Tata Punch: ನಾಳೆ ಹೊಸ ಟಾಟಾ ಎಸ್‌ಯುವಿ ಬಿಡುಗಡೆ: ಕಮ್ಮಿ ಬೆಲೆ... ಗುಣಮಟ್ಟದಲ್ಲಿ ಕಿಂಗ್!
ಟಾಟಾ ಮೋಟಾರ್ಸ್ ನೀಡುವ ಜನಪ್ರಿಯ ಎಸ್‌ಯುವಿಗಳಲ್ಲಿ 'ಟಾಟಾ ಪಂಚ್' ಕಾಂಪ್ಯಾಕ್ಟ್ ಎಸ್‌ಯುವಿ ಕೂಡ ಒಂದಾಗಿದ್ದು, ದೇಶದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದೆ. ಈ ಎಸ್‌ಯುವಿಯನ್ನು ಈಗ ಫೇಸ್‌ಲಿಫ್ಟ್‌ನೊಂದಿಗೆ ನಾಳೆ ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ಸಜ್ಜಾಗಿದೆ. ಈಗಾಗಲೇ ಹೊಸ 2026 ಟಾಟಾ ಪಂಚ್ ಫೆಸ್‌ಲಿಫ್ಟ್ ಎಸ್‌ಯುವಿ ಕುರಿತ ಹಲವು ಟೀಸರ್ ವಿಡಿಯೋಗಳು ಹೊರಬಂದಿದ್ದು, ಇವುಗಳ ಆಧಾರದ ಮೇಲೆ ಕಂಡುಕೊಳ್ಳಲಾದ ದೊಡ್ಡ ಅಪ್‌ಡೇಟ್‌ಗಳು ಹಾಗೂ ಐದು ಬಹುತೇಕ ಖಚಿತವಾಗಿರುವ ಬದಲಾವಣೆಗಳನ್ನು ಇಲ್ಲಿ ನೋಡೋಣ.
2026 ಫೆಸ್‌ಲಿಫ್ಟ್‌ನಲ್ಲಿ ಹೊಸ ಫೀಚರ್ಸ್
ಹೊಸ ಟಾಟಾ ಪಂಚ್ 2026 ಫೆಸ್‌ಲಿಫ್ಟ್ ಕ್ಯಾಬಿನ್ ಒಳಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ಹಿಂಭಾಗದ ಸೀಟ್‌ಗಳಿಗೆ ಎಸಿ ವೆಂಟ್‌ಗಳು, ಸ್ಟೀರಿಂಗ್ - ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಎತ್ತರ - ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ನಂತಹ ಅಪ್‌ಡೇಟ್‌ಗಳನ್ನು ಪಡೆಯಲಿದೆ.

ಜೊತೆಗೆ ಟಾಪ್ ವೇರಿಯೆಂಟ್‌ಗಳು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 360 - ಡಿಗ್ರಿ ಕ್ಯಾಮೆರಾ, ಪುಶ್ ಬಟನ್ ಸ್ಟಾರ್ಟ್ ಸ್ಟಾಪ್, ರೈನ್ - ಸೆನ್ಸಿಂಗ್ ವೈಪರ್‌ಗಳು, ಆಟೋ ಹೆಡ್‌ಲ್ಯಾಂಪ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕನೆಕ್ಟೆಡ್ ಕಾರ್ ಟೆಕ್, ವಾಯಿಸ್-ಅಸಿಸ್ಟ್ ಎಲೆಕ್ಟ್ರಿಕ್ ಸನ್‌ರೂಫ್ ಇರಲಿವೆ. ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರಷರ್ ಮಾನಿಟರಿಂಗ್ ಸಿಗಲಿವೆ.
ಟರ್ಬೊ ಪೆಟ್ರೋಲ್ ದೃಢಪಡಿಸಲಾಗಿದೆ: ಈ ಬಾರಿ, ಪಂಚ್ ಹೆಚ್ಚುವರಿಯಾಗಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿರುತ್ತದೆ. ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಟೀಸರ್ ಈ ಮಾಹಿತಿಯನ್ನು ಬಹಿರಂಗಪಡಿಸಿರುವುದಾಗಿ ವರದಿಯಾಗಿದೆ. ಪ್ರಸ್ತುತ, ಎಂಜಿನ್‌ನ ಟ್ಯೂನಿಂಗ್ ಮತ್ತು ಲಭ್ಯವಿರುವ ಗೇರ್‌ಬಾಕ್ಸ್ ಆಯ್ಕೆಗಳ ಕುರಿತು ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಹೊಸ ಬಣ್ಣಗಳು ಮತ್ತು ಡಿಸೈನ್
ಪಂಚ್ ಫೇಸ್‌ಲಿಫ್ಟ್‌ನೊಂದಿಗೆ, ಈಗ ಆರು ಬಣ್ಣಗಳಲ್ಲಿ ನೀಡಲಾಗುವುದು - ಸೈಂಟಾಫಿಕ್, ಕ್ಯಾರಮೆಲ್, ಬೆಂಗಾಲ್ ರೂಜ್, ಡೇಟೋನಾ ಗ್ರೇ, ಕೂರ್ಗ್ ಕ್ಲೌಡ್ಸ್ ಮತ್ತು ಪ್ರಿಸ್ಟೈನ್ ವೈಟ್ ಬಣ್ಣಗಳಲ್ಲಿ ಸಿಗಲಿದೆ. ಹೊರಭಾಗದಲ್ಲಿ, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್, 16-ಇಂಚಿನ ಅಲಾಯ್ ವೀಲ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್, ರಿಫ್ರೆಶ್ ಮಾಡಿದ ಒಟ್ಟಾರೆ ವಿನ್ಯಾಸವನ್ನು ಪರಿಚಯಿಸಲಾಗುತ್ತದೆ. ಇದು ಟಾಟಾ ಪಂಚ್ ಅನ್ನು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ.
ನವೀಕರಿಸಿದ ಇಂಟೀರಿಯರ್: ಒಳಾಂಗಣವು ಕೆಲವು ನವೀಕರಣಗಳಿಗೆ ಒಳಗಾಗಲಿದೆ, ನೆಕ್ಸಾನ್‌ನಲ್ಲಿ ನಾವು ನೋಡಿದಂತೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‌ಗಾಗಿ ಟಚ್ ಪ್ಯಾನಲ್, ಸೀಟುಗಳು ನೀಲಿ ಮತ್ತು ಬೂದು ಬಣ್ಣದಿಂದ ಸಜ್ಜುಗೊಳ್ಳಲಿದೆ. ಹೊಸ 7-ಇಂಚಿನ ಡ್ರೈವರ್ ಡಿಸ್ಪ್ಲೇ ಕೂಡ ಇರುತ್ತದೆ. ಶೈನಿಂಗ್ ಟಾಟಾ ಲೋಗೋ ಹೊಂದಿರುವ ಹೊಸ ಟೂ-ಸ್ಪೋಕ್ ಸ್ಟೀರಿಂಗ್ ವೀಲ್ ಇರಲಿದೆ.

ನಿರೀಕ್ಷಿತ ಬೆಲೆ: ಹೊಸ 'ಟಾಟಾ ಪಂಚ್ ಫೇಸ್‌ಲಿಫ್ಟ್' ರೂ. 6 ಲಕ್ಷದಿಂದ ರೂ. 11 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಾಲಾಗಿದೆ. ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರಿವರ್ಸ್ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಬ್ಲೈಂಡ್ ವ್ಯೂ ಮಾನಿಟರ್ ಹೊಂದಿದೆ.
ಒಟ್ಟಾರೆ ಟಾಟಾ ಮೋಟಾರ್ಸ್ ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಪಂಚ್‌ನ ಹೊಸ ಫೇಸ್‌ಲಿಫ್ಟೆಡ್ ಆವೃತ್ತಿಯ ಬಿಡುಗಡೆಯೊಂದಿಗೆ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ಇಗ್ನಿಸ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್, ಹ್ಯುಂಡೈ ಎಕ್ಸ್‌ಟರ್ ಮತ್ತು ಸಿಟ್ರನ್ ಸಿ3 ಕಾರುಗಳು ಹೊಸ ನೆಕ್ಸಾನ್ ಪೈಪೋಟಿಯನ್ನು ಎದುರಿಸಲಿವೆ.


Click it and Unblock the Notifications








