VinFast: ಹೊಸ ಬ್ರ್ಯಾಂಡ್‌ನ ಆಟ ಶುರು! 7-ಸೀಟರ್‌ನ ಮೊದಲ MPV ಬಿಡುಗಡೆಗೆ ಕಾಲ ಕೂಡಿಬಂತು.. ಬೆಲೆ ಎಷ್ಟು, ಹೇಗಿದೆ?

ವಿನ್‌ಫಾಸ್ಟ್‌ (VinFast) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಎಂದೇ ಹೆಸರುವಾಸಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಅಂಬೆಗಾಲು ಇಡುತ್ತಿದ್ದು, ವಿಎಫ್6 ಮತ್ತು ವಿಎಫ್7 ಎಸ್‌ಯುವಿಗಳನ್ನು ಯಶಸ್ವಿವಾಗಿ ಮಾರಾಟಗೊಳಿಸುತ್ತಿದೆ. ಇವು ಅತ್ಯಾಧುನಿಕವಾದ ವಿನ್ಯಾಸವನ್ನು ಪಡೆದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಅದಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಾಗುತ್ತವೆ. ಸದ್ಯ, ಕಂಪನಿಯು ಮತ್ತೊಂದು ಹೊಚ್ಚ ಹೊಸ ಕಾರೊಂದನ್ನು ಬಿಡುಗಡೆಗೊಳಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

2026ರ ಫೆಬ್ರವರಿಯಲ್ಲಿ ಹೊಸ ವಿನ್‌ಫಾಸ್ಟ್‌ ಲಿಮೋ ಗ್ರೀನ್‌ (VinFast Limo Green) ಎಂಪಿವಿಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಕಂಪನಿಯೇ ದೃಢಪಡಿಸಿದೆ. ಆದರೆ, ಖಚಿತ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದು ದುಬಾರಿ ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. ರೂ.25 ಲಕ್ಷದಿಂದ ರೂ.30 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರುವ ಸಾಧ್ಯತೆಯಿದೆ.

VinFast Limo Green Mpv Launch India in February 2025 Details

ನೂತನ 'ಲಿಮೋ ಗ್ರೀನ್‌' ಜಾಗತಿಕ ಮಾರುಕಟ್ಟೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿದೆ. ಈಚೆಗೆ ದೇಶೀಯ ರಸ್ತೆಯಲ್ಲಿಯೂ ಪ್ರಾಯೋಜಿಕ ಸಂಚಾರ ಸಂಚಾರ ನಡೆಸವಾಗ ಕಾಣಿಸಿಕೊಂಡಿದೆ. ಇದು ಉತ್ತಮವಾದ ಸಿಗ್ನೇಚರ್ ಎಲ್ಇಡಿ ಹೆಡ್‌ಲೈಟ್‌ಗಳು, ಫುಲ್-ವಿಡ್ತ್ ಡಿಆರ್‌ಎಲ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಡೀಪ್ ಓಷನ್, ಡೆಸಾಟ್ ಸಿಲ್ವರ್, ನೆಪ್ಚೂನ್ ಗ್ರೇ, ಕ್ರಿಮ್ಸನ್ ರೆಡ್, ಸನ್‌ಸೆಟ್ ಆರೆಂಜ್ ಮತ್ತು ಜೆಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ಈ ಎಂಪಿವಿಯು ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 4,740 ಎಂಎಂ ಉದ್ದ, 1,872 ಎಂಎಂ ಅಗಲ ಹಾಗೂ 1,728 ಎಂಎಂ ಎತ್ತರವಿದೆ. ಜೊತೆಗಿದು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,840 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,700 ಕೆಜಿ ತೂಕವಿದೆ.

ಹೊಚ್ಚ ಹೊಸ 'ವಿನ್‌ಫಾಸ್ಟ್‌ ಲಿಮೋ ಗ್ರೀನ್‌' ಎಂಪಿವಿಯು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 60.13 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 450 ಕಿ.ಮೀವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 201 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 280 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ಇದು 7 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ದೂರದ ಊರುಗಳಿಗೆ ಸುಲಭವಾಗಿ ಸಂಚಾರ ಮಾಡಬಹುದು. ವಾರಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 285 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ.

ಈ ಕಾರು 160 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 8 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 10.1 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 3-ಸ್ಪೋಕ್ ಸ್ಟೀರಿಂಗ್ ವೀಲ್, ಲೆಥೆರೆಟ್ ಸೀಟಿಂಗ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಏರ್ ಫಿಲ್ಟರ್ ಸಿಸ್ಟಮ್ ಹಾಗೂ ಫ್ಲೋಟಿಂಗ್ ಸೆಂಟರ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಕೋ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ 3 ಆಕರ್ಷಕ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.

ಹೊಸ ವಿನ್‌ಫಾಸ್ಟ್‌ ಲಿಮೋ ಗ್ರೀನ್‌ ಎಂಪಿವಿಯು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 4 ಏರ್‌ಬ್ಯಾಗ್‌ಗಳು ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹೋಲ್ಡ್, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

More from DriveSpark

Article Published On: Monday, December 1, 2025, 18:34 [IST]
English summary
Vinfast limo green mpv launch india in february 2025 details
Read more on VinFast india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+