ಶೀಘ್ರದಲ್ಲೆ ಬಿಡುಗಡೆಯಾಗಲಿರುವ ಮಾರುತಿ ಬ್ರೆಝಾ ಫೇಸ್‌ಲಿಫ್ಟ್ ಮೇಲೆ ಏನೆಲ್ಲಾ ನಿರೀಕ್ಷೆಗಳಿವೆ?

ಮಾರುತಿ ಸುಜುಕಿ ತನ್ನ ಜನಪ್ರಿಯ ಎಸ್‌ಯುವಿ ಬ್ರೆಝಾದ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು, 2022 ರಲ್ಲಿ ಬಿಡುಗಡೆಯಾದ ಪ್ರಸ್ತುತ ಮಾದರಿಯ ನಂತರ ಮಾರುತಿ ಸುಜುಕಿ ಬ್ರೆಝಾ ತನ್ನ ಮೊದಲ ಪ್ರಮುಖ ನವೀಕರಣವನ್ನು ಪಡೆಯುತ್ತಿದೆ. ಈ ಫೇಸ್‌ಲಿಫ್ಟ್ ಸಣ್ಣ ಸ್ಟೈಲಿಂಗ್ ಬದಲಾವಣೆಗಳು, ಇಂಟೀರಿಯರ್ ಸುಧಾರಣೆಗಳು ಮತ್ತು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿಡಲು ಬಹುಶಃ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ತರುವ ಸಾಧ್ಯತೆಯಿದೆ. 2026 ರಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಅನ್ನು ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಿಸುತ್ತಿರುವುದನ್ನು (ರೋಡ್ ಟೆಸ್ಟಿಂಗ್) ಗುರುತಿಸಲಾಗಿದೆ.

ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಹೊಸ ಮಾರುತಿ ಸುಜುಕಿ ಬ್ರೆಝಾ ಕಾರಿನ ಬೆಲೆಯು ರೂ.8.25 ಲಕ್ಷದಿಂದ ಪ್ರಾರಂಭವಾಗುತ್ತದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್-ಹೋಲ್ಡ್ ಅಸಿಸ್ಟ್, ಸೀಟ್ ಬೆಲ್ಟ್ ರಿಮೈಂಡರ್ಸ್, ರೇರ್ ಪಾರ್ಕಿಂಗ್ ಸೇನಾರ್ಸ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಬರಲಿರುವ ಹೊಸ ಮಾಡಲ್ ಇದಕ್ಕು ಮೀರಿ ಫಿಚರ್ಸ್ ಪಡೆಯುವ ಸಾಧ್ಯತೆ ಇದೆ.

what-are-the-expectations-on-upcoming-maruti-brezza-facelift

ಇತ್ತೀಚೆಗೆ ತೆಗೆದ ಹೊಸ ಸ್ಪೈ ಶಾಟ್‌ಗಳು ಎಸ್‌ಯುವಿಯ ನವೀಕರಿಸಿದ ಮುಂಭಾಗ ಮತ್ತು ಸೈಡ್ ಪ್ರೊಫೈಲ್ ವಿನ್ಯಾಸ ಬದಲಾವಣೆಗಳ ಬಗ್ಗೆ ಸುಳಿವು ನೀಡಿದೆ. ಬ್ರೆಝಾ ಫೇಸ್‌ಲಿಫ್ಟ್ ಸ್ಪೈ ಶಾಟ್‌ಗಳ ಪ್ರಕಾರ ಹೊಸ ನಾಲ್ಕು-ಸ್ಪೋಕ್ ಬ್ಲ್ಯಾಕ್ಡ್-ಔಟ್ ಅಲಾಯ್ ವೀಲ್‌ಗಳು ಸ್ವಿರ್ಲ್-ಸ್ಟೈಲ್ ವಿನ್ಯಾಸವನ್ನು ಪಡೆದಿವೆ. ಹೊಸ ಗ್ರಿಲ್ ಮತ್ತು ಸ್ಲೀಕರ್ LED ಹೆಡ್‌ಲ್ಯಾಂಪ್‌ಗಳೊಂದಿಗೆ ಅದರ ಮುಂಭಾಗದ ಪ್ರೊಫೈಲ್‌ಗೆ ನವೀಕರಣಗಳನ್ನು ಮಾಡಲಾಗಿದೆ.

ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ ಗಳೊಂದಿಗೆ ಬ್ಲಾಕ್ - ಔಟ್ ORVM ಗಳನ್ನು ಒಳಗೊಂಡಿದೆ, ಇದು ಸ್ವಲ್ಪ ಟೇಪರಿಂಗ್ ರೂಫ್ ಲೈನ್ ನಿಂದ ಪೂರಕವಾಗಿದೆ. ಇಂಟೀರಿಯರ್ ನವೀಕರಣ ವಿಷಯದಲ್ಲಿ ಹೊಸ ವಿನ್ಯಾಸಕ್ಕಿಂತ ಸಣ್ಣ ಸುಧಾರಣೆಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ. ಪರಿಷ್ಕೃತ ಕ್ಯಾಬಿನ್ ಟ್ರಿಮ್‌ಗಳು ಮತ್ತು ಬಹುಶಃ ಒಂದೆರಡು ಹೆಚ್ಚುವರಿ ಅನುಕೂಲಕರ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು.

what-are-the-expectations-on-upcoming-maruti-brezza-facelift

ಒಂದೆಡೆ ಅಸ್ತಿತ್ವದಲ್ಲಿರುವ 9 - ಇಂಚಿನ ಮತ್ತು 7 - ಇಂಚಿನ ಟಚ್‌ಸ್ಕ್ರೀನ್‌ಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ದೊಡ್ಡ 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪ್ರೀಮಿಯಂ ಆಡಿಯೊ ಸೆಟಪ್, ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟುಗಳೊಂದಿಗೆ ಆರಾಮ ಮತ್ತು ತಂತ್ರಜ್ಞಾನವನ್ನು ಹೆಚ್ಚಿಸಲು ಕಂಪನಿ ನೋಡುತ್ತಿದೆ ಎಂದು ಕೆಲ ಮೂಲಗಳು ಹೇಳಿವೆ.

ಸುರಕ್ಷತೆ ವಿಷಯಕ್ಕೆ ಬಂದರೆ ಆರು ಏರ್‌ಬ್ಯಾಗ್‌ಗಳೊಂದಿಗೆ ಲೆವೆಲ್ - 2 ADAS, EBD ಜೊತೆಗೆ ABS ಮತ್ತು ESC ಸೇರಿದಂತೆ ವರ್ಧಿತ ಸುರಕ್ಷತಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗಿದೆ. ಯಾಂತ್ರಿಕವಾಗಿ, ಬ್ರೆಝಾ ಫೇಸ್‌ಲಿಫ್ಟ್ ಅದೇ ಪೆಟ್ರೋಲ್ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳನ್ನು ಮುಂದುವರಿಸುವ ನಿರೀಕ್ಷೆಯಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್, ಇದು 103hp ಪವರ್ ಮತ್ತು 137Nm ಟಾರ್ಕ್ ಉತ್ಪಾದಿಸುತ್ತದೆ.

what-are-the-expectations-on-upcoming-maruti-brezza-facelift

ಈ 1.5-ಲೀಟರ್ ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಜೊತೆಗೆ ಜೋಡಿಸಲಾಗಿದೆ. ಇನ್ನು ಸಿಎನ್‌ಜಿ ರೂಪಾಂತರವು ಇದೇ ಎಂಜಿನ್‌ನ್ನು ಒಳಗೊಂಡಿದ್ದು, 88 ಪಿಎಸ್ ಪವರ್ ಹಾಗೂ 121.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ಪೀಡ್ ಮ್ಯಾನುವಲ್ ಅಥವಾ 6 - ಸ್ಪೀಡ್ ಆಟೋಮ್ಯಾಟಿಕ್ ನೊಂದಿಗೆ ನೀಡಲಾಗುತ್ತದೆ.

ಹೊಸ ಪ್ರತಿಸ್ಪರ್ಧಿಗಳು ನವೀಕರಿಸಿದ ಫೀಚರ್ಸ್ ನೀಡುತ್ತಿರುವುದರಿಂದ, ಬ್ರೆಝಾ ಈ ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಹೊಸ ನವೀಕರಣವು ಸಹಾಯ ಮಾಡಬಹುದು. ಇದು ಹುಂಡೈ ವೆನ್ಯೂ, ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ XUV 3XO, ಕಿಯಾ ಸೈರೋಸ್, ಸ್ಕೋಡಾ ಕೈಲಾಕ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಫ್ರಾಂಕ್ಸ್, ರೆನಾಲ್ಟ್ ಕಿಗರ್ ಮತ್ತು ಟೊಯೋಟಾ ಟೈಸರ್‌ಗಳೊಂದಿಗೆ ಸ್ಪರ್ಧಿಸುತ್ತದೆ.

More from DriveSpark

Article Published On: Thursday, December 11, 2025, 14:34 [IST]
English summary
What are the expectations on upcoming maruti brezza facelift
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+