ನಿಮ್ಮ ಸಂಬಳ ರೂ.30,000 ಇದ್ಯಾ.. ಹಾಗಾದರೆ ಈ ಕಾರುಗಳನ್ನು ಕೊಳ್ಳವುದು ಬಲು ಸುಲಭ.. ಫೀಚರ್‌ನಲ್ಲೂ ಕಮ್ಮಿಯಿಲ್ಲ!

ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮ ಪುಟ್ಟ ಕುಟುಂಬಕ್ಕಾಗಿ ಹೊಸ ಕಾರೊಂದನ್ನು ತೆಗೆದುಕೊಳ್ಳಬೇಕು ಎಂಬ ಬಹುದೊಡ್ಡ ಹೆಬ್ಬಯಕೆ ಇರುತ್ತದೆ. ಆದರೆ, ಆರ್ಥಿಕ ಪರಿಸ್ಥಿತಿಯಿಂದ ಆ ಕನಸು ನನಸಾಗುವುದಿಲ್ಲ. ನಿಮ್ಮ ಸಂಬಳ ರೂ.30,000 ಇದ್ದು, ಅದರಲ್ಲಿ ನೂತನ ಬೈಕ್‌ನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಅಂತಹ ಆಸೆಯನ್ನು ಬಿಟ್ಟು ಬಿಡಿ.. ಅಷ್ಟೇ ವೇತನದಲ್ಲಿ ಸೆಲೆರಿಯೊ, ಇಕೋ ಮತ್ತು ಇಗ್ನಿಸ್ ಕಾರುಗಳನ್ನು ಸುಲಭವಾಗಿ ಮನೆಗೆ ತರಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio): ಇದೊಂದು ಸಣ್ಣ ಹ್ಯಾಚ್‌ಬ್ಯಾಕ್ ಆಗಿದ್ದು, ಕಡಿಮೆ ಸಂಬಳ ಇರುವವರೂ ಕೂಡ ಮನೆಗೆ ತರಬಹುದು. ಈ ಕಾರು ಮಾಡೆಲ್‌ಗಳನ್ನು ಅವಲಂಭಿಸಿ, ರೂ.6.70 ರಿಂದ ರೂ.8.70 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿದೆ. ಇದನ್ನು ಕನಿಷ್ಠ ಪಕ್ಷ ರೂ.2 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ಸರಿ ಸುಮಾರು ರೂ.10 ಸಾವಿರವರೆಗೆ ಇಎಂಐ ಕಟ್ಟಬೇಕು.

Your Salary Will Be Rs 30 000 Easily Buy This Cars Celerio Eeco Ignis

ಈ ಸೆಲೆರಿಯೊ ಕಾರು ಬೆಲೆಗೆ ತಕ್ಕಂತೆ ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. 1-ಲೀಟರ್ ಸಾಮರ್ಥ್ಯದ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ನಿರ್ವಹಣಾ ವೆಚ್ಚವು ಅಗ್ಗವಾಗಿದ್ದು, ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 25.24 ರಿಂದ 26.68 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರೊಟ್ಟಿಗೆ ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ ಇಕೋ (Maruti Suzuki Eeco): ಇದು ಪ್ರಮುಖ ವ್ಯಾನ್ ಆಗಿದ್ದು, ಸಾಮಾನ್ಯ ಜನರ ಕುಟುಂಬದ ಅಂಬಾರಿ ಎಂದು ಕರೆದರೂ ತಪ್ಪಾಗುವುದಿಲ್ಲ. ಕಮ್ಮಿ ವೇತನದವರು ಸಹ ಈ ಕಾರನ್ನು ಸುಲಭವಾಗಿ ಮನೆಗೆ ತರಬಹುದು. ಇದು ಕನಿಷ್ಠ ರೂ.6.80 ಲಕ್ಷ ಮತ್ತು ಗರಿಷ್ಠ ರೂ.8.30 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ಇಕೋ ವ್ಯಾನ್‌ನ್ನು ರೂ.3 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಖರೀದಿಸಿದರೆ, ರೂ.11 ಸಾವಿರವರೆಗೆ ಇಎಂಐ ಪಾವತಿಸಬೇಕು.

Your Salary Will Be Rs 30 000 Easily Buy This Cars Celerio Eeco Ignis

ನೂತನ ಮಾರುತಿ ಇಕೋ ವ್ಯಾನ್ ಕೂಡ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಇದು 1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ಸಾಮಾನ್ಯ ಮೋಟಾರ್‌ಸೈಕಲ್‌ನ ರೀತಿಯಲ್ಲಿ 19.71 ರಿಂದ 26.78 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಸೆಮಿ-ಡಿಜಿಟಲ್ ಸ್ಪೀಡೋಮೀಟರ್ ಮತ್ತು 6 ಏರ್‌ಬ್ಯಾಗ್‌ಗಳು ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ 5/7 ಆಸನಗಳನ್ನು ಪಡೆದಿದೆ.

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis): ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸಾಕಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಎಲ್ಲೆಡೆ ಮನೆ ಮಾತಾಗಿದೆ. ಅದಕ್ಕೆ ತಕ್ಕಂತೆ ಕಡಿಮೆ ಬೆಲೆಯಲ್ಲಿಯೇ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದು ರೂ.7 ಲಕ್ಷದಿಂದ ರೂ.9.60 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.4 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ಬರೋಬ್ಬರಿ ರೂ.12 ಸಾವಿರವರೆಗೆ ಇಎಂಐ ಕಟ್ಟಬೇಕು.

Your Salary Will Be Rs 30 000 Easily Buy This Cars Celerio Eeco Ignis

ಹೊಸ ಇಗ್ನಿಸ್ ಕಾರು ಬೆಲೆಗೆ ತಕ್ಕಂತೆ ಸಾಕಷ್ಟು ಅತ್ಯಾಧುನಿಕವಾಗಿದೆ. ಕೇವಲ 1.2-ಲೀಟರ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, ನಿರ್ವಹಣಾ ವೆಚ್ಚವು ಅಷ್ಟೇನು ಜಾಸ್ತಿ ಬರುವುದಿಲ್ಲ. ಇದು 20.89 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಜೊತೆಗೆ 5-ಆಸನಗಳನ್ನು ಹೊಂದಿದ್ದು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಒಟ್ಟಾರೆಯಾಗಿ ಈ ಕಾರುಗಳು ಒಂದಕ್ಕಿಂತ ಒಂದು ಅದ್ಬುತವಾಗಿದ್ದು, ಕಮ್ಮಿ ಸಂಬಳವಿರುವ ನೌಕರರು ಸಹ ಕೊಂಡುಕೊಳ್ಳಬಹುದು. ಆದರೂ ಇವುಗಳ ಆನ್-ರೋಡ್ ದರವು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಲಿದ್ದು, ನಿಮಗೆ ಬೆಲೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿದ್ದರೂ ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡುವುದು ಒಳಿತು.

Article Published On: Tuesday, May 6, 2025, 12:28 [IST]
English summary
Your salary will be rs 30000 easily buy this cars celerio eeco ignis
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+