VinFast VF 3: ಟಾಟಾ ನ್ಯಾನೋಗಿಂತ ಸ್ಮಾರ್ಟ್ ಆಗಿರುವ ಕಾರನ್ನು ನೀವು ನೋಡಿದ್ದೀರಾ?.. ಕಡಿಮೆ ಬೆಲೆ, ಶೀಘ್ರ ಬಿಡುಗಡೆ!
ಟಾಟಾ ನ್ಯಾನೋ (Tata Nano) ಕಾರಿನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ.. ವರ್ಷಗಳ ಹಿಂದೆ, ಈ ಪುಟ್ಟ ಕಾರು ದೇಶೀಯ ರಸ್ತೆಯಲ್ಲಿ ಅಬ್ಬರಿಸಿತ್ತು. ಸದ್ಯ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅತಿ ಶೀಘ್ರದಲ್ಲೇ ನ್ಯಾನೋಗಿಂತ ಚಿಕ್ಕದಾಗಿರುವ ಕಾರೊಂದು ಬಿಡುಗಡೆಯಾಗಲಿದೆ. ಕಳೆದ ತಿಂಗಳು ಅದ್ದೂರಿಯಾಗಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಕಂಪನಿಯು ಹೊಚ್ಚ ಹೊಸ 'ವಿಎಫ್3' ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿತ್ತು. ಬನ್ನಿ.. ಈ ಕಾರಿನ ನಿರಿಕ್ಷಿತ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.
ವಿನ್ಯಾಸ (Design): ನೂತನ ವಿನ್‌ಫಾಸ್ಟ್ ವಿಎಫ್3 ಇವಿ (VinFast VF3 EV), ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ಹೊರಭಾಗದಲ್ಲಿ ಅತ್ಯುತ್ತಮವಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಕ್ರೋಮ್ ಗ್ರಿಲ್ ಬಾರ್, ಕಪ್ಪು (ಬ್ಯ್ಲಾಕ್) ಬಣ್ಣದ ಬಂಪರ್ ಮತ್ತು 'ವಿ' ಅಕ್ಷರದಂತಿರುವ ಟೈಲ್‌ಗೇಟ್‌ನ್ನು ಹೊಂದಿದೆ.

ವಿಎಫ್3 ಇವಿ ಬಹಳ ಸಣ್ಣ ಗಾತ್ರದಲ್ಲಿದ್ದು, 3,190 ಎಂಎಂ ಉದ್ದ, 1,679 ಎಂಎಂ ಅಗಲ ಮತ್ತು 1,652 ಎಂಎಂ ಎತ್ತರವಿದೆ. ಜೊತೆಗೆ 2,075 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. ಈ ಕಾರು 2-ಡೋರ್ ಆಯ್ಕೆಯನ್ನು ಹೊಂದಿದ್ದು, 4 ಆಸನಗಳನ್ನು ಒಳಗೊಂಡಿದೆ. ಇದು ನಗರಕ್ಕೆ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದ್ದು, ಸುಲಭವಾಗಿಯೂ ಪಾರ್ಕಿಂಗ್ ಮಾಡಬಹುದು.
ಕಾರ್ಯಕ್ಷಮತೆ (Performance): ನೂತನ ವಿನ್‌ಫಾಸ್ಟ್ ವಿಎಫ್3 ಇವಿ, 18.64 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹಾಗೂ ರೇರ್ ಆಕ್ಸಲ್-ಮೌಂಟೆಡ್ ಮೋಟಾರ್ ಆಯ್ಕೆಯನ್ನು ಹೊಂದಿದೆ. 41 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ಈ ವಿನ್‌ಫಾಸ್ಟ್ ವಿಎಫ್3 ಎಲೆಕ್ಟ್ರಿಕ್ ಕಾರು, ಸಂಪೂರ್ಣ ಚಾರ್ಜ್‌ನಲ್ಲಿ ಬರೋಬ್ಬರಿ 215 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಕೇವಲ 5.3 ಸೆಕೆಂಡುಗಳಲ್ಲಿ 0 ರಿಂದ 50 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಇದರ ಬ್ಯಾಟರಿ ಪ್ಯಾಕ್, ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ 36 ನಿಮಿಷಗಳಲ್ಲಿ ಶೇಕಡ 10 ರಿಂದ 70% ಚಾರ್ಜ್ ಆಗಿ ಬಿಡುತ್ತದೆ.
ವೈಶಿಷ್ಟ್ಯಗಳು (Features): ಹೊಸ ವಿನ್‌ಫಾಸ್ಟ್ ವಿಎಫ್3 ಇವಿ, 10-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 2-ಸ್ಪೋಕ್ ಸ್ಟೀರಿಂಗ್ ವೀಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದಿದೆ.

ಬೆಲೆ (Price): ನೂತನ ವಿನ್‌ಫಾಸ್ಟ್ ವಿಎಫ್3 ಎಲೆಕ್ಟ್ರಿಕ್ ಕಾರು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ನೀರಿಕ್ಷೆಯಿದೆ. ಇದು ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಬರಬಹುದು ಎನ್ನಲಾಗಿದೆ. ಈ ಕಾರು ದೇಶೀಯ ಮಾರುಕಟ್ಟೆಯಲ್ಲಿ 2026ರಲ್ಲಿ ಬಿಡುಗಡೆಯಾಗಬಹುದು ಎಂದು ತಿಳಿದುಬಂದಿದೆ. ಆದರೆ, ನಿರ್ದಿಷ್ಟ ದಿನಾಂಕದ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications