ಯೋಧಾ ಇವಿ ತ್ರಿಚಕ್ರ ವಾಹನ: 223 KM ರೇಂಜ್... ಬೆಲೆಯೆಷ್ಟು, ವಿಶೇಷತೆಗಳೇನು?

ಲೋಹಿಯಾ ಆಟೋ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಪ್ರಮುಕ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಯೋಧಾ (Youdha), ಯೋಧಾ ಇಪಿಒಡಿ ಎಂಬ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ L5 ಎಲೆಕ್ಟ್ರಿಕ್ ಪ್ಯಾಸೆಂಜರ್ ತ್ರಿಚಕ್ರ ವಾಹನ ವಿಭಾಗವನ್ನು ಪ್ರವೇಶಿಸಿದೆ. ಈ ಬಿಡುಗಡೆಯು ಬೆಳೆಯುತ್ತಿರುವ ವಾಣಿಜ್ಯ ಎಲೆಕ್ಟ್ರಿಕ್ ಮೊಬಿಲಿಟಿ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿದ್ದು, ವಿಶೇಷವಾಗಿ ನಗರ ಮತ್ತು ಅರೆ - ನಗರ ಸಾರಿಗೆ ಮತ್ತು ಕೊನೆಯ ಮೈಲಿ ವಿತರಣೆಗಾಗಿ ಈ ಆಟೋವನ್ನು ಹೆಚ್ಚಾಗಿ ಬಳಸಲು ವಿನ್ಯಾಸಗೊಳಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಯೂಧಾ ಇಪಿಒಡಿಯ ವಾಹನವು 50 Nm ಟಾರ್ಕ್ ಉತ್ಪಾದಿಸುವ 6 kW ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದರ ಬ್ಯಾಟರಿ ವಿಷಯಕ್ಕೆ ಬಂದರೆ 11.8 kWh ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿ ಹೊಂದಿದ್ದು, ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 227 ಕಿ.ಮೀ ಓಡಬಲ್ಲದು ಎಂದು ಕಂಪನಿ ತಿಳಿಸಿದ. ರೂ. 2,79,000 (ಎಕ್ಸ್‌-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

youdha-ev-3-wheeler-price-features-details

ದಕ್ಷತೆ ಮತ್ತು ಶಕ್ತಿಯನ್ನು ಸಮತೋಲನಗೊಳಿಸಲು ಸಿಟಿ ಮತ್ತು ಬೂಸ್ಟ್ ಎರಡು ಡ್ರೈವ್‌ ಮೋಡ್‌ಗಳನ್ನು ಹೊಂದಿದೆ. ವಾಟರ್ ವೇಡಿಂಗ್ ವಿಷಯಕ್ಕೆ ಬಂದರೆ 300 ಮಿ.ಮೀ ನೀರಿನ ಆಳವನ್ನು ನಿರ್ವಹಿಸುವ ಸಾಮರ್ಥ್ಯ, ಭಾರತೀಯ ರಸ್ತೆ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ನಿರ್ಮಾಣ ಮಾಡಲಾಗಿದೆ. ಸುಮಾರು 45 ಕಿ.ಮೀ ಗರಿಷ್ಟ ವೇಗದಲ್ಲಿ ಚಲಿಸಬಲ್ಲದು.

ಇಪಿಒಡಿ ಅನ್ನು ಉತ್ತರಾಖಂಡದ ಕಾಶಿಪುರದಲ್ಲಿರುವ ಯೋಧಾದ ಉತ್ಪಾದನಾ ಸೌಲಭ್ಯದಲ್ಲಿ ತಯಾರಿಸಲಾಗುತ್ತಿದೆ. ವಾರ್ಷಿಕ 1,00,000 ವಾಹನಗಳ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುವ ಈ ಸೌಲಭ್ಯವು, ಸ್ವಯಂಚಾಲಿತ ಅಸೆಂಬ್ಲಿ ಲೈನ್‌ಗಳು, ಎಂಡ್ - ಆಫ್ - ಲೈನ್ ಪರೀಕ್ಷಾ ಕೇಂದ್ರಗಳು ಮತ್ತು ದೃಢವಾದ ಗುಣಮಟ್ಟದ ನಿಯಂತ್ರಣ ವ್ಯವಸ್ಥೆಗಳನ್ನು ಹೊಂದಿದೆ.

youdha-ev-3-wheeler-price-features-details

ಆರಂಭಿಕ ವಾಹನ ಬಿಡುಗಡೆಯು ತ್ರಿಚಕ್ರ ವಾಹನ ಬಳಕೆಯ ಹೆಚ್ಚಿನ ಸಾಂದ್ರತೆ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಸ್ವೀಕಾರಕ್ಕಾಗಿ ಗುರುತಿಸಲ್ಪಟ್ಟ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ ಮತ್ತು ಅಸ್ಸಾಂ ಮೇಲೆ ಕೇಂದ್ರೀಕರಿಸಲಾಗಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಹಂತ ಹಂತವಾಗಿ ರಾಷ್ಟ್ರೀಯ ವಿಸ್ತರಣೆಯನ್ನು ಯೋಜಿಸಲಾಗಿದೆ ಎಂದು ಯೋಧಾ ತಿಳಿಸಿದೆ.

ಭಾರತದ ವಾಣಿಜ್ಯ EV ಪರಿಸರ ವ್ಯವಸ್ಥೆಯಲ್ಲಿ ಬಲವಾದ ಹೆಜ್ಜೆಗುರುತನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಕಂಪನಿಯು 2030 ರ ವೇಳೆಗೆ ರೂ.1,000 ಕೋಟಿ ಆದಾಯದ ಗುರಿಯನ್ನು ಹೊಂದಿದೆ. ಭಾರತೀಯ ಚಾಲನಾ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ನಿರ್ಮಿಸಲಾದ ವಿಶ್ವಾಸಾರ್ಹ, ಕಡಿಮೆ ವೆಚ್ಚದ ಎಲೆಕ್ಟ್ರಿಕ್ ವಾಹನಗಳ ಮೂಲಕ ಚಾಲಕರು ಮತ್ತು ವಾಣಿಜ್ಯ ನಿರ್ವಾಹಕರನ್ನು ಸಬಲೀಕರಣಗೊಳಿಸಲು EPOD ಸಜ್ಜಾಗಿದೆ.

ಯೋಧಾ ಕಂಪನಿಯು ಸರಕು ವೇರಿಯೆಂಟ್‌ಗಳೊಂದಿಗೆ ವೈವಿಧ್ಯಗೊಳಿಸಲು ಮತ್ತು ಭಾರತದಾದ್ಯಂತ ತನ್ನ ಉತ್ಪಾದನೆ ಮತ್ತು ಸೇವಾ ಮೂಲಸೌಕರ್ಯವನ್ನು ವಿಸ್ತರಿಸಲು ನೋಡುತ್ತಿದೆ. ಲೋಹಿಯಾ ಆಟೋ ಜೊತೆಗಿನ ಸಹಯೋಗವನ್ನು ಬಳಸಿಕೊಂಡು ಇನ್ನೂ ವಿವಿಧ ಮಾದರಿಗಳ ನಿರ್ಮಾಣಕ್ಕೆ ಸಜ್ಜಾಗುತ್ತಿದೆ. ಯೋಧಾ EPOD ಪರಿಚಯವು L5 ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಗೆ ಸ್ಪರ್ಧಾತ್ಮಕ ಮತ್ತು ತಾಂತ್ರಿಕವಾಗಿ ಮುಂದುವರಿದ ಆಯ್ಕೆಯಾಗಲಿದೆ.

ಯೋಧಾ ಹೊಸದಾಗಿ ಪ್ರಾರಂಭಿಸಲಾದ ಬ್ರ್ಯಾಂಡ್ ಆಗಿದ್ದರೂ, ಭಾರತದ ಆರಂಭಿಕ ಎಲೆಕ್ಟ್ರಿಕ್ ವಾಹನ ತಯಾರಕರಲ್ಲಿ ಒಬ್ಬರಾದ ಲೋಹಿಯಾ ಜೊತೆಗಿನ ಹೊಂದಾಣಿಕೆಯ ಮೂಲಕ ಆಳವಾದ ಉದ್ಯಮ ಅನುಭವದ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. ಅದರ ಪರಂಪರೆಯ ಬ್ರ್ಯಾಂಡ್ ಅನ್ನು ಬದಲಿಸುವ ಬದಲು, ಯೋಧಾ ಪರಿಚಯವು ಕಾರ್ಯತಂತ್ರದ ಮರುಸ್ಥಾಪನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Saturday, July 19, 2025, 12:41 [IST]
English summary
Youdha ev 3 wheeler price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+