CNG ಹೈಬ್ರಿಡ್ ಕಾರುಗಳನ್ನು ಏಕೆ ತಯಾರಿಸುತ್ತಿಲ್ಲ ಗೊತ್ತಾ? ಈ ರಹಸ್ಯ ಕಂಪನಿಗಳು ಕೂಡ ಹೇಳಲ್ಲ!
ಪೆಟ್ರೋಲ್ ಅಥವಾ ಡೀಸೆಲ್‌ಗೆ ಹೋಲಿಸಿದರೆ ಕಡಿಮೆ ವೆಚ್ಚ ಮತ್ತು ಕಡಿಮೆ ಕಾರ್ಬನ್ ಹೊರಸೂಸುವಿಕೆಯಿಂದಾಗಿ ಸಂಕುಚಿತ ನೈಸರ್ಗಿಕ ಅನಿಲ (CNG) ಆಕರ್ಷಕ ಇಂಧನ ಆಯ್ಕೆಯಾಗಿದೆ. ಹಾಗಾದ್ರೆ ಸಿಎನ್‌ಜಿ ಬಳಸಿ ಹೈಬ್ರಿಡ್ ಕಾರನ್ನು ಏಕೆ ನಿರ್ಮಿಸಬಾರದು? ಈ ಪ್ರಶ್ನೆ ಹಲವರನ್ನು ಕಾಡಿರಬಹುದು. CNG - ಚಾಲಿತ ಹೈಬ್ರಿಡ್ ಕಾರುಗಳನ್ನು ತಯಾರಿಸುವುದು ತಾಂತ್ರಿಕವಾಗಿ ಒಂದು ಹಂತದಲ್ಲಿ ಕಾರ್ಯಸಾಧ್ಯವಾದರೂ, ಹಲವಾರು ಸವಾಲುಗಳು, ತಂತ್ರಜ್ಞಾನದಲ್ಲಿ ವ್ಯಾಪಕ ಅಭಿವೃದ್ಧಿ ಆಗಬೇಕಿದೆ. ಜೊತೆಗೆ ವಿನ್ಯಾಸ, ವೆಚ್ಚ ಮತ್ತು ಮೂಲಸೌಕರ್ಯ ಅಂಶಗಳು ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಕಡಿಮೆ ಶಕ್ತಿ ಮತ್ತು ವೇಗವರ್ಧನೆ: ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್‌ಗಳಿಗೆ ಹೋಲಿಸಿದರೆ CNG ಯಿಂದ ಹೊರಹೊಮ್ಮುವ ಶಕ್ತಿಯು ತೀರಾ ಕಡಿಮೆ ಇರುತ್ತದೆ. ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಪೆಟ್ರೋಲ್ ಎಂಜಿನ್ ಅನ್ನು ಸಂಯೋಜಿಸುವ ಹೈಬ್ರಿಡ್ ಸಿಸ್ಟಮ್‌ನಲ್ಲಿ, ಸುಗಮ ಎಲೆಕ್ಟ್ರಿಕ್ ವಿತರಣೆಯೊಂದಿಗೆ ಉತ್ತಮ ಪರ್ಫಾಮೆನ್ಸ್ ಇರುತ್ತದೆ. ಒಂದು ವೇಳೆ CNG ಹೈಬ್ರಿಡ್ ಬಂದರೂ ಓವರ್‌ಟೇಕಿಂಗ್ ಅಥವಾ ಹೆಚ್ಚಿನ ವೇಗ ಸಾಧಿಸುವುದು ಅಸಾಧ್ಯ. ಹಾಗಾಗಿ ಸಿಎನ್‌ಜಿ ಹೈಬ್ರಿಡ್ ತಂತ್ರಜ್ಞಾನವು ವ್ಯಾಪಕ ಅಭಿವೃದ್ಧಿ ಆಗಬೇಕಿದೆ.

ಪ್ಯಾಕೇಜಿಂಗ್ ನಿರ್ಬಂಧಗಳು: CNG ಟ್ಯಾಂಕ್‌ಗಳು ಬೃಹತ್ ಪ್ರಮಾಣದಲ್ಲಿರುತ್ತವೆ, ಹೆಚ್ಚಿನ ಒತ್ತಡದಲ್ಲಿ ಇವನ್ನು ಸುರಕ್ಷಿತವಾಗಿ ಸಂಗ್ರಹಿಸಬೇಕು. ಇದು ಹೆಚ್ಚಾಗಿ ಬೂಟ್ ಸ್ಥಳವನ್ನು ಕಡಿಮೆ ಮಾಡುತ್ತದೆ. ದೊಡ್ಡ ಬ್ಯಾಟರಿ ಪ್ಯಾಕ್‌ಗಳು ಮತ್ತು ಎಲೆಕ್ಟ್ರಿಕ್ ಮೋಟಾರ್ ಅಸೆಂಬ್ಲಿಗಳಂತಹ ಹೈಬ್ರಿಡ್ ಸಿಸ್ಟಮ್ ಘಟಕಗಳಿಗೆ ಅಗತ್ಯವಿರುವ ಸ್ಥಳಕ್ಕೆ ಇದು ಅಡ್ಡಿಯಾಗಬಹುದು. ಎಲ್ಲವನ್ನೂ ಪರಿಣಾಮಕಾರಿಯಾಗಿ ಸಂಯೋಜಿಸುವುದು ಇಲ್ಲಿ ದೊಡ್ಡ ಸವಾಲಾಗಿದೆ.
ಉತ್ಪಾದನಾ ವೆಚ್ಚಗಳು: ಹೈಬ್ರಿಡ್ ಪವರ್‌ಟ್ರೇನ್ ಅಭಿವೃದ್ಧಿ ಮತ್ತು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ. ಹೈಬ್ರಿಡ್ ಸಿಸ್ಟಮ್‌ಗಳಲ್ಲಿ ಎಲೆಕ್ಟ್ರಿಕ್ ಮೋಟಾರ್ ಮತ್ತು ಪೆಟ್ರೋಲ್ ಎಂಜಿನ್ ಒಟ್ಟಾಗಿ ಕೆಲಸ ಮಾಡುತ್ತಾ ಪವರ್ ನಿರ್ವಹಣೆಯನ್ನು ಹಂಚಿಕೊಳ್ಳುತ್ತವೆ. ಆದರೆ ಸಿಎನ್‌ಜಿ ವಿಷಯದಲ್ಲಿ ಹಾಗಿರುವುದಿಲ್ಲ, ಹೆಚ್ಚಿನ ಒತ್ತಡದ ಟ್ಯಾಂಕ್‌ಗಳು ಮತ್ತು CNG ಗಾಗಿ ವಿಶೇಷ ಸುರಕ್ಷತಾ ವ್ಯವಸ್ಥೆಗಳನ್ನು ಸೇರಿಸುವುದರಿಂದ ಸಾಮಾನ್ಯ ಹೈಬ್ರಿಡ್‌ಗಳಿಗಿಂತ ದುಪ್ಪಟ್ಟು ವೆಚ್ಚವಾಗುತ್ತದೆ.

ಕಡಿಮೆ CNG ಮೂಲಸೌಕರ್ಯ: CNG ಬಂಕ್‌ಗಳ ಮೂಲಸೌಕರ್ಯ ತೀರಾ ಕಡಿಮೆಯಿದೆ, ವಿಶೇಷವಾಗಿ ಪ್ರಮುಖ ನಗರಗಳ ಹೊರಗೆ ಹುಡುಕುವುದು ತುಂಬಾ ಕಷ್ಟ. CNG ಕೇಂದ್ರಗಳು ಬೆಳೆಯುತ್ತಿದ್ದರೂ, ಸರತಿ ಸಾಲುಗಳು ಮತ್ತು ಅಸಮಾನ ಲಭ್ಯತೆಯು ಕಳವಳಕಾರಿಯಾಗಿಯೇ ಉಳಿದಿದೆ. ಇದು ದೂರದ ಅಥವಾ ಗ್ರಾಮೀಣ ಚಾಲನೆಗೆ ಕಡಿಮೆ ಅನುಕೂಲಕರವಾಗಿದೆ.
2025 ರ ಇತ್ತೀಚಿನ ಡೇಟಾ ಮತ್ತು ಪ್ರವೃತ್ತಿಗಳ ಆಧಾರದ ಮೇಲೆ CNG - ಚಾಲಿತ ಕಾರುಗಳು, ಸಾಂಪ್ರದಾಯಿಕ ಪೆಟ್ರೋಲ್/ಡೀಸೆಲ್ ಕಾರುಗಳು, ಹೈಬ್ರಿಡ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳು (EV ಗಳು) ಗೆ ಸಂಬಂಧಿಸಿದ ಎಮಿಷನ್ ಮತ್ತು ಇಂಧನ ವೆಚ್ಚದ ಅಂಶಗಳನ್ನು ಸಂಕ್ಷಿಪ್ತಗೊಳಿಸುವ ಪಟ್ಟಿ ಇಲ್ಲಿದೆ:
| ವಾಹನ ಪ್ರಕಾರ | ಇಂಧನ ವೆಚ್ಚ | CO2 ಹೊರಸೂಸುವಿಕೆ | ಮುಖ್ಯಾಂಶಗಳು |
| CNG ಕಾರುಗಳು | ಪ್ರತಿ ಕೆ.ಜಿಗೆ ರೂ.89 | ಪೆಟ್ರೋಲ್/ಡೀಸೆಲ್ ಗಿಂತ 25% ಕಡಿಮೆ CO2 | ಕಡಿಮೆ ಬೆಲೆ, ಹೆಚ್ಚಿನ ಮೈಲೇಜ್ |
| ಪೆಟ್ರೋಲ್ ಕಾರುಗಳು | ಪ್ರತಿ ಲೀಟರ್‌ಗೆ ರೂ.102 | 1 ಕಿಮೀ = 113.0 ಗ್ರಾಂ CO2e (ಎಂಜಿನ್ ಗಾತ್ರ ಅವಲಂಬಿಸಿ) | ಹೆಚ್ಚಿನ ಬೆಲೆ, ಕಡಿಮೆ ಮೈಲೇಜ್ |
| ಡೀಸೆಲ್ ಕಾರುಗಳು | ಪ್ರತಿ ಲೀಟರ್‌ಗೆ ರೂ.91 | 1 ಕಿಮೀ = 153.0 ಗ್ರಾಂ CO2e (ಎಂಜಿನ್ ಗಾತ್ರ ಅವಲಂಬಿಸಿ) | ಮಧ್ಯಮ ಮಟ್ಟದ ವೆಚ್ಚ, ಹೆಚ್ಚಿನ ಮೈಲೇಜ್ |
| ಎಲೆಕ್ಟ್ರಿಕ್ ಕಾರುಗಳು | 1 ಯೂನಿಟ್‌ಗೆ ರೂ.5.08 | ಶೂನ್ಯ ಹೊರಸೂಸುವಿಕೆ | ಇಂಧನಕ್ಕಿಂತ ತೀರಾ ಅಗ್ಗ |

ಕೊನೆಯದಾಗಿ, ಸರ್ಕಾರಗಳ ಪ್ರೋತ್ಸಾಹವು ವಿಸ್ತರಿಸುತ್ತಿರುವ EV ಮೂಲಸೌಕರ್ಯದಿಂದ ಬೆಂಬಲಿತವಾದ ಎಲೆಕ್ಟ್ರಿಕ್ ವಾಹನಗಳು ಮತ್ತು ಸಾಂಪ್ರದಾಯಿಕ ಹೈಬ್ರಿಡ್ ಕಾರುಗಳ ಮೇಲಿದೆ. ಹಾಗಾಗಿ ಆಟೋಮೋಟಿವ್ ಉದ್ಯಮದ ಪ್ರಸ್ತುತ ಗಮನವು ಹೈಬ್ರಿಡ್ - CNG ಅಭಿವೃದ್ಧಿಯಿಂದ ದೂರವಿದೆ. ಸದ್ಯ ಪ್ರಮುಖ ಕಂಪನಿಗಳ ಗಮನ ಮತ್ತು ಹೂಡಿಕೆಯು ಇವಿಗಳ ಮೇಲೆ ಹೆಚ್ಚಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹಚ್ಚಿನ ಸಂಶೋಧನೆಗಳು, ನಿರಂತರ ತಂತ್ರಜ್ಞಾನ ಅಭಿವೃದ್ಧಿ, ಉತ್ತಮ ಮೂಲಸೌಕರ್ಯ ಸಿಕ್ಕಲ್ಲಿ ಸಿಎನ್‌ಜಿ ಹೈಬ್ರಿಡ್ ಕಾರುಗಳು ಮುಂಬರುವ ವರ್ಷಗಳಲ್ಲಿ ದರ್ಶನ ಕೊಟ್ಟರು ಅಚ್ಚರಿಯಿಲ್ಲ. ಹಾಗೆಯೇ ಕಡಿಮೆ ಕಾರ್ಬನ್ ಹೊರಸೂಸುವಿಕೆ ವಾಹನಗಳಿಗೆ ಬೇಡಿಕೆ ಹೆಚ್ಚಾದಾಗ CNG ಹೈಬ್ರಿಡ್ ವಾಹನಗಳು ಭವಿಷ್ಯದಲ್ಲಿ ಆಕರ್ಷಣೆಯನ್ನು ಪಡೆಯಬಹುದು. ಸಿಎನ್‌ಜಿ ಹೈಬ್ರಿಡ್ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications