ಭಾರತದಲ್ಲಿ ಹೊಸ ಕಾರು ಕಂಪನಿಯ ಜೋರು: ಮೊನ್ನೆಯಷ್ಟೆ ಬುಕಿಂಗ್ ತೆರೆದು ಆಗಲೆ ಡೆಲಿವರಿ ಆರಂಭ
ವಿನ್‌ಫಾಸ್ಟ್ (VinFast) ತನ್ನ ಎಲೆಕ್ಟ್ರಿಕ್ ಎಸ್‌ಯುವಿಗಳಾದ ವಿಎಫ್6 ಮತ್ತು ವಿಎಫ್7 ಕಾರುಗಳ ವಿತರಣೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ. ಎರಡೂ ಮಾಡಲ್‌ಗಳನ್ನು ತಮಿಳುನಾಡಿನ ತೂತುಕುಡಿಯಲ್ಲಿರುವ ವಿನ್‌ಫಾಸ್ಟ್ ಸ್ಥಾವರದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ. ಇದು ಭಾರತವನ್ನು ಕಂಪನಿಯ 17ನೇ ಜಾಗತಿಕ ಮಾರುಕಟ್ಟೆಯನ್ನಾಗಿ ಮಾಡಿದೆ. ಭಾರತದ ಬೆಳೆಯುತ್ತಿರುವ EV ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಈ ಎರಡು ಮಾಡಲ್‌ಗಳ ಬೆಲೆಯನ್ನು ಆಕ್ರಮಣಕಾರಿಯಾಗಿ ನಿಗದಿಪಡಿಸಿದೆ, VF6 ಕೈಗೆಟುಕುವ ಬೆಲೆ ಮತ್ತು ರೇಂಜ್ ಮೇಲೆ ಕೇಂದ್ರೀಕರಿಸುತ್ತದೆ ಮತ್ತು VF7 ಪ್ರೀಮಿಯಂ ಮಧ್ಯಮ ಗಾತ್ರದ ಎಲೆಕ್ಟ್ರಿಕ್ SUV ವಿಭಾಗವನ್ನು ಗುರಿಯಾಗಿರಿಸಿಕೊಂಡಿದೆ.
ವಿನ್‌ಫಾಸ್ಟ್ VF6: ವಿಎಫ್ - 6 ಕಾರಿನ ಆರಂಭಿಕ ಎಕ್ಸ್ ಶೋರೂಂ ಬೆಲೆಯು ರೂ. 16.49 ಲಕ್ಷಗಳಾಗಿದ್ದು, ಅರ್ಥ್, ವಿಂಡ್ ಮತ್ತು ವಿಂಡ್ ಇನ್ಫಿನಿಟಿ ಎಂಬ ಮೂರು ವಿಭಿನ್ನ ರೂಪಾಂತರಗಳಲ್ಲಿ ಬರುತ್ತದೆ. ಈ ಟಾಪ್ ವೇರಿಯಂಟ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.18.29 ಲಕ್ಷಗಳಾಗಿದೆ. ಇದು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಮತ್ತು ಮಹೀಂದ್ರಾ ಬಿಇ- 6 ಕಾರುಗಳಿಗೆ ಪೈಪೋಟಿ ನೀಡುತ್ತದೆ.

ವಿನ್‌ಫಾಸ್ಟ್ VF6 ಕಾರಿನಲ್ಲಿ 59.6 kWh ಬ್ಯಾಟರಿ ಪ್ಯಾಕ್ ಮತ್ತು ಫ್ರಂಟ್ - ಆಕ್ಸಲ್ - ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಈ ಕಾರು 204 hp ವರೆಗೆ ಪವರ್ ಹಾಗೂ 310 Nm ವರೆಗೆ ಟಾರ್ಕ್ ಹೊರಹಾಕುತ್ತದೆ. ಒಂದೇ ಚಾರ್ಜ್‌ನಲ್ಲಿ 463 ರಿಂದ 468 ಕಿ.ಮೀಗಳ ARAI-ಪ್ರಮಾಣೀಕೃತ ರೇಂಜ್ ನೀಡುತ್ತದೆ. ಕೇವಲ 25 ನಿಮಿಷಗಳಲ್ಲಿ ಶೇಕಡಾ 70 ರಷ್ಟು ಚಾರ್ಜಿಂಗ್ ಆಗುತ್ತದೆ.
ಇಂಟೀರಿಯರ್‌ನಲ್ಲಿ VF6 12.9 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ADAS, ಹೆಡ್-ಅಪ್ ಡಿಸ್ ಪ್ಲೇ (HUD), ಏರ್ ಪ್ಯೂರಿಫೈಯರ್ ಮತ್ತು 360 ° ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ವಿಷಯದಲ್ಲಿ, ಇದು ಎಬಿಎಸ್, ಇಬಿಡಿ ಮತ್ತು ಏಳು ಏರ್ ಬ್ಯಾಗ್ ಗಳನ್ನು ಪಡೆದಿದೆ.

ವಿನ್‌ಫಾಸ್ಟ್ VF7: ಇದು ಸಣ್ಣ ವಿನ್ ಫಾಸ್ಟ್ ನಂತೆಯೇ ಆರು ಬಣ್ಣಗಳಲ್ಲಿ ಬರುತ್ತದೆ. ಇದು ಕ್ಲಾಸಿಯರ್ ಬಾಹ್ಯ ವಿನ್ಯಾಸ ಮತ್ತು ದಪ್ಪ ಬಾಡಿಲೈನ್ ಗಳನ್ನು ಹೊಂದಿದೆ. ಕ್ಯಾಬಿನ್ ವಿಎಫ್ 6 ನಂತೆಯೇ ಅದೇ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು 2 ವ್ಹೀಲ್ ಡ್ರೈವ್ (2WD) ಮತ್ತು ಆಲ್ ವೀಲ್ ಡ್ರೈವ್ (AWD) ಆವೃತ್ತಿಗಳಲ್ಲಿ ನೀಡಲಾಗುತ್ತದೆ.
ವಿಎಫ್7 ಎಕ್ಸ್ ಶೋರೂಂ ಬೆಲೆಯು ರೂ.20.89 ಲಕ್ಷದಿಂದ ಪ್ರಾರಂಭವಾಗುತ್ತದೆ. ಅರ್ಥ್, ವಿಂಡ್, ವಿಂಡ್ ಇನ್ಫಿನಿಟಿ, ಸ್ಕೈ ಮತ್ತು ಸ್ಕೈ ಇನ್ಫಿನಿಟಿ ಎಂಬ ಐದು ವಿಭಿನ್ನ ವೇರಿಯೆಂಟ್‌ಗಳಲ್ಲಿ ಬರುತ್ತದೆ. 59.6kWh ಮತ್ತು 70.8 kWh ಎಂಬ ಎರಡು ಬ್ಯಾಟರಿ ಪ್ಯಾಕ್ ಗಳನ್ನು ನೀಡಲಾಗುತ್ತದೆ. 175 ಬಿಹೆಚ್ ಪವರ್ ಹಾಗೂ 250 ಎನ್ಎಂ ಟಾರ್ಕ್ ಹೊರಹಾಕುವ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಬರುತ್ತದೆ.

ಎರಡನೆಯದು 201 ಬಿಹೆಚ್ ಪವರ್ ಹಾಗೂ 310 ಎನ್ಎಂ ಟಾರ್ಕ್ ಹೊರಹಾಕುವ ಮೋಟಾರ್ ಪಡೆದಿದೆ. ಪ್ರತಿ ಚಾರ್ಜ್‌ಗೆ ಸುಮಾರು 510 ಕಿ.ಮೀ ರೇಂಜ್ ನೀಡುತ್ತದೆ. ಈ ಎರಡೂ ಕಾರುಗಳ ಡೆಲಿವರಿಗಳು ಕೊಚ್ಚಿ ಮತ್ತು ಜೈಪುರದಂತಹ ಪ್ರಮುಖ ನಗರಗಳಲ್ಲಿ ಆರಂಭಿಕ ಗ್ರಾಹಕ ವಿತರಣೆಗಳು ಪ್ರಾರಂಭವಾಗಿವೆ. ಎರಡೂ ಕಾರುಗಳು 5 - ಸ್ಟಾರ್ ಗ್ಲೋಬಲ್ NCAP ಸುರಕ್ಷತಾ ರೇಟಿಂಗ್ ಪಡೆದುಕೊಂಡಿವೆ.
ಕಂಪನಿಯು ತನ್ನ ಗ್ರಾಹಕರ ಜೀವನವನ್ನು ಸುಲಭಗೊಳಿಸಲು, ಎರಡೂ ಕಾರುಗಳ ಮೇಲೆ 10 ವರ್ಷ ಅಥವಾ 2,00,000 ಕಿಮೀ ವಾರಂಟಿಯನ್ನು ಸಹ ನೀಡುತ್ತಿದೆ. ಜೊತೆಗೆ, VF7 ಮತ್ತು Vf6 ನಲ್ಲಿ ಕ್ರಮವಾಗಿ 75,000 ಮತ್ತು 60,000 ರೂ.ಗಳ ಚಾರ್ಜಿಂಗ್ ಪ್ರಯೋಜನಗಳನ್ನು ಸಹ ಪಡೆಯಬಹುದು ಎಂದು ಹೇಳಿಕೊಂಡಿದೆ.


Click it and Unblock the Notifications








