ಫೋಕ್ಸ್‌ವ್ಯಾಗನ್ ಕಾರುಗಳ ಮೇಲೆ ಭಾರೀ ಬೆಲೆ ಇಳಿಕೆ: ಪ್ರಮುಖ ಮಾಡಲ್ ಮೇಲೆ 3 ಲಕ್ಷ ಕಡಿತ
ಫೋಕ್ಸ್‌ವ್ಯಾಗನ್ ಇಂಡಿಯಾ ಸಂಪೂರ್ಣ ಜಿಎಸ್‌ಟಿ ದರ ಕಡಿತ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ತನ್ನ ವರ್ಟಸ್, ಟೈಗುನ್ ಮತ್ತು ಟಿಗುವಾನ್ ಮೇಲೆ ಜಿಎಸ್‌ಟಿ ದರ ಕಡಿತ ಪ್ರಯೋಜನಗಳು ಅನ್ವಯವಾಗುತ್ತವೆ. ನಿಮ್ಮ ಆಯ್ಕೆಯ ಮಾದರಿಯ ನಿಖರವಾದ ಬೆಲೆ ವಿವರಗಳು ಮತ್ತು ನಿರ್ದಿಷ್ಟ ಪ್ರಯೋಜನಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಅಧಿಕೃತ ವೋಕ್ಸ್‌ವ್ಯಾಗನ್ ಶೋ ರೂಂ ಅನ್ನು ಸಂಪರ್ಕಿಸಿ ಎಂದು ಕಂಪನಿ ಹೇಳಿದೆ.
ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಸಂಪೂರ್ಣ ಮಾದರಿ ಶ್ರೇಣಿಯಲ್ಲಿ ಜಿಎಸ್‌ಟಿ 2.0 ಬೆಲೆ ಕಡಿತ ಪ್ರಯೋಜನಗಳನ್ನು ಸಂಪೂರ್ಣವಾಗಿ ನೀಡುತ್ತಿದ್ದು, ಕಂಪನಿಯ ಪ್ರಮುಖ ಮಾಡಲ್‌ಗಳಾದ ವರ್ಟಸ್, ಟೈಗುನ್ ಮತ್ತು ಟಿಗುವಾನ್ ಆರ್ - ಲೈನ್‌ನಂತಹ ಕಾರುಗಳು ಸೆಪ್ಟೆಂಬರ್ 22, 2025 ರಿಂದ ಹೆಚ್ಚು ಕೈಗೆಟುಕುವ ಬೆಲೆಗೆ ಸಿಗಲಿವೆ.

ಜಿಎಸ್‌ಟಿ 2.0 ಬೆಲೆ ಕಡಿತ ವಿವರಗಳು: ಜಿಎಸ್‌ಟಿ 2.0 ಸುಧಾರಣೆಗಳು ಸಣ್ಣ ಕಾರುಗಳು ಮತ್ತು ಅರ್ಹ ಮಾಡಲ್‌ಗಳ ಮೇಲಿನ ತೆರಿಗೆಯನ್ನು 28% ರಿಂದ 18% ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ ಖರೀದಿದಾರರಿಗೆ ಎಕ್ಸ್ - ಶೋರೂಂ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈ ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 22, 2025 ರಿಂದ ಬುಕಿಂಗ್ ಮತ್ತು ವಿತರಣೆಗಳಿಗೆ ಅನ್ವಯಿಸುತ್ತವೆ ಎಂದು ಫೋಕ್ಸ್‌ವ್ಯಾಗನ್ ಹೇಳಿದೆ.
ಮಾಡಲ್‌ವಾರು ಬೆಲೆ ಕಡಿತಗಳು: ಫೋಕ್ಸ್‌ವ್ಯಾಗನ್ ವರ್ಟಸ್ ಮೇಲೆ ರೂ. 66,900 ವರೆಗೆ ಬೆಲೆ ಇಳಿಕೆ, ಫೋಕ್ಸ್‌ವ್ಯಾಗನ್ ಟೈಗುನ್ ಮೇಲೆ ರೂ. 68,400 ವರೆಗೆ ಬೆಲೆ ಇಳಿಕೆ, ಟಿಗುವಾನ್ ಆರ್-ಲೈನ್ ಮೇಲೆ ರೂ. 3,26,900 ವರೆಗೆ ಬೆಲೆ ಇಳಿಕೆಯಾಗಿದ್ದು, ಇದು ಬ್ರಾಂಡ್‌ನೊಳಗಿನ ಅತಿದೊಡ್ಡ ಬೆಲೆ ಇಳಿಕೆ ಎಂದು ಹೇಳಬಹುದು.

ಜಿಎಸ್‌ಟಿ 2.0 ಕ್ರಮವು ಪ್ರಮುಖ ಹಬ್ಬಗಳ ಮೊದಲು ಬರುತ್ತಿರುವುದರಿಂದ ತೆರಿಗೆ ಕಡಿತಗಳೊಂದಿಗೆ, ಇದು ಹಬ್ಬದ ಋತುವಿನಲ್ಲಿ ಹೊಸ ಬೋನಸ್‌ಗಳು ಹಾಗೂ ಸ್ಪೆಷಲ್ ಆಫರ್‌ಗಳನ್ನು ಸಹ ತರಲಿದೆ. ಒಟ್ಟಾರೆಯಾಗಿ ಫೋಕ್ಸ್‌ವ್ಯಾಗನ್ ಖರೀದಿದಾರರಿಗೆ ಕಡಿಮೆ ಬೆಲೆಗಳನ್ನು ನೀಡಲಿದೆ. ಖರೀದಿದಾರರು ಕಡಿಮೆ ಬೆಲೆಗಳು ಮತ್ತು ಡೀಲರ್ - ಮಟ್ಟದ ಪ್ರಚಾರಗಳ ಲಾಭವನ್ನು ಪಡೆಯಲು ಪ್ರೋತ್ಸಾಹಿಸಲಿದೆ.
ಈ ಆಫರ್‌ಗಳು ಫೋಕ್ಸ್‌ವ್ಯಾಗನ್ ಮಾಡಲ್‌ಗಳನ್ನು ಗಮನಾರ್ಹವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ. ಜೊತೆಗೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ದಾಸ್ತಾನು ವಹಿವಾಟನ್ನು ಹೆಚ್ಚಿಸಬಹುದು. ಪೂರ್ಣ ಜಿಎಸ್‌ಟಿ 2.0 ಪ್ರಯೋಜನಗಳನ್ನು ಮತ್ತು ಹೆಚ್ಚುವರಿ ರಿಯಾಯಿತಿಗಳನ್ನು ನೀಡುವ ಫೋಕ್ಸ್‌ವ್ಯಾಗನ್ ನಿರ್ಧಾರವು ಮುಂಬರುವ ಹಬ್ಬದ ಸೀಸನ್‌ನಲ್ಲಿ ಅತ್ಯಂತ ಆಕ್ರಮಣಕಾರಿ ಬೆಲೆ ಇಳಿಕೆ ಮೂಲಕ ಹೆಚ್ಚಿನ ಲಾಭ ತಂದುಕೊಡುವ ನಿರೀಕ್ಷೆಯಿದೆ.

ಹೊಸ ಜಿಎಸ್‌ಟಿ ಇಳಿಕೆಯು ವಾಹನ ಬೆಲೆಗಳಲ್ಲಿ ಗ್ರಾಹಕರಿಗೆ ಭಾರೀ ಉಳಿತಾಯವನ್ನು ತಂದುಕೊಟ್ಟಿದೆ. ಆದರೆ ಎಲೆಕ್ಟ್ರಿಕ್ ವಾಹನಗಳು ಕಡಿಮೆ ಶೇ5 ಸ್ಲ್ಯಾಬ್‌ನಲ್ಲಿ ಉಳಿದಿದ್ದು ಯಾವುದೇ ಬದಲಾವಣೆಯಾಗಿಲ್ಲ. ಒಟ್ಟಾರೆ ದೇಶೀಯ ಬೇಡಿಕೆಯನ್ನು ಹೆಚ್ಚಿಸುವುದು, ವ್ಯಾಪಾರ ಕಾರ್ಯಾಚರಣೆಗಳನ್ನು ಸರಾಗಗೊಳಿಸುವುದು ಮತ್ತು ಸಾಮಾನ್ಯ ಗ್ರಾಹಕರಿಗೆ ಹೆಚ್ಚಿನ ಕಾರುಗಳನ್ನು ಖರೀದಿಸುವಂತೆ ಮಾಡುವುದು ಈ ಕ್ರಮದ ಗುರಿಯಾಗಿದೆ.
ಒಟ್ಟಾರೆ ಬೆಲೆ ಕಡಿತದಿಂದ ಕಡಿಮೆ ಜಿಎಸ್‌ಟಿ ದರದ ನೇರ ಪರಿಣಾಮವಾಗಿ ಖರೀದಿದಾರರು ಹೆಚ್ಚಿನ ಪ್ರಯಾಣಿಕ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಮೇಲೆ ಶೇ10 ಕಡಿತವನ್ನು ಪಡೆದುಕೊಂಡಿದ್ದಾರೆ. ಇದು ಹಬ್ಬದ ಋತುವಿನಲ್ಲಿ ಕಾರು ಮಾರಾಟದಲ್ಲಿ ಬಲವಾದ ಬೆಳವಣಿಗೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








