VinFast: ಪುಟ್ಟ ವಿನ್‌ಫಾಸ್ಟ್ ವಿಎಫ್3 ಎಲೆಕ್ಟ್ರಿಕ್ ಕಾರು ಶೀಘ್ರ ಬಿಡುಗಡೆ.. 215 ಕಿ.ಮೀ ರೇಂಜ್.. ಕಡಿಮೆ ಬೆಲೆ?
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ವಿವಿಧ ಕಾರುಗಳು ಮಾರಾಟಗೊಳಿಸಲು ಯೋಜಿಸಿದೆ. ಇತ್ತೀಚೆಗೆ ನವದೆಹಲಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಒಂದಷ್ಟು ಹೊಚ್ಚ ಹೊಸ ಕಾರುಗಳನ್ನು ಪ್ರದರ್ಶಿಸಿತ್ತು. ಅವುಗಳಲ್ಲಿ 'ವಿಎಫ್3' ಎಲೆಕ್ಟ್ರಿಕ್ ಕಾರು ಸಾಕಷ್ಟು ಗಮನ ಸೆಳೆಯಿತು. ಬನ್ನಿ.. ಈ ಕಾರಿನ ನಿರೀಕ್ಷಿತ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.
ನೂತನ ವಿನ್‌ಫಾಸ್ಟ್ ವಿಎಫ್3 ಇವಿ (VinFast VF3 EV), ಪುಟ್ಟ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಕಾರಾಗಿದ್ದು, ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾಗಿರುವ ಹೆಡ್‌ಲೈಟ್‌ಗಳು, ಕ್ರೋಮ್ ಗ್ರಿಲ್ ಬಾರ್, ಕಪ್ಪು ಬಣ್ಣದ ಬಂಪರ್ ಹಾಗೂ 'ವಿ' ಆಕಾರಕ್ಕೆ ಹೋಲಿಕೆಯಾಗಬಲ್ಲ ಟೈಲ್‌ಗೇಟ್‌ನ್ನು ಪಡೆದಿದೆ.

ಈ ಕಾರು ಗಾತ್ರದಲ್ಲಿ ಮಾರುತಿ ಸುಜುಕಿ ಆಲ್ಟೋ ಕೆ10 (Maruti Suzuki Alto K10) ಹ್ಯಾಚ್‌ಬ್ಯಾಕ್ ರೀತಿಯಲ್ಲಿ ಕಾಣುತ್ತದೆ. ಜೊತೆಗೆ ಎಂಜಿ ಕಾಮೆಟ್ (MG Comet) ಎಲೆಕ್ಟ್ರಿಕ್ ಕಾರಿಗೆ ಹೋಲಿಕೆಯಾಗುವ '2-ಡೋರ್'ಗಳನ್ನು ಹೊಂದಿದೆ. 3,190 ಎಂಎಂ ಉದ್ದ, 1,679 ಎಂಎಂ ಅಗಲ & 1,652 ಎಂಎಂ ಎತ್ತರವಿದೆ. 2,075 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಹೊಸ ವಿನ್‌ಫಾಸ್ಟ್ ವಿಎಫ್3 ಇವಿ ಅತ್ಯುತ್ತಮವಾದ ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ. ಇದರಲ್ಲಿ ಉಪಯೋಗ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 40 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕಲಿದೆ ಎನ್ನಲಾಗಿದೆ. ಭರ್ತಿ ಚಾರ್ಜ್‌ನಲ್ಲಿ 215 ಕಿಲೋಮೀಟರ್ ರೇಂಜ್ (ಮೈಲೇಜ್) ಎಂದು ತಿಳಿದುಬಂದಿದೆ.

ನೂತನ ವಿನ್‌ಫಾಸ್ಟ್ ವಿಎಫ್3 ಇವಿ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10-ಇಂಚು) ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎನ್ನಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿರಬಹದು ಎಂದು ತಿಳಿದುಬಂದಿದೆ.
ಈ ಹೊಸ ವಿನ್‌ಫಾಸ್ಟ್ ವಿಎಫ್3 ಇವಿಯನ್ನು ತಮಿಳುನಾಡಿನ ತೂತುಕುಡಿಯಲ್ಲಿ ಕಂಪನಿಯಲ್ಲಿಯು ಹೊಸದಾಗಿ ನಿರ್ಮಿಸುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ. ನೂತನ ಕಾರು, ರೂ.10 ಲಕ್ಷಕ್ಕಿಂತ ಕಡಿಮೆ ಎಕ್ಸ್-ಶೋರೂಂ ದರವನ್ನು ಪಡೆದಿರಬಹುದು ಎನ್ನಲಾಗಿದೆ. ಜೊತೆಗೆ 4 ಆಸನದೊಂದಿಗೂ ಗ್ರಾಹಕರಿಗೆ ಸಿಗಲಿದ್ದು, ಅಕ್ಟೋಬರ್‌ನಲ್ಲಿ ಮಾರಾಟಕ್ಕೆ ಬರುವ ನೀರಿಕ್ಷೆಯಿದೆ.

ಇನ್ನು, ವಿನ್‌ಫಾಸ್ಟ್ ಕಂಪನಿಯು ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ವಿವಿಧ ಸ್ಕೂಟರ್‌ಗಳನ್ನು ಕೂಡ ಪ್ರದರ್ಶನ ಮಾಡಿತ್ತು. ಪ್ರಮುಖವಾಗಿ ಇವೊ ಎಸ್, ಥಿಯೋನ್ ಎಸ್, ಕ್ಲಾರಾ ಎಸ್, ಫೆಲಿಜ್ ಎಸ್, ವೆಂಟೊ ಎಸ್ ಹಾಗೂ ಡ್ರಗ್ನ್‌ಫ್ಲೈ ಹೆಸರಿನ ಸ್ಕೂಟರ್‌ಗಳನ್ನು ಬಹಿರಂಗಪಡಿಸಿತ್ತು. ಇವುಗಳು, ಗರಿಷ್ಠ ರೇಂಜ್ ಹಾಗೂ ಅತಿ ಕಡಿಮೆಯಲ್ಲಿಯೂ ಮಾರಾಟಕ್ಕೆ ಬರುವ ನಿರೀಕ್ಷೆಯೂ ಇದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








