T20 World Cup: ಟಿ20 ವಿಶ್ವಕಪ್ ಟಿಕೆಟ್ ಗೆಲ್ಲುವ ಅವಕಾಶ: ಹುಂಡೈ ಟ್ರೋಫಿ ಕನೆಕ್ಟ್
2026ರ ಐಸಿಸಿ ಟಿ20 ವಿಶ್ವಕಪ್ ಹತ್ತಿರವಾಗುತ್ತಿದ್ದು, ಹುಂಡೈ ಮೋಟಾರ್ ಕಂಪನಿಯ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೊತೆಗಿನ ಬಹು-ವರ್ಷದ ಪ್ರೀಮಿಯರ್ ಪಾಲುದಾರಿಕೆಯಡಿಯಲ್ಲಿ, ಇಂದು ಹುಂಡೈ ಟ್ರೋಫಿ ಕನೆಕ್ಟ್ ಅನ್ನು ಘೋಷಿಸಿದೆ. ಅಂದರೆ 2026ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯ ವಿಶೇಷ ಪ್ರದರ್ಶನವು ಮೂರು ಪ್ರಮುಖ ಭಾರತೀಯ ನಗರಗಳಾದ ಮುಂಬೈ, ಬೆಂಗಳೂರು ಮತ್ತು ಗುರುಗ್ರಾಮ್‌ನಲ್ಲಿ ಜನವರಿ 28 ರಿಂದ ಫೆಬ್ರವರಿ 1 ರವರೆಗೆ ನಡೆಯಲಿದೆ. ಈ ವಿಶ್ವಕಪ್ ಟ್ರೋಫಿಯು ಕ್ರಿಕೆಟ್ ಅಭಿಮಾನಿಗಳು ಮತ್ತು ಸಂದರ್ಶಕರಿಗೆ ಅಪೇಕ್ಷಿತ ಟ್ರೋಫಿಯನ್ನು ಹತ್ತಿರದಿಂದ ವೀಕ್ಷಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ ಎಂದು ಹ್ಯುಂಡೈ ಹೇಳಿದೆ.
ಟ್ರೋಫಿ ಪ್ರದರ್ಶನದ ವಿವರಗಳು: ಮುಂಬೈನ ಹೈ ಸ್ಟ್ರೀಟ್ ಫೀನಿಕ್ಸ್‌ನಲ್ಲಿ ಜನವರಿ 28, 29 ರಂದು ಪ್ರದರ್ಶನ, ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಜನವರಿ 30 ರಂದು ಹಾಗೂ ಗುರುಗ್ರಾಮ್‌ನ DLF ಸೈಬರ್ ಹಬ್‌ನಲ್ಲಿ ಫೆಬ್ರವರಿ 1ರಂದು ಪ್ರದರ್ಶನವಿರಲಿದೆ. ಅಭಿಮಾನಿಗಳು ಮುಂಬರುವ ಪಂದ್ಯದ ಟಿಕೆಟ್‌ಗಳನ್ನು ಸಹ ಇಲ್ಲಿ ಗೆಲ್ಲುವ ಅವಕಾಶವನ್ನು ಪಡೆಯಬಹುದು ಎಂದು ಹ್ಯುಂಡೈ ಹೇಳಿದೆ.

ಹುಂಡೈನ ಕಂಪನಿಯು ರೋಮಾಂಚಕಾರಿ ಆನ್-ಗ್ರೌಂಡ್ ಎಂಗೇಜ್‌ಮೆಂಟ್ ಚಟುವಟಿಕೆಗಳ ಸರಣಿಯನ್ನು ಯೋಜಿಸಿದೆ. ಇದರಲ್ಲಿ ಪ್ರಮುಖ ಆಕರ್ಷಣೆಯೆಂದರೆ 'ದೀವಾಂಗಿ ಮೀಟರ್', ಇಲ್ಲಿ ಅಭಿಮಾನಿಗಳು ಕ್ರಿಕೆಟ್ ಮೇಲಿನ ತಮ್ಮ ಉತ್ಸಾಹವನ್ನು ಪ್ರದರ್ಶಿಸಬಹುದು. ಜೊತೆಗೆ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್‌ಗಳನ್ನು ಗೆಲ್ಲುವ ಅವಕಾಶವನ್ನು ಪಡೆಯಬಹುದು. ಕ್ರಿಕೆಟ್ ಕ್ರೀಡಾಂಗಣ ಶೈಲಿಯ ಸೆಟಪ್, ಕ್ರಿಕೆಟ್ ಪ್ರೇರಿತ ಫೋಟೋ-ಆಪ್ ಮತ್ತು ವಿಆರ್ ಕ್ರಿಕೆಟ್ ಆಟದಂತಹ ಕಾರ್ಯಕ್ರಗಳನ್ನು ಆಯೋಜಿಸಲಾಗಿದೆ.
ಹೆಚ್ಚುವರಿಯಾಗಿ, ದೇಶದ ಅತ್ಯಂತ ಜನಪ್ರಿಯ ಹುಂಡೈ ಕ್ರೆಟಾ ಎಸ್‌ಯುವಿ ಕೂಡ ಇಲ್ಲಿ ಪ್ರದರ್ಶನಗೊಳ್ಳಲಿದ್ದು, ಅಭಿಮಾನಿಗಳು ಮತ್ತು ಸಂದರ್ಶಕರಿಗೆ ಕ್ರಿಕೆಟ್ ಆಚರಣೆಯ ಜೊತೆಗೆ ಹುಂಡೈ ಎಸ್‌ಯುವಿಯನ್ನು ಅನ್ವೇಷಿಸಲು ಅವಕಾಶ ನೀಡಲಾಗುತ್ತಿದೆ. ಪ್ರದರ್ಶನಗಳು ಸೀಮಿತ ಅವಧಿಗೆ ಸಾರ್ವಜನಿಕರಿಗೆ ತೆರೆದಿರುತ್ತವೆ, ಮುಂಬರುವ ಐಸಿಸಿ ಪಂದ್ಯಾವಳಿಯ ಬಗ್ಗೆ ಉತ್ಸಾಹವು ಹೆಚ್ಚಾಗುತ್ತಿರುವುದರಿಂದ ಅಭಿಮಾನಿಗಳು, ಕುಟುಂಬಗಳು ಮತ್ತು ಕ್ರಿಕೆಟ್ ಉತ್ಸಾಹಿಗಳನ್ನು ಈ ಆಚರಣೆಯ ಭಾಗವಾಗಲು ಹ್ಯುಂಡೈ ಆಹ್ವಾನಿಸುತ್ತಿದೆ.

ಹುಂಡೈ ಮತ್ತು ಐಸಿಸಿ ಪಾಲುದಾರಿಕೆ
ಹುಂಡೈ ಮೋಟಾರ್ ಕಂಪನಿಯು 2026 ರಿಂದ 2027 ರವರೆಗಿನ ಜಾಗತಿಕ ಕ್ರಿಕೆಟ್ ಪಂದ್ಯಾವಳಿಗಳಿಗೆ ಪ್ರೀಮಿಯರ್ ಪಾಲುದಾರನಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಸಹಯೋಗವು ಐಕಾನಿಕ್ ಪಂದ್ಯದ ದಿನದ ಕ್ಷಣಗಳು, ಕ್ರೀಡಾಂಗಣದಲ್ಲಿನ ಬ್ರ್ಯಾಂಡಿಂಗ್ ಮತ್ತು ನವೀನ ಅಭಿಮಾನಿ ಅನುಭವಗಳಿಗೆ ಹುಂಡೈಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ.
ಹುಂಡೈ ಮಾರ್ಕೆಟಿಂಗ್ ಮುಖ್ಯಸ್ಥ ವಿರಾಟ್ ಖುಲ್ಲರ್, "ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಗಿಂತ ಹೆಚ್ಚಿನದಾಗಿದೆ, ಇದು ಲಕ್ಷಾಂತರ ಜನರನ್ನು ಒಂದುಗೂಡಿಸುವ ಹಂಚಿಕೆಯ ಭಾವನೆಯಾಗಿದೆ. ಪ್ಯಾಶನ್‌ನಿಂದ ಪ್ರೇರಿತವಾಗಿ, ಐಸಿಸಿಯೊಂದಿಗೆ ಹುಂಡೈನ ಪಾಲುದಾರಿಕೆ ಮತ್ತು ಮುಂಬೈ, ಬೆಂಗಳೂರು ಮತ್ತು ಗುರುಗ್ರಾಮ್‌ನಾದ್ಯಂತ ವಿಶ್ವಕಪ್ ಟ್ರೋಫಿ ಪ್ರದರ್ಶನವು ಅಭಿಮಾನಿಗಳನ್ನು ಅವರು ಪ್ರೀತಿಸುವ ಆಟಕ್ಕೆ ಹತ್ತಿರ ತರಲು ವಿನ್ಯಾಸಗೊಳಿಸಲಾಗಿದೆ" ಎಂದರು.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯ ವಾಣಿಜ್ಯ ಅಧಿಕಾರಿ ಅನುರಾಗ್ ದಹಿಯಾ ಮಾತನಾಡಿ, "ಹುಂಡೈ ಟ್ರೋಫಿ ಕನೆಕ್ಟ್ ಮೂಲಕ ಮುಂಬೈ, ಬೆಂಗಳೂರು ಮತ್ತು ಗುರುಗ್ರಾಮ್‌ನಲ್ಲಿರುವ ಅಭಿಮಾನಿಗಳಿಗೆ ಐಸಿಸಿ ಪುರುಷರ ಟಿ20 ವಿಶ್ವಕಪ್ ಟ್ರೋಫಿಯನ್ನು ಹತ್ತಿರ ತರಲು ನಾವು ಸಂತೋಷಪಡುತ್ತೇವೆ. ಕ್ರಿಕೆಟ್ ಮೇಲಿನ ಪ್ರೀತಿಯನ್ನು ಹೆಚ್ಚಿಸಲು ಮತ್ತು ಕ್ರೀಡಾಂಗಣಗಳನ್ನು ಮೀರಿ ಕ್ರಿಕೆಟ್ ಅನ್ನು ಅದರ ಉತ್ಸಾಹಭರಿತ ಪ್ರೇಕ್ಷಕರ ಹೃದಯಕ್ಕೆ ಕೊಂಡೊಯ್ಯುತ್ತಿದ್ದೇವೆ.
ಹುಂಡೈ ಮತ್ತು ಐಸಿಸಿ ಒಟ್ಟಾಗಿ ಕೆಲಸ ಮಾಡುವ ಅರ್ಥಪೂರ್ಣ ಪ್ರಯಾಣದ ಆರಂಭವನ್ನು ಈ ಪಾಲುದಾರಿಕೆ ಗುರುತಿಸುತ್ತದೆ. ಹುಂಡೈ ಜೊತೆಗಿನ ಈ ಪಾಲುದಾರಿಕೆಗೆ ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ, ಅಭಿಮಾನಿಗಳಿಗೆ ಮರೆಯಲಾಗದ ಕ್ಷಣಗಳನ್ನು ಸೃಷ್ಟಿಸಲು ಎದುರು ನೋಡುತ್ತಿದ್ದೇವೆ" ಎಂದು ಕ್ರಿಕೆಟ್ ಮಂಡಳಿಯ ಮುಖ್ಯ ವಾಣಿಜ್ಯ ಅಧಿಕಾರಿ ಅನುರಾಗ್ ದಹಿಯಾ ಹೇಳಿದರು.


Click it and Unblock the Notifications








