ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನಿಂದ VF7 ಕಾರಿನ ಪರೀಕ್ಷೆ.. ಮುಂದಿನ ತಿಂಗಳೇ ಬಿಡುಗಡೆ, ಬೆಲೆ ಎಷ್ಟು.. ವಿಶೇಷತೆಗಳೇನು?
ವಿಯೆಟ್ನಾಂಗೆ ಸೇರಿರುವ ವಿನ್‌ಫಾಸ್ಟ್ (VinFast), ಭಾರತದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಹಣಿಯಾಗುತ್ತಿದೆ. ಅದರ ಭಾಗವಾಗಿ ತಮಿಳುನಾಡಿನ ತೂತುಕುಡಿಯಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಶುರು ಮಾಡಿದ್ದು, ಚೆನ್ನೈ ಹಾಗೂ ಗುಜರಾತ್‌ನ ಸೂರತ್‌ನಲ್ಲಿ ಡೀಲರ್‌ಶಿಪ್‌ನ್ನು ಸ್ಥಾಪಿಸಿದೆ. ಈ ವರ್ಷಾಂತ್ಯದೊಳಗೆ ದೇಶದ 27ಕ್ಕೂ ಅಧಿಕ ನಗರಗಳಲ್ಲಿ ಒಟ್ಟು 35 ಡೀಲರ್‌ಶಿಪ್‌ಗಳನ್ನು ತೆರೆಯಲು ಉದ್ದೇಶಿಸಿದೆ. ಬಹುತೇಕ ಮುಂದಿನ ತಿಂಗಳು (ಸೆಪ್ಟೆಂಬರ್) ಹೊಚ್ಚ ಹೊಸ ವಿಎಫ್6 (VF6) ಮತ್ತು ವಿಎಫ್7 (VF7) ಹೆಸರಿನ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ. ಈಗಾಗಲೇ, ಇವೆರೆಡು ಕಾರುಗಳಿಗಾಗಿ ಪ್ರಿ-ಬುಕ್ಕಿಂಗ್ ಪ್ರಾರಂಭವಾಗಿದೆ. ಆಸಕ್ತರು ರೂ.21,000 ಮುಂಗಡ ಮೊತ್ತವನ್ನು ಪಾವತಿಸಿ, ಕಾಯ್ದಿರಿಸಬಹುದು.
ಸದ್ಯ ವಿನ್‌ಫಾಸ್ಟ್ ವಿಎಫ್7 (Vinfast VF7) ಎಲೆಕ್ಟ್ರಿಕ್ ಎಸ್‌ಯುವಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಅದಕ್ಕೆ ಸಂಬಂಧಿಸಿದ ಸ್ಪೈ ಫೋಟೋಗಳು ಇಂಟರ್‌ನೆಟ್‌ನಲ್ಲಿಯೂ ಹರಿದಾಡುತ್ತಿವೆ. ಈ ಕಾರು ಟೈಲ್‌ಗೇಟ್‌ನಲ್ಲಿ ಕನೆಕ್ಟ್ಡ್ ಎಲ್ಇಡಿ ಸ್ಟ್ರಿಪ್ ಮತ್ತು 19-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿರುವುದನ್ನು ಕೂಡ ಕಾಣಬಹುದಾಗಿದೆ.

ನೂತನ ವಿಎಫ್7 ಕಾರು ಅರ್ಥ್, ವಿಂಡ್ ಮತ್ತು ಸ್ಕೈ ಎಂಬ 3 ರೂಪಾಂತರಗಳೊಂದಿಗೆ (ವೇರಿಯೆಂಟ್) ಲಭ್ಯವಾಗಲಿದೆ. ಜೊತೆಗೆ ಜೆಟ್ ಬ್ಲ್ಯಾಕ್, ಡೆಸಾಟ್ ಸಿಲ್ವರ್, ಇನ್ಫಿನಿಟಿ ಬ್ಲಾಂಕ್, ಕ್ರಿಮ್ಸನ್ ರೆಡ್ ಹಾಗೂ ಜೆನಿತ್ ಗ್ರೇ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗಬಹುದು ಎಂದು ಈ ಹಿಂದೆ ವರದಿಯಾಗಿತ್ತು.
ಅಂತರರಾಷ್ಟ್ರೀಯ ದೊರೆಯುವ ವಿನ್‌ಫಾಸ್ಟ್ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿ, ಶಕ್ತಿಯುತ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 75.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 431 ರಿಂದ 450 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ದೇಶದಲ್ಲೂ ಇದೇ ರೂಪದಲ್ಲಿ ಮಾರಾಟಕ್ಕೆ ಬರುವ ಎಲ್ಲ ಸಾಧ್ಯತೆಯಿದೆ.

ಹೊಸ ವಿಎಫ್7 ಕಾರು ಸರಿ ಸುಮಾರು ರೂ.23 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. 5 ಆಸನ ಆಯ್ಕೆಯನ್ನು ಹೊಂದಿರಲಿದೆ. 15-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಗ್ಲಾಸ್ ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 8 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ.
ವಿನ್‌ಫಾಸ್ಟ್ ವಿಎಫ್6 (VinFast VF6) ಕೂಡ ಬಿಡುಗಡೆಯಾಗಲಿದೆ:
ಈ ಎಸ್‌ಯುವಿಯು ರೂ.18 ಲಕ್ಷದಿಂದ ರೂ.24 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಅರ್ಥ್ ಮತ್ತು ವಿಂಡ್ ಎಂಬ ಎರಡು ರೂಪಾಂತರಗಳನ್ನು (ವೇರಿಯೆಂಟ್) ಪಡೆದಿರಲಿದೆ. ಜೆಟ್ ಬ್ಲ್ಯಾಕ್, ಡೆಸಾಟ್ ಸಿಲ್ವರ್, ಇನ್ಫಿನಿಟಿ ಬ್ಲಾಂಕ್, ಕ್ರಿಮ್ಸನ್ ರೆಡ್, ಜೆನಿತ್ ಗ್ರೇ ಮತ್ತು ಅರ್ಬನ್ ಮಿಂಟ್ ಎಂಬ ಬಣ್ಣಗಳೊಂದಿಗೆ ದೊರೆಯಲಿದೆ ಎಂದು ಹೇಳಲಾಗಿದೆ.

ನೂತನ ವಿಎಫ್6 ಎಲೆಕ್ಟ್ರಿಕ್ ಕಾರು ವಿದೇಶದಲ್ಲೂ ದೊರೆಯಲಿದ್ದು, 59.6 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 379 ರಿಂದ 410 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. ಭಾರತದಲ್ಲೂ ಇದೇ ರೀತಿಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಅತ್ಯಾಧುನಿಕವಾದ ವಿನ್ಯಾಸ ಪಡೆದಿರಲಿದ್ದು, 'ವಿ' ಆಕಾರಕ್ಕೆ ಹೋಲಿಕೆಯಾಗಬಲ್ಲ ಸಿಗ್ನೇಚರ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು 19-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿರುವುದು ಸಹ ಖಚಿತವಾಗಿದೆ.
ಇದು 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 12.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್ ಅಪ್ ಡಿಸ್‌ಪ್ಲೇ, ಡುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್ ಹಾಗೂ ರೇರ್ ಎಸಿ ವೆಂಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ.
Source Link: Indian Express


Click it and Unblock the Notifications








