2026 ಕಿಯಾ ಸೆಲ್ಟೋಸ್ ಎಸ್‌ಯುವಿ ಬೆಲೆ ನಾಳೆ ಘೋಷಣೆ: ಕಾರಿನ ಪ್ರಮುಖಾಂಶಗಳಿವು!

ಕಿಯಾ 2026 ರ ಸೆಲ್ಟೋಸ್ SUV ಯ ಬೆಲೆಗಳನ್ನು ನಾಳೆ, ಜನವರಿ 2, 2026 ರಂದು ಹೈದರಾಬಾದ್‌ನಲ್ಲಿ ಘೋಷಿಸಲಿದೆ. ಡಿಸೆಂಬರ್ 11, 2025 ರಂದು ರೂ.25,000 ಗೆ ಬುಕಿಂಗ್ ಪ್ರಾರಂಭವಾಯಿತು, ವಿತರಣೆಗಳು ಜನವರಿ ಮಧ್ಯದಿಂದ ಪ್ರಾರಂಭವಾಗುತ್ತವೆ. ಮುಂಬರುವ ಸೆಲ್ಟೋಸ್ ಹೊಸ ವಿನ್ಯಾಸ, ಒಳಾಂಗಣ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಪಡೆದಿದೆ. ಮಧ್ಯಮ ಗಾತ್ರದ SUV ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿದೆ, ಈ ಹೊಸ ಸೆಲ್ಟೋಸ್ ಬಗ್ಗೆ ನೀವು ತಿಳಿಯಬೇಕಾದ ಮುಖ್ಯಾಂಶಗಳು ಇಲ್ಲಿವೆ.

2026 ಹೊಸ ಸೆಲ್ಟೋಸ್‌ನ ಬೆಲೆಯು 11.5 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಆರಂಭವಾಗಬಹುದೆಂದು ನಿರೀಕ್ಷಸಲಾಗಿದೆ. ಟಾಪ್ - ವೇರಿಯೆಂಟ್ ಬೆಲೆಯು 21 ಲಕ್ಷ ರೂ. (ಎಕ್ಸ್-ಶೋರೂಂ) ಗಳಿಗಿಂತ ಹೆಚ್ಚಿರಬಹುದು. ಆಧುನಿಕ ಫೀಚರ್ಸ್ ಮತ್ತು ಸುಧಾರಿತ ಸುರಕ್ಷತೆಯೊಂದಿಗೆ ನವೀಕೃತ ಕ್ಯಾಬಿನ್ ಅನ್ನು ನೀಡಲಾಗಿದೆ. ಕಾರಿನಲ್ಲಿ ಹೆಚ್ಚಿನ ಸ್ಥಳ, ಸೌಕರ್ಯ ವರ್ಧಿತ ಆಯಾಮಗಳೊಂದಿಗೆ ಹೊಸ ಸೆಲ್ಟೋಸ್ ಈಗ 4,460 ಮಿ.ಮೀ ಉದ್ದ ಮತ್ತು 1,830 ಮಿ.ಮೀ ಅಗಲವನ್ನು ಹೊಂದಿದೆ.

2026-kia-seltos-suv-price-announced-tomorrow

ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್‌ನೊಂದಿಗೆ ಸ್ಟಾರ್ ಮ್ಯಾಪ್ LED DRL ಗಳು, LED ಫಾಗ್ ಲ್ಯಾಂಪ್‌ಗಳು ಮತ್ತು ಸ್ಟಾರ್ ಮ್ಯಾಪ್ LED ಕನೆಕ್ಟೆಡ್ ಟೈಲ್ ಲ್ಯಾಂಪ್‌ಗಳು ಕಾರನ್ನು ಹೆಚ್ಚು ಸ್ಪೋರ್ಟಿ ಹಾಗೂ ಪ್ರೀಮಿಯಂ ಆಗಿ ಕಾಣುವಂತೆ ಮಾಡಿವೆ. ಇದರ ಹೊಸ ಡಿಜಿಟಲ್ ಟೈಗರ್ ಫೇಸ್, ಡೈನಾಮಿಕ್ ವೆಲ್ಕಮ್ ಫಂಕ್ಷನ್‌ನೊಂದಿಗೆ ಐಸ್ ಕ್ಯೂಬ್ LED ಪ್ರೊಜೆಕ್ಷನ್ ಹೆಡ್‌ಲ್ಯಾಂಪ್‌ಗಳು ಕಾರಿನ ಲುಕ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ.

2026 ಹೊಸ ಸೆಲ್ಟೋಸ್ ಇಂಟೀರಿಯರ್ ವಿಷಯಕ್ಕೆ ಬಂದರೆ ಪ್ರೀಮಿಯಂ ಇಂಟೀರಿಯರ್ ಹೊಂದಿದ್ದು, ಸ್ಮೋಕಿ ಬ್ಲ್ಯಾಕ್ & ವೈಟ್ ಡ್ಯುಯಲ್ - ಟೋನ್ ಇಂಟೀರಿಯರ್ ಮತ್ತು ಲೆದರೆಟ್ ಸೀಟ್‌ಗಳೊಂದಿಗೆ ವಿಶಾಲವಾದ ಕ್ಯಾಬಿನ್, ಡಬಲ್ ಡಿ - ಕಟ್ ಡ್ಯುಯಲ್ ಟೋನ್ ಲೆದರೆಟ್ - ಸ್ಟೀರಿಂಗ್ ವೀಲ್‌ನೊಂದಿಗೆ ಕ್ಯಾಬಿನ್ ಇನ್ನಷ್ಟು ಪ್ರೀಮಿಯಂ ಆಗಿ ಕಾಣುತ್ತದೆ.

2026-kia-seltos-suv-price-announced-tomorrow

ಹೊಸ ಸೆಲ್ಟೋಸ್ ಇನ್ಫೋಟೈನ್‌ಮೆಂಟ್‌ಗಾಗಿ ಹೊಸ ಫ್ಲೋಟಿಂಗ್ ಟಚ್‌ಸ್ಕ್ರೀನ್ ಸೆಟಪ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ಡಿಜಿಟಲ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ ಎರಡು 12.3-ಇಂಚಿನ ಪ್ಯಾನೆಲ್‌ಗಳನ್ನು ಮತ್ತು ಮಧ್ಯದಲ್ಲಿ 5-ಇಂಚಿನ HVAC ಟಚ್ ಪ್ಯಾನೆಲ್ ಅನ್ನು ಸಂಯೋಜಿಸುತ್ತದೆ. ಡಿಸ್ಪ್ಲೇ ನಯವಾದ ಬಳಕೆದಾರ ಅನುಭವಕ್ಕಾಗಿ ಇತ್ತೀಚಿನ ಗ್ರಾಫಿಕಲ್ ಇಂಟರ್ಫೇಸ್‌ನೊಂದಿಗೆ ಬರುತ್ತದೆ.

ಹೊಸ ಕಿಯಾ ಸೆಲ್ಟೋಸ್ ಕಾರು ಹಿಂದಿನ ಮಾದರಿಯಂತೆಯೇ ಮೂರು ಎಂಜಿನ್ ಆಯ್ಕೆಗಳೊಂದಿಗೆ ಮುಂದುವರಿಯಲಿದೆ. ಈ ಶ್ರೇಣಿಯು 1.5-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಪ್ರಾರಂಭವಾಗುತ್ತದೆ, ಇದು 113bhp ಪವರ್ ಮತ್ತು 144Nm ಟಾರ್ಕ್ ಹೊರಹಾಕುತ್ತದೆ. ಇದರ ಮೇಲೆ 158bhp ಪವರ್ ಮತ್ತು 253Nm ಟಾರ್ಕ್ ಉತ್ಪಾದಿಸುವ 1.5-ಲೀಟರ್ ಟರ್ಬೊ-ಪೆಟ್ರೋಲ್ GDi ಎಂಜಿನ್ ಇದೆ.

2026-kia-seltos-suv-price-announced-tomorrow

6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ, NA ಪೆಟ್ರೋಲ್ ಅನ್ನು CVT ಯೊಂದಿಗೆ ಜೋಡಿಸಿದರೆ, ಟರ್ಬೊ-ಪೆಟ್ರೋಲ್ 6-ಸ್ಪೀಡ್ iMT ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯುತ್ತದೆ. ಹಾಗೆಯೇ 118bhp ಪವರ್ ಮತ್ತು 260Nm ಟಾರ್ಕ್ ಹೊರಹಾಕುವ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.

ಹೊಸ ಕಿಯಾ ಸೆಲ್ಟೋಸ್, 6 - ಏರ್‌ಬ್ಯಾಗ್‌ಗಳು, ಆಂಟಿ - ಲಾಕ್ ಬ್ರೇಕ್ ಸಿಸ್ಟಮ್ (ABS), ಹಿಲ್ - ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರೋಲ್‌ಓವರ್ ಸೆನ್ಸರ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಸೇರಿದಂತೆ 21 ಸ್ವಾಯತ್ತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ADAS ಲೆವೆಲ್ - 2 ಸೂಟ್ ನೀಡಲಾಗಿದೆ. ಇದು ಬ್ಲೈಂಡ್ ವ್ಯೂ ಮಾನಿಟರ್, 360° ಸರೌಂಡ್ ಕ್ಯಾಮೆರಾ ಮತ್ತು ಸೈಡ್ ಪಾರ್ಕಿಂಗ್ ಸೆನ್ಸರ್‌ಗಳಿಂದ ಪೂರಕವಾಗಿದೆ.

More from DriveSpark

Article Published On: Thursday, January 1, 2026, 13:00 [IST]
English summary
2026 kia seltos suv price announced tomorrow
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+