Volkswagen: ಬಹುನಿರೀಕ್ಷಿತ ಕಾರಿಗೆ ಪ್ರೀ-ಬುಕಿಂಗ್ ಪ್ರಾರಂಭ: ಶೀಘ್ರದಲ್ಲೆ ಗಾಲ್ಫ್ ಜಿಟಿಐ ಬಿಡುಗಡೆ!

ಫೋಕ್ಸ್‌ವ್ಯಾಗನ್ ಇಂಡಿಯಾ (Volkswagen India) ಇಂದು ಬಹುನಿರೀಕ್ಷಿತ ಹೊಸ ಟಿಗುವಾನ್ ಆರ್-ಲೈನ್‌ (Tiguan R-Line) ಪ್ರೀ-ಬುಕಿಂಗ್‌ಗಳನ್ನು ತೆರೆದಿದ್ದು, ಬ್ರ್ಯಾಂಡ್‌ನಿಂದ ವಿಶ್ವಾದ್ಯಂತ ಹೆಚ್ಚು ಮಾರಾಟವಾಗುವ ಈ ಕಾರು ಭಾರತೀಯ ಗ್ರಾಹಕರಿಗೆ ಶೀಘ್ರದಲ್ಲೆ ಹತ್ತಿರವಾಗಲಿದೆ. ಗ್ರಾಹಕರು ದೇಶಾದ್ಯಂತದ ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗಳಲ್ಲಿ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಪ್ರೀ-ಬುಕಿಂಗ್‌ಗಳನ್ನು ಮಾಡಬಹುದು. ಇದರ ಜೊತೆಗೆ, ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗಾಲ್ಫ್ ಜಿಟಿಐ (Golf GTI) ಕಾರನ್ನು ಕೂಡ ಭಾರತದಲ್ಲಿ ಪರಿಚಯಿಸುವ ಬಗ್ಗೆ ಗ್ರಾಹಕರ ಆಸಕ್ತಿಯನ್ನು ಸ್ವೀಕರಿಸಲು ಪ್ರಾರಂಭಿಸಿದೆ.

ಭಾರತದಲ್ಲಿ ಈ ಐಕಾನಿಕ್ ಮಾದರಿಗಳ ಬಿಡುಗಡೆಯು, ಉನ್ನತ ಎಂಜಿನಿಯರಿಂಗ್, ಪರ್ಫಾಮೆನ್ಸ್ ಮತ್ತು ನಾವೀನ್ಯತೆಯನ್ನು ಒಳಗೊಂಡಿರುವ ಮುಂದುವರಿದ ಮತ್ತು ಜಾಗತಿಕ ಕಾರುಗಳನ್ನು ತಲುಪಿಸುವ ಕಂಪನಿಯ ಬದ್ಧತೆಯನ್ನು ಒತ್ತಿಹೇಳುತ್ತದೆ. ಇನ್ನು ಟಿಗುವಾನ್ ಆರ್-ಲೈನ್ ವಿಷಯಕ್ಕೆ ಬಂದರೆ, ಇದು ಪರ್ಫಾಮೆನ್ಸ್ ಎಸ್‌ಯುವಿಗಳ ಸಾಲಿನಲ್ಲಿ ಅಗ್ರಸ್ಥಾನವನ್ನು ಪಡೆದಿದೆ, ಸ್ಪೋರ್ಟಿ ಡಿಸೈನ್ ಹಾಗೂ ನಿಖರ ಎಂಜಿನಿಯರಿಂಗ್‌ನೊಂದಿಗೆ ಎಂತವರನ್ನು ಸೆಳೆಯುತ್ತದೆ.

volkswagen-india-commences-pre-bookings-for-tiguan-r-line

ಇದರ ಎಂಜಿನ್ ವಿಷಯಕ್ಕೆ ಬಂದರೆ 204 ಪಿಎಸ್ ಪವರ್ ಮತ್ತು 320 ಎನ್‌ಎಂ ಟಾರ್ಕ್‌ನೊಂದಿಗೆ ಸಜ್ಜುಗೊಂಡಿರುವ ಟಿಗುವಾನ್ ಆರ್-ಲೈನ್, ತೀಕ್ಷ್ಣವಾದ ಚಾಲನಾ ಅನುಭವವನ್ನು ನೀಡುತ್ತದೆ. ಆಕರ್ಷಕ ನೋಟ, ಆಕ್ರಮಣಕಾರಿ ಪರ್ಫಾಮೆನ್ಸ್‌ಗಾಗಿ ನಿರ್ಮಿಸಲಾದ ಟಿಗುವಾನ್ ಆರ್-ಲೈನ್ 4,539 ಮಿ.ಮೀ ಉದ್ದ, 1859 ಮಿ.ಮೀ ಅಗಲ, 1656 ಮಿ.ಮೀ ಎತ್ತರ ಮತ್ತು 2680 ಮಿ.ಮೀ ವೀಲ್‌ಬೇಸ್‌ ಹೊಂದಿದೆ.

"ಈ ವರ್ಷ ನಾವು ಭಾರತಕ್ಕೆ ಎರಡು ಅತ್ಯಂತ ಪ್ರಸಿದ್ಧ ವೋಕ್ಸ್‌ವ್ಯಾಗನ್ ಮಾದರಿಗಳನ್ನು ಪರಿಚಯಿಸುತ್ತಿದ್ದೇವೆ. ಹೊಸ ಟಿಗುವಾನ್ ಆರ್-ಲೈನ್‌ನ ಬಿಡುಗಡೆಯು ಭಾರತದಲ್ಲಿ ನಮ್ಮ ಪ್ರಗತಿಯ ಪ್ರಯಾಣದಲ್ಲಿ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ಟಿಗುವಾನ್ ಆರ್-ಲೈನ್‌ನೊಂದಿಗೆ ನಾವು ತೀಕ್ಷ್ಣವಾದ ಪರ್ಫಾಮೆನ್ಸ್, ಬಲವಾದ ಸುರಕ್ಷತಾ ವ್ಯವಸ್ಥೆಗಳನ್ನು ಪರಿಚಯಿಸುತ್ತಿದ್ದೇವೆ. ಇದನ್ನು ಜನರ ಗಮನ ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ.

Take a Poll

ಭಾರತದಲ್ಲಿ ಟಿಗುವಾನ್ ಆರ್-ಲೈನ್ ಅನ್ನು ಬಿಡುಗಡೆ ಮಾಡುವ ಕಾಯುವಿಕೆ ಬಹುತೇಕ ಮುಗಿದಿದೆ. ಇಂದು ನಾವು ಗ್ರಾಹಕರ ಆಕಾಂಕ್ಷೆಗಳನ್ನು ಸೆರೆಹಿಡಿಯುತ್ತಿರುವ SUV ಗಾಗಿ ಪ್ರೀ-ಬುಕಿಂಗ್‌ಗಳನ್ನು ಪ್ರಾರಂಭಿಸಿದ್ದೇವೆ. ಇಂದಿನಿಂದ ನಾವು ಯಾವುದೇ ಪರಿಚಯದ ಅಗತ್ಯವಿಲ್ಲದ ಫೋಕ್ಸ್‌ವ್ಯಾಗನ್‌ನ ಪ್ರಮುಖ ಗಾಲ್ಫ್ ಜಿಟಿಐ (Golf GTI) ಕಾರನ್ನು ಕೂಡ ಭಾರತದಲ್ಲಿ ಬಿಡುಗಡೆ ಮಾಡಲು ಗ್ರಾಹಕರ ಆಸಕ್ತಿಯನ್ನು ಆಹ್ವಾನಿಸುತ್ತಿದ್ದೇವೆ'' ಎಂದು ಬ್ರಾಂಡ್ ಡೈರೆಕ್ಟರ್ ಆಶಿಷ್ ಗುಪ್ತಾ ಹೇಳಿದರು.

"ಫೋಕ್ಸ್‌ವ್ಯಾಗನ್ ಯಾವಾಗಲೂ ನಾವೀನ್ಯತೆ, ಎಂಜಿನಿಯರಿಂಗ್ ಶ್ರೇಷ್ಠತೆ ಮತ್ತು ಕ್ರಿಯಾತ್ಮಕ ಕಾರ್ಯಕ್ಷಮತೆಗೆ ಸಮಾನಾರ್ಥಕವಾಗಿದೆ. ಹೊಸ ಟಿಗುವಾನ್ ಆರ್-ಲೈನ್‌ನೊಂದಿಗೆ, ನಾವು SUV ಅನುಭವವನ್ನು ಮರು ವ್ಯಾಖ್ಯಾನಿಸುತ್ತಿದ್ದೇವೆ. ನಮ್ಮ ಜರ್ಮನ್-ಎಂಜಿನಿಯರಿಂಗ್‌ನ ಪ್ರಮುಖ DNA ಮೇಲೆ ಬಲವಾಗಿ ನಿರ್ಮಿಸುತ್ತಿದ್ದೇವೆ. ಮುಂದುವರಿದ ಪ್ಯಾಕೇಜ್ ಈ SUV ಅನ್ನು ಪ್ರತ್ಯೇಕವಾಗಿ ನಿಲ್ಲುವಂತೆ ಮಾಡುತ್ತದೆ ಎಂದು ನಮಗೆ ಖಚಿತವಾಗಿದೆ ಎಂದರು."

ಟಿಗುವಾನ್ ಆರ್-ಲೈನ್ ಪರ್ಸಿಮನ್ ರೆಡ್ ಮೆಟಾಲಿಕ್, ಸಿಪ್ರೆಸ್ಸಿನೊ ಗ್ರೀನ್ ಮೆಟಾಲಿಕ್, ನೈಟ್‌ಶೇಡ್ ಬ್ಲೂ ಮೆಟಾಲಿಕ್, ಗ್ರೆನಡಿಲ್ಲಾ ಬ್ಲ್ಯಾಕ್ ಮೆಟಾಲಿಕ್, ಓರಿಕ್ಸ್ ವೈಟ್ ವಿತ್ ಮದರ್ ಆಫ್ ಪರ್ಲ್ ಎಫೆಕ್ಟ್ & ಆಯ್ಸ್ಟರ್ ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರು ಆಯ್ಕೆ ಮಾಡಬಹುದು. ಈಗ ಗ್ರಾಹಕರು ಭಾರತದಾದ್ಯಂತ ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗಳಲ್ಲಿ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಟಿಗುವಾನ್ ಆರ್-ಲೈನ್ ಅನ್ನು ಮುಂಗಡವಾಗಿ ಬುಕ್ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, March 25, 2025, 15:38 [IST]
English summary
Volkswagen india commences pre bookings for tiguan r line
Read more on volkswagen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+