ನಾಳೆಯಿಂದ ಹೊಸ ಕಂಪನಿ ವಿನ್‌ಫಾಸ್ಟ್‌ನ ನೂತನ ಕಾರುಗಳಿಗೆ ಬುಕ್ಕಿಂಗ್ ಶುರು.. ನಿರೀಕ್ಷಿತ ಬೆಲೆ ಎಷ್ಟು, ವಿಶೇಷತೆಗಳೇನು?

ವಿಯೆಟ್ನಾಂನ ವಿನ್‌ಫಾಸ್ಟ್ (VinFast) ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿದೆ. ಅತಿ ಶೀಘ್ರದಲ್ಲೇ ದೇಶೀಯ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಮೊದಲಿಗೆ ವಿಎಫ್6 (VF6) ಹಾಗೂ ವಿಎಫ್7 (VF7) ಹೆಸರಿನ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಕಾರುಗಳು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಮಾರಾಟಕ್ಕೆ ಬರುವ ಎಲ್ಲ ಸಾಧ್ಯತೆಗಳಿವೆ.

ನಾಳೆಯಿಂದ (ಜುಲೈ 15) ವಿನ್‌ಫಾಸ್ಟ್ ಕಂಪನಿಯು ಹೊಚ್ಚ ಹೊಸ ವಿಎಫ್6 & ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಗಳಿಗಾಗಿ ಪ್ರಿ-ಬುಕ್ಕಿಂಗ್‌ನ್ನು ಆರಂಭ ಮಾಡಲಿದೆ. ಮೊದಲಿಗೆ ದೇಶಾದ್ಯಂತ 12 ರಾಜ್ಯಗಳಲ್ಲಿ ಇವೆರೆಡು ಕಾರುಗಳನ್ನು ಮಾರಾಟಗೊಳಿಸಲು ಕಂಪನಿಯು ನಿರ್ಧಾರ ಮಾಡಿದೆ. ಇದಕ್ಕಾಗಿ ಕಂಪನಿಯು 13 ಡೀಲರ್ ಪಾಟ್ನರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

VinFast VF6 and VF7 Electric Suvs Pre-Bookings Open Tomorrow Details

ಕೆಲವೇ ದಿನಗಳಲ್ಲಿ ದೇಶದ 27 ನಗರಗಳಲ್ಲಿ ಕಂಪನಿಯ 32 ಡೀಲರ್‌ಶಿಪ್‌ಗಳು ಕಾರ್ಯಾರಂಭ ಮಾಡಲಿವೆ. ವರ್ಷಾಂತ್ಯದೊಳಗೆ ಆ ಸಂಖ್ಯೆ 35ಕ್ಕೆ ತಲುಪಲಿದೆ. ವಿಶೇಷತೆವಾಗಿ ನವದೆಹಲಿ, ಬೆಂಗಳೂರು, ಗುರುಗ್ರಾಮ, ನೋಯ್ಡಾ, ಚೆನ್ನೈ, ಹೈದರಾಬಾದ್, ಪುಣೆ, ಜೈಪುರ, ಅಹಮದಾಬಾದ್, ಕೋಲ್ಕತ್ತಾ, ಕೊಚ್ಚಿನ್, ಭುವನೇಶ್ವರ, ತಿರುವನಂತಪುರ, ಚಂಡೀಗಢ, ಲಕ್ನೋ, ಕೊಯಮತ್ತೂರು, ಸೂರತ್, ಕ್ಯಾಲಿಕಟ್, ವಿಶಾಖಪಟ್ಟಣಂ, ವಿಜಯವಾಡ, ಶಿಮ್ಲಾ, ಆಗ್ರಾ, ಬರೋಡಾ ಹಾಗೂ ಗೋವಾದಂತಹ ನಗರಗಳಲ್ಲಿ ವಿನ್‌ಫಾಸ್ಟ್‌ನ ಡೀಲರ್‌ಶಿಪ್‌ಗಳು ತಲೆ ಎತ್ತಲಿವೆ.

ವಿನ್‌ಫಾಸ್ಟ್ ವಿಎಫ್6 (VinFast VF6):

ಈ ಎಲೆಕ್ಟ್ರಿಕ್ ಎಸ್‌ಯುವಿಯು ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ದೇಶೀಯವಾಗಿ ರೂ.18 ಲಕ್ಷದಿಂದ ರೂ.24 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಅತುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಸಿಗ್ನೇಚರ್ ಎಲ್ಇಡಿ ಹೆಡ್‌ಲೈಟ್‌ಗಳು, ಫುಲ್- ವಿಡ್ತ್ ಡಿಆರ್‌ಎಲ್‌ಗಳು ಮತ್ತು19-ಇಂಚಿರುವ ಅಲಾಯ್ ವೀಲ್‌ಗಳನ್ನು ಹೊಂದಿದೆ.

VinFast VF6 and VF7 Electric Suvs Pre-Bookings Open Tomorrow Details

ನೂತನ ವಿನ್‌ಫಾಸ್ಟ್ ವಿಎಫ್6 ಎಲೆಕ್ಟ್ರಿಕ್ ಕಾರು, 59.6 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 379 ರಿಂದ 410 ಕಿ.ಮೀ ವರೆಗೂ ಓಡಬಲ್ಲದು. ಭಾರತದಲ್ಲೂ ಈ ಪವರ್‌ಟ್ರೇನ್‌ ಆಯ್ಕೆಯಲ್ಲಿಯೇ ಮಾರಾಟಕ್ಕೆ ಬರುವ ಎಲ್ಲ ಲಕ್ಷಣಗಳಿದ್ದು, 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿರಲಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.

ಹೊಸ ವಿಎಫ್6 ಎಸ್‌ಯುವಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.9-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್-ಅಪ್ ಡಿಸ್‌ಪ್ಲೇ, ರೇರ್ ಎಸಿ ವೆಂಟ್‌ಗಳು ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯೂ ಇದೆ.

ವಿನ್‌ಫಾಸ್ಟ್ ವಿಎಫ್7 (VinFast VF7):

ಇದು ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ರೂ.50 ದರವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಕಾರು ಕೂಡ ಜಾಗತಿಕವಾಗಿ ಖರೀದಿಗೆ ಲಭ್ಯವಿದ್ದು, 75.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 431 ರಿಂದ 450 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ದೇಶದಲ್ಲೂ ಇದೇ ಪವರ್‌ಟ್ರೇನ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ವಿಎಫ್7 ಎಸ್‌ಯುವಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (15-ಇಂಚು), ಹೆಡ್ಸ್ ಅಪ್ ಡಿಸ್‌ಪ್ಲೇ, ಪನೋರಮಿಕ್ ಗ್ಲಾಸ್ ರೂಫ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದರಲ್ಲಿ 5 ಆಸನಗಳು ಇವೆ. ಪ್ರಯಾಣಿಕರ ರಕ್ಷಣೆಗಾಗಿ 8 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಬಹುದು ಎನ್ನಲಾಗಿದೆ.

Article Published On: Monday, July 14, 2025, 11:00 [IST]
English summary
Vinfast vf6 and vf7 electric suvs pre bookings open tomorrow details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+