ ಟಿಯಾಗೊ (Tata Tiago) ಕೂಡ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರು ರೂ.5 ಲಕ್ಷದಿಂದ ರೂ.8.45 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. 1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 20.01 ರಿಂದ 26.49 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಓಡಾಟ ನಡೆಸಬಹುದು.

ಈ ಟಿಯಾಗೊ ಕಾರು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಯುಎಸ್‌‍ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.

Valentine s Day Good And Low Price Cars To Gift For Your Wife Alto Tiago Kwid Grand i10 Nios Comet

ರೆನಾಲ್ಟ್ ಕ್ವಿಡ್ (Renault KWID) ಹ್ಯಾಚ್‌ಬ್ಯಾಕ್ ಬಗ್ಗೆ ಹೇಳುವುದಾದರೆ, ಇದು ಕನಿಷ್ಠ ರೂ.4.70 ಲಕ್ಷ ಮತ್ತು ಗರಿಷ್ಠ ರೂ.6.45 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. 1-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 21.46 ರಿಂದ 22.3 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ ಮತ್ತು ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ (Hyundai Grand i10 Nios) ಸಹ ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರು, ಕನಿಷ್ಠ ರೂ.5.98 ಲಕ್ಷ ಮತ್ತು ಗರಿಷ್ಠ ರೂ.8.62 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಪುಶ್-ಬಟನ್ ಎಂಜಿನ್ ಸ್ಟಾರ್ಟ್/ ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Valentine s Day Good And Low Price Cars To Gift For Your Wife Alto Tiago Kwid Grand i10 Nios Comet

ಕಡೆಯದಾಗಿ ಎಂಜಿ ಕಾಮೆಟ್ ಇವಿ ಬಗ್ಗೆ ಮಾತನಾಡುವುದಾದರೆ, ಇದು ರೂ.7 ಲಕ್ಷದಿಂದ ರೂ.9.84 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 17.3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 230 ಕಿಲೋಮೀಟರ್‌ಗೆ ರೇಂಜ್ (ಮೈಲೇಜ್) ಕೊಡುತ್ತದೆ. 10.25-ಇಂಚಿನ ಡುಯಲ್ ಸ್ಕ್ರೀನ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 13, 2025, 10:20 [IST]
English summary
Valentines day good and low price cars to gift for your wife alto tiago kwid grand i10 comet
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+