ಇದು ಟಾಟಾ ನ್ಯಾನೋ ಅಲ್ಲ.. ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನಿಂದ 3-ಡೋರ್ Minio Green ಕಾರಿಗಾಗಿ ಪೇಟೆಂಟ್, ಬೆಲೆಯೂ ಅಗ್ಗ!

ವಿಯೆಟ್ನಾಂನ ಜನಪ್ರಿಯ ವಾಹನ ತಯಾರಕ ಕಂಪನಿ ವಿನ್‌ಫಾಸ್ಟ್ (VinFast), ಭಾರತದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿ ತಮಿಳುನಾಡಿನ ತೂತುಕುಡಿಯಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಶುರು ಮಾಡಿದೆ. ಚೆನ್ನೈ ಹಾಗೂ ಸೂರತ್‌ನಲ್ಲಿ ಡೀಲರ್‌ಶಿಪ್‌ನ್ನು ಆರಂಭ ಮಾಡಿದೆ. ಅತಿ ಶೀಘ್ರದಲ್ಲೇ ಹೊಚ್ಚ ಹೊಸ ವಿಎಫ್6 (VF6) & ವಿಎಫ್7 (VF7) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಕೂಡ ಅದ್ದೂರಿಯಾಗಿ ಮಾರಾಟಕ್ಕೆ ತರಲಿದೆ.

ಸದ್ಯ, ದೇಶದ ನಗರ ಪ್ರದೇಶದ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್‌ಫಾಸ್ಟ್ ಕಂಪನಿಯು ನೂತನ 3-ಡೋರ್ 'ಮಿನಿಯೋ ಗ್ರೀನ್' ಕಾರಿನ ತಯಾರಿಕೆಗಾಗಿ ಪೇಟೆಂಟ್ ಸಲ್ಲಿಸಿದೆ. ಈ ಕಾರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಲಾಗುತ್ತಿದೆ.

Vinfast Minio Green Electric Car Patented In India Details

ಹೊಸ ವಿನ್‌ಫಾಸ್ಟ್‌ ಮಿನಿಯೋ ಗ್ರೀನ್ (VinFast Minio Green) ಎಲೆಕ್ಟ್ರಿಕ್ ಪುಟ್ಟ ಕಾರಾಗಿದ್ದು, ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಸ್ಟ್ಯಾಕ್ಡ್ ಟೈಲ್‌ಲೈಟ್‌ಗಳು, ಫ್ಲಾಪ್ ಟೈಪ್ ಡೋರ್ ಹ್ಯಾಂಡಲ್‌ಗಳು, ಬ್ಲ್ಯಾಕ್ ಒಆರ್‌ವಿಎಂಗಳು, ಶಾರ್ಕ್ ಫಿನ್ ಆಂಟೆನಾ ಹಾಗೂ 13-ಇಂಚಿರುವ ಸ್ಟೀಲ್ ವೀಲ್‌ಗಳನ್ನು ಒಳಗೊಂಡಿದೆ. ಪಿಂಕ್, ಗ್ರೀನ್, ರೆಡ್, ವೈಟ್, ಬ್ಲ್ಯಾಕ್ ಮತ್ತು ಯೆಲ್ಲೋ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಮಿನಿಯೋ ಗ್ರೀನ್ ಸಣ್ಣ ಕಾರಾಗಿದ್ದು, 4 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 24 ಲೀಟರ್ ಸಾಮರ್ಥ್ಯದ ಟ್ರಂಕ್ ಅನ್ನು ಪಡೆದಿದೆ. 3,090 ಎಂಎಂ ಉದ್ದ, 1,496 ಎಂಎಂ ಅಗಲ ಮತ್ತು 1,625 ಎಂಎಂ ಎತ್ತರವು ಇದೆ. ಜೊತೆಗೆ 2,065 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

Vinfast Minio Green Electric Car Patented In India Details

ಇದರ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. ಯಾವುದೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನ್ನು ಹೊಂದಿಲ್ಲ. ಬದಲಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡ್ರೈವರ್ ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್‌ನ್ನು ಪಡೆದಿದೆ.

ನೂತನ ವಿನ್‌ಫಾಸ್ಟ್‌ ಮಿನಿಯೋ ಗ್ರೀನ್ 14.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 170 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 27 ಪಿಎಸ್ (ಅಶ್ವ ಶಕ್ತಿ) ಹಾಗೂ 65 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6.5 ಸೆಕೆಂಡುಗಳಲ್ಲಿ 50 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ವಿಯೆಟ್ನಾಂನಲ್ಲಿ ಇದೇ 'ವಿನ್‌ಫಾಸ್ಟ್‌ ಮಿನಿಯೋ ಗ್ರೀನ್' ಕಾರು ರೂ.8.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಭಾರತದಲ್ಲೂ ಹೆಚ್ಚು - ಕಮ್ಮಿ ಈ ದರದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಯಿದೆ. ನೂತನ ಕಾರಿಗೆ ಎಂಜಿ ಕಾಮೆಟ್ ಇವಿ ಪ್ರಬಲವಾದ ಪ್ರತಿಸ್ಪರ್ಧಿಯಾಗಲಿದೆ.

ವಿನ್‌ಫಾಸ್ಟ್ ವಿಎಫ್3 ಇವಿ (VinFast VF3 EV) ಕೂಡ ಬಿಡುಗಡೆಯಾಗುವ ನಿರೀಕ್ಷೆ:

ಇದು ಪುಟ್ಟ ಗಾತ್ರದ ಕಾರಗಿದ್ದು, 2026ರ ಮಾರಾಟಕ್ಕೆ ಬರುವ ಎಲ್ಲ ಲಕ್ಷಣಗಳಿವೆ. ಈ ಜನವರಿಯಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲೂ ನೂತನ 'ವಿಎಫ್3' ಕಾರನ್ನು ಪ್ರದರ್ಶನ ಮಾಡಲಾಗಿತ್ತು. ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಕ್ರೋಮ್ ಗ್ರಿಲ್ ಬಾರ್ ಮತ್ತು 'ವಿ' ಆಕಾರಕ್ಕೆ ಹೋಲಿಕೆಯಾಗಬಲ್ಲ ಟೈಲ್‌ಗೇಟ್‌ನ್ನು ಪಡೆದಿದೆ. 4 ಆಸನಗಳನ್ನು ಒಳಗೊಂಡಿದೆ.

ಈ ಕಾರು 18.64 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 215 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 10-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಮ್ಯಾನುವಲ್ ಎಸಿ ಮತ್ತು ಫ್ರಂಟ್ ಪವರ್ ವಿಂಡೋಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.

Source Link: Rushlane

More from DriveSpark

Article Published On: Wednesday, August 13, 2025, 16:59 [IST]
English summary
Vinfast minio green electric car patented in india details
Read more on VinFast india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+