ವರಮಹಾಲಕ್ಷ್ಮಿ ಹಬ್ಬ.. ಈ ಫೇಮಸ್ ಕಾರುಗಳನ್ನು ತೆಗೆದುಕೊಳ್ಳಬಹುದು, 5+ ಸೀಟರ್, 7 ಲಕ್ಷಕ್ಕಿಂತ ಅಗ್ಗ, ಭಾರೀ ಮೈಲೇಜ್!

ವರಮಹಾಲಕ್ಷ್ಮಿ (Varalakshmi) ಹಬ್ಬ ಸಮೀಪಿಸುತ್ತಿದ್ದು, ಇದೇ ಆಗಸ್ಟ್ 8 ರಂದು ಸಂಭ್ರಮ - ಸಡಗರದಿಂದ ಆಚರಿಸಲಾಗುತ್ತಿದೆ. ನೀವು ಹಬ್ಬಕ್ಕೆ ಹೊಚ್ಚ ಹೊಸ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ, ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯುವ ರೆನಾಲ್ಟ್ ಟ್ರೈಬರ್, ಟಾಟಾ ಆಲ್ಟ್ರೋಜ್, ಹ್ಯುಂಡೈ ಎಕ್ಸ್‌ಟರ್, ಟೊಯೊಟಾ ಗ್ಲ್ಯಾನ್ಜಾ ಹಾಗೂ ಮಾರುತಿ ಸುಜುಕಿ ಆಲ್ಟೊ ಕೆ10 ಕಾರುಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ರೆನಾಲ್ಟ್ ಟ್ರೈಬರ್ (Renault Triber):

ಇತ್ತೀಚೆಗೆ, ಈ ಎಂಪಿವಿಯನ್ನು ನವೀಕರಿಸಿ ಬಿಡುಗಡೆಗೊಳಿಸಲಾಯಿತು. ತುಂಬು ಕುಟುಂಬಕ್ಕೆ ಹೆಚ್ಚು ಸೂಕ್ತವಾಗಿದ್ದು, ರೂ.6.29 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ದರವನ್ನು ಪಡೆದಿದೆ. 7-ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಜನ್ಸ್‌ಕಾರ್ ಬ್ಲೂ, ಶ್ಯಾಡೋ ಗ್ರೇ ಹಾಗೂ ಆಂಬರ್ ಟೆರಾಕೋಟಾ ಎಂಬ ಹೊಸ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Varamahalakshmi Festival Buy New Cars Under Rs 7 Lakh Triber Altroz Exter Glanza Alto K10

ನೂತನ ಟ್ರೈಬರ್ ಎಂಪಿವಿ 1.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು 20 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 8-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು 6-ಏರ್‌ಬ್ಯಾಗ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಾಟಾ ಆಲ್ಟ್ರೋಜ್ (Tata Altroz):

ಇದೊಂದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ರೂ.6.89 ಲಕ್ಷದಿಂದ ರೂ.11.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 19 ರಿಂದ 26 ಕಿ.ಮೀ ವರೆಗೂ ಮೈಲೇಜ್ ನೀಡುತ್ತದೆ.

Varamahalakshmi Festival Buy New Cars Under Rs 7 Lakh Triber Altroz Exter Glanza Alto K10

ಈ ಕಾರು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. 10.25-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 10.25-ಇಂಚಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, 4-ಸ್ಪೀಕರ್ ಸೆಟಪ್‌, 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಹಾಗೂ 360-ಡಿಗ್ರಿ ಕ್ಯಾಮೆರಾ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಹ್ಯುಂಡೈ ಎಕ್ಸ್‌ಟರ್ (Hyundai Exter):

ಇದು ಮೈಕ್ರೋ ಎಸ್‌ಯುವಿಯಾಗಿದೆ. ರೂ.6 ಲಕ್ಷದಿಂದ ರೂ.10.51 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯೆಯನ್ನು ಪಡೆದಿದೆ. 19 ರಿಂದ 27 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5-ಆಸನಗಳನ್ನು ಒಳಗೊಂಡಿದೆ. 8-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6-ಏರ್‌ಬ್ಯಾಗ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Varamahalakshmi Festival Buy New Cars Under Rs 7 Lakh Triber Altroz Exter Glanza Alto K10

ಟೊಯೊಟಾ ಗ್ಲಾನ್ಜಾ (Toyota Glanza):

ಈ ಕಾರು ರೂ.6.90 ಲಕ್ಷದಿಂದ ರೂ.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದ್ದು, 22 ರಿಂದ 30.61 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5-ಆಸನಗಳನ್ನು ಹೊಂದಿದೆ. 9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, 6 ಏರ್‌ಬ್ಯಾಗ್‌ಗಳು, ವಿಎಸ್‍ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾದಂತಹ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

Varamahalakshmi Festival Buy New Cars Under Rs 7 Lakh Triber Altroz Exter Glanza Alto K10

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10):

ಮಧ್ಯಮ ವರ್ಗದವರ ನೆಚ್ಚಿನ ಕಾರಗಿ 'ಆಲ್ಟೊ' ಹೊರಹೊಮ್ಮಿದೆ. ರೂ.4.20 ಲಕ್ಷದಿಂದ ರೂ.6.20 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ. 24 ರಿಂದ 33 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 4/ 5 ಆಸನಗಳನ್ನು ಹೊಂದಿದೆ. 7-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6-ಏರ್‌ಬ್ಯಾಗ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Article Published On: Tuesday, July 29, 2025, 13:19 [IST]
English summary
Varamahalakshmi festival buy new cars under rs 7 lakh triber altroz exter glanza alto k10
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+