VinFast: ಭಾರತ್ಕಕೆ ಹೊಸ ಬ್ರಾಂಡ್... ಅಗ್ಗದ ಕಾರುಗಳನ್ನು ನೀಡಲು ಸರ್ವಸಿದ್ಧ: ಶೀಘ್ರದಲ್ಲೆ ಬಿಡುಗಡೆ!

ಭಾರತಕ್ಕೆ ಹೊಸ ಕಾರು ಕಂಪನಿ ಎಂಟ್ರಿಕೊಟ್ಟಿದೆ, ಈ ವರ್ಷಾರಂಭದಲ್ಲಿ (ಜನವರಿ) ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ವಿನ್‌ಫಾಸ್ಟ್ (VinFast) ಎಂಬ ವಿಯೆಟ್ನಾಂ ಮೂಲದ ಕಾರು ತಯಾರಕ ಕಂಪನಿ ತನ್ನ VF 6 ಮತ್ತು VF 7 ಮಾಡಲ್‌ಗಳನ್ನು ಪ್ರದರ್ಶಿಸಿತ್ತು. ಈ ಕಾರುಗಳು ಈಗ ಶೀಘ್ರದಲ್ಲೆ ಭಾರತದಲ್ಲಿ ಬಿಡುಗಡೆಯಾಗಲಿವೆ. ಕಂಪನಿಯು ತಮಿಳುನಾಡಿನಲ್ಲಿ ತನ್ನ ಉತ್ಪಾದನಾ ಸ್ಥಾವರವನ್ನು ಹೊಂದಿದ್ದು, ಕಾರುಗಳ ನಿರ್ಮಾಣಕ್ಕೂ ಸರ್ವಸಿದ್ಧಗೊಂಡಿದೆ. ಇದು ಹೀಗಿದ್ದರೇ ಇದೀಗ ದೇಶಾದ್ಯಂತ 27 ನಗರಗಳಲ್ಲಿ 32 ಡೀಲರ್‌ಶಿಪ್‌ಗಳಿಗೆ 13 ಪ್ರಮುಖ ಡೀಲರ್ ಗುಂಪುಗಳೊಂದಿಗೆ ಡೀಲರ್ ಪಾಲುದಾರ ಒಪ್ಪಂದಗಳಿಗೆ ಕಂಪನಿ ಸಹಿ ಹಾಕಿದೆ.

ಈ ಸಹಯೋಗಗಳು ದೇಶಾದ್ಯಂತ ಮಾರಾಟ ಮತ್ತು ಸೇವಾ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಜುಲೈ 15 ರಂದು VF 6 ಮತ್ತು VF 7 ಕಾರುಗಳ ಮುಂಬರುವ ಪ್ರೀ-ಬುಕಿಂಗ್‌ಗೆ ಅಡಿಪಾಯ ಹಾಕಲು ವಿನ್‌ಫಾಸ್ಟ್‌ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸದ್ಯಕ್ಕೆ ಹೊಸ ಡೀಲರ್‌ಶಿಪ್‌ಗಳು ಸೇರಿದಂತೆ ಇನ್ನೂ ಹಲವು ಒಪ್ಪಂದಗಳ ಮೂಲಕ ಕಂಪನಿಯು ವೇಗವಾಗಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ.

vinfast-partners-with-13-leading-groups-to-launch-32-dealerships-in-india

ದೆಹಲಿ, ಗುರುಗ್ರಾಮ್, ನೋಯ್ಡಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಪುಣೆ, ಜೈಪುರ, ಅಹಮದಾಬಾದ್, ಕೋಲ್ಕತ್ತಾ, ಕೊಚ್ಚಿನ್, ಭುವನೇಶ್ವರ, ತಿರುವನಂತಪುರ, ಚಂಡೀಗಢ, ಲಕ್ನೋ, ಕೊಯಮತ್ತೂರು, ಸೂರತ್, ಕ್ಯಾಲಿಕಟ್, ವಿಶಾಖಪಟ್ಟಣಂ, ವಿಜಯವಾಡ, ಶಿಮ್ಲಾ, ಆಗ್ರಾ, ಝಾನ್ಸಿ, ಗ್ವಾಲಿಯರ್, ವಾಪಿ, ಬರೋಡಾ ಮತ್ತು ಗೋವಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಆರಂಭಿಕ ಡೀಲರ್‌ಶಿಪ್‌ಗಳನ್ನು ಸ್ಥಾಪಿಸುತ್ತಿದೆ.

ಈ ನಗರಗಳನ್ನು ಅವುಗಳ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ, ಮೂಲಸೌಕರ್ಯ ಸಿದ್ಧತೆ ಮತ್ತು ಬಲವಾದ ಬೇಡಿಕೆಯ ಸಾಮರ್ಥ್ಯವನ್ನು ಆಧರಿಸಿ ಕಾರ್ಯತಂತ್ರವಾಗಿ ಆಯ್ಕೆ ಮಾಡಲಾಗಿದೆ. ಇದು ಆರಂಭದಿಂದಲೇ ವ್ಯಾಪಕ ಪ್ರವೇಶ ಮತ್ತು ತಡೆರಹಿತ ಗ್ರಾಹಕ ಬೆಂಬಲವನ್ನು ಖಚಿತಪಡಿಸುತ್ತದೆ. ವಿನ್ ಫಾಸ್ಟ್ 2025 ರ ಅಂತ್ಯದ ವೇಳೆಗೆ ಭಾರತದಾದ್ಯಂತ 35 ಡೀಲರ್‌ಶಿಪ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿರುವುದಾಗಿ ಹೇಳಿದೆ.

vinfast-partners-with-13-leading-groups-to-launch-32-dealerships-in-india

ಪ್ರತಿಯೊಂದು ಸೌಲಭ್ಯವು ಶೋರೂಮ್‌ಗಳು, ಸೇವಾ ಕಾರ್ಯಾಗಾರಗಳು ಮತ್ತು ಬಿಡಿಭಾಗಗಳ ಲಭ್ಯತೆಯನ್ನು ಹೊಂದಿರುತ್ತವೆ. ವಿನ್ ಫಾಸ್ಟ್ ಗ್ರಾಹಕರು ಪ್ರತಿಯೊಂದು ಟಚ್‌ಪಾಯಿಂಟ್‌ನಲ್ಲಿಯೂ ತಡೆರಹಿತ ಮಾಲೀಕತ್ವದ ಅನುಭವವನ್ನು ಆನಂದಿಸಬಹುದು. ಈ ಡೀಲರ್-ಚಾಲಿತ ಔಟ್‌ಲೆಟ್‌ಗಳು ವಿನ್‌ಫಾಸ್ಟ್‌ನ ಜಾಗತಿಕ ಸೇವಾ ಮಾನದಂಡಗಳನ್ನು ಭಾರತೀಯ ಗ್ರಾಹಕರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕಂಪನಿ ತಿಳಿಸಿದೆ.

ಕಂಪನಿಯು 24/7 ರಸ್ತೆಬದಿಯ ನೆರವು, ಮೀಸಲಾದ ಕಾಲ್ ಸೆಂಟರ್ ಬೆಂಬಲ ಮತ್ತು ಮೊಬೈಲ್ ಸೇವೆಗಾಗಿ ಗ್ಲೋಬಲ್ ಅಶ್ಯೂರ್ ಜೊತೆ ಒಪ್ಪಂದ ಮಾಡಿಕೊಂಡಿದೆ. ತ್ವರಿತ, ವಿಶ್ವಾಸಾರ್ಹ ಮಾರಾಟದ ನಂತರದ ಬೆಂಬಲವನ್ನು ನೀಡಲು ಪ್ಯಾನ್-ಇಂಡಿಯಾ EV ಚಾರ್ಜಿಂಗ್ ಪರಿಹಾರ ಮತ್ತು ಸೇವಾ ಜಾಲಕ್ಕಾಗಿ myTVS ಮತ್ತು RoadGrid ಜೊತೆ ಒಪ್ಪಂದ ಮಾಡಿಕೊಂಡಿದೆ.

vinfast-partners-with-13-leading-groups-to-launch-32-dealerships-in-india

ಸುಸ್ಥಿರ ಹೈ - ವೋಲ್ಟೇಜ್ ಬ್ಯಾಟರಿ ಮರುಬಳಕೆ ಪರಿಹಾರಗಳಿಗಾಗಿ VinFast ಬ್ಯಾಟ್‌ಎಕ್ಸ್ ಎನರ್ಜೀಸ್‌ನೊಂದಿಗೂ ಕೈಜೋಡಿಸಿದೆ. ಈ ಎಲ್ಲಾ ಕಂಪನಿಗಳೊಂದಿಗಿನ ಸಹಯೋಗಗಳು ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಜವಾಬ್ದಾರಿಯುತ, ಸ್ಕೇಲೆಬಲ್ ಮತ್ತು ಗ್ರಾಹಕರ ಕಾರುಗಳಿಗೆ ಬೇಕಾದ ಎಲ್ಲಾ ಪರಿಹಾರಗಳನ್ನು ಒದಗಿಸುತ್ತವೆ ಎಂದು ವಿನ್‌ಫಾಸ್ಟ್ ತಿಳಿಸಿದೆ.

ವಿನ್ ಫಾಸ್ಟ್ ಏಷ್ಯಾದ ಸಿಇಒ ಫಾಮ್ ಸಾನ್ ಚೌ ಮಾತನಾಡಿ, "ವಿಶಾಲ ವ್ಯಾಪ್ತಿಯ, ಉತ್ತಮ ಗುಣಮಟ್ಟದ ಮಾರಾಟ ಮತ್ತು ಸೇವಾ ಜಾಲವನ್ನು ಸ್ಥಾಪಿಸುವ ನಮ್ಮ ಸಮಗ್ರ ಕಾರ್ಯತಂತ್ರದ ಭಾಗವಾಗಿ ಭಾರತದ ಅತ್ಯಂತ ಗೌರವಾನ್ವಿತ ಡೀಲರ್ ಪಾಲುದಾರ ಗುಂಪುಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಸಂತೋಷಪಡುತ್ತೇವೆ.

ಈ ಪಾಲುದಾರಿಕೆಯು ವಿಶ್ವಾಸಾರ್ಹತೆ, ಗ್ರಾಹಕರ ನಂಬಿಕೆ ಮತ್ತು ಸೇವಾ ಶ್ರೇಷ್ಠತೆಯಿಂದ ಬೆಂಬಲಿತವಾದ ಉನ್ನತ EV ಅನುಭವವನ್ನು ನೀಡುವತ್ತ ನಮ್ಮ ಗಮನವನ್ನು ಬಲಪಡಿಸುತ್ತದೆ. ನಮ್ಮ ಎಲೆಕ್ಟ್ರಿಕ್ SUV ಗಳನ್ನು ಭಾರತೀಯ ರಸ್ತೆಗಳಿಗೆ ತರಲು ನಾವು ತಯಾರಿ ನಡೆಸುತ್ತಿದ್ದು, ಪ್ರಮುಖ ನಗರಗಳಾದ್ಯಂತ ವಿನ್‌ಫಾಸ್ಟ್‌ನ ವಿಶ್ವ ದರ್ಜೆಯ ಕಾರುಗಳಿಗೆ ಗ್ರಾಹಕರು ಬೆಂಬಲ ನೀಡಲು ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ಸಿದ್ಧಮಾಡಿಕೊಳ್ಳುತ್ತಿದ್ದೇವೆ" ಎಂದರು.

Article Published On: Saturday, July 12, 2025, 17:00 [IST]
English summary
Vinfast partners with 13 leading groups to launch 32 dealerships in india
Read more on VinFast india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+