Tata Punch Facelift: ಬೇರೆ ಕಂಪನಿಗಳು ಕನಸಲ್ಲೂ ಊಹಿಸಿರಲಿಲ್ಲ: ಬರೀ 5.59 ಲಕ್ಷಕ್ಕೆ ಪಂಚ್ ಫೇಸ್‌ಲಿಫ್ಟ್... ಫುಲ್ ಅಪ್‌ಡೇಟ್
ಭಾರತದಲ್ಲಿ ಸಣ್ಣ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಬ್ರಾಂಡ್‌ಗಳು ಒಂದೊಂದು ಮೈಕ್ರೋ ಎಸ್‌ಯುವಿಗಳನ್ನು ಮರಾಟ ಮಾಡುತ್ತಿವೆ. ಈ ವಿಭಾಗದಲ್ಲಿ ಮೊದಲಿನಿಂದಲ್ಲೂ ಟಾಟಾ ಪಂಚ್ ಉತ್ತಮ ಮಾರಾಟ ಕಾಣುವ ಎಸ್‌ಯುವಿಯಾಗಿ ಹೆಸರು ಮಾಡಿದೆ. ಆದರೆ ಪ್ರತಿಸ್ಪರ್ಧಿಗಳಿಂದ ಪೈಪೋಟಿ ಹೆಚ್ಚಾಗಿರುವ ಕಾರಣ ಟಾಟಾ ಮೋಟಾರ್ಸ್ ಈ ಬಾರಿ ಪಂಚ್‌ಗೆ ಹೊಸ ಫೇಸ್‌ಲಿಫ್ಟ್ (Tata Punch Facelift) ಪರಿಚಯಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 2026ರ ಟಾಟಾ ಪಂಚ್ ಫೇಸ್‌ಲಿಫ್ಟ್ ಹಳೆಯ ಮಾಡೆಲ್‌ಗಿಂತ ಗಮನಾರ್ಹವಾದ ಸ್ಟೈಲಿಂಗ್, ಫೀಚರ್ಸ್ ಮತ್ತು ಪವರ್‌ಟ್ರೇನ್ ನವೀಕರಣಗಳನ್ನು ಪಡೆದುಕೊಂಡಿದೆ. ಬನ್ನಿ ಎರಡನ್ನು ಹೋಲಿಕೆ ಮಾಡೋಣ.
ಹೊಸ 2026ರ ಟಾಟಾ ಪಂಚ್ ಬೆಲೆಗಳು ರೂ.5.59 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್-ಶೋರೂಂ). ಈ ಮೈಕ್ರೋ-ಎಸ್‌ಯುವಿಯು ತನ್ನ ಹಳೆಯ ಬಾಕ್ಸಿ ಡಿಸೈನ್ ಹಾಗೆಯೇ ಉಳಿಸಿಕೊಂಡಿದೆ. ಪ್ರಮುಖ ಬದಲಾವಣೆಗಳಲ್ಲಿ ಹೊಸ ಬಾಹ್ಯ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್, ಹೆಚ್ಚಿನ ತಂತ್ರಜ್ಞಾನ ಫೀಚರ್‌ಗಳು ಮತ್ತು ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಸದಾಗಿ ಪರಿಚಯಿಸಲಾಗಿದೆ.

ವಿನ್ಯಾಸ ಮತ್ತು ಬಾಹ್ಯ ಹೋಲಿಕೆ
ಹಿಂದಿನ ಪಂಚ್‌ಗೆ ಹೋಲಿಸಿದರೆ, 2026 ರ ಫೇಸ್‌ಲಿಫ್ಟ್ ಹೊಸ LED ಹೆಡ್‌ಲ್ಯಾಂಪ್‌ಗಳು, ಕಿರಿದಾದ LED ಡೇಟೈಮ್ ರನ್ನಿಂಗ್ ಲೈಟ್‌ಗಳು, ಪರಿಷ್ಕೃತ 3D ಮುಂಭಾಗದ ಗ್ರಿಲ್, ಹೊಸ 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಹಿಂಭಾಗದಲ್ಲಿ ಕನೆಕ್ಟೆಡ್ LED ಟೈಲ್‌ಲೈಟ್‌ಗಳು ಮತ್ತು ಹೊಸ ಬಂಪರ್ ಅನ್ನು ಪರಿಚಯಿಸಲಾಗಿದೆ. ಇವು ಹಳೆಯ ಮಾಡಲ್‌ಗಿಂತ ಪ್ರತ್ಯೇಕ ಟೈಲ್‌ಲ್ಯಾಂಪ್ ವಿನ್ಯಾಸ ಮತ್ತು ಸರಳವಾದ ಬಂಪರ್ ವಿನ್ಯಾಸವನ್ನು ಹೊಂದಿದೆ.
ಇಂಟೀರಿಯರ್ ಮತ್ತು ತಂತ್ರಜ್ಞಾನ ವರ್ಧನೆಗಳು
ಹಳೆಯ ಮಾಡಲ್‌ನ ಸಿಂಗಲ್-ಟೋನ್ ಇಂಟೀರಿಯರ್‌ನಂತಲ್ಲದೆ ಹೊಸ ಮಾಡಲ್ ಪ್ರೀಮಿಯಂ ಡ್ಯುಯಲ್-ಟೋನ್ ಇಂಟೀರಿಯರ್ ಪಡೆದುಕೊಂಡಿದೆ. ನವೀಕರಿಸಿದ ಕ್ಯಾಬಿನ್ ಮರುವಿನ್ಯಾಸಗೊಳಿಸಲಾದ ಏರ್ ವೆಂಟ್‌ಗಳು ಮತ್ತು ಆರ್ಮ್‌ರೆಸ್ಟ್‌ನೊಂದಿಗೆ ಸೆಂಟ್ರಾಲಕ್ಸ್ ಸೆಂಟರ್ ಕನ್ಸೋಲ್ ಅನ್ನು ಒಳಗೊಂಡಿದೆ, ಡಿಜಿಟಲ್ ಸ್ಟೀರಿಂಗ್ ವೀಲ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇವು ಹಳೆಯ ಪಂಚ್‌ನಲ್ಲಿ ಇರಲಿಲ್ಲ. ಜೊತೆಗೆ ಹಿಂಭಾಗದಲ್ಲಿ ಆರ್ಮ್‌ರೆಸ್ಟ್ ನೀಡಿ ಆಸನ ಸೌಕರ್ಯವನ್ನು ಹೆಚ್ಚಿಸಲಾಗಿದೆ.

ವೈರ್‌ಲೆಸ್ ಸಂಪರ್ಕದೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ರಿಮೋಟ್ ಕಮಾಂಡ್‌ಗಳು, ವಾಹನ ಆರೋಗ್ಯ ಮೇಲ್ವಿಚಾರಣೆ, ಟ್ರಿಪ್ ಡೇಟಾ ಮತ್ತು ನ್ಯಾವಿಗೇಷನ್ ಬೆಂಬಲದಂತಹ 45 ಕ್ಕೂ ಹೆಚ್ಚು ಸಂಪರ್ಕಿತ ಕಾರು ವೈಶಿಷ್ಟ್ಯಗಳನ್ನು ಒಳಗೊಂಡಂತೆ ತಂತ್ರಜ್ಞಾನ ಕೊಡುಗೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ.
ಸುರಕ್ಷತೆ
ಫೇಸ್‌ಲಿಫ್ಟ್ ಪಂಚ್ ವಯಸ್ಕ ಮತ್ತು ಮಕ್ಕಳ ರಕ್ಷಣೆಯಲ್ಲಿ 5-ಸ್ಟಾರ್ ಭಾರತ್ NCAP ರೇಟಿಂಗ್ ಅನ್ನು ಸಾಧಿಸಿದೆ. ನವೀಕರಿಸಿದ ಪಂಚ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿದೆ.
360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ರೈನ್-ಸೆನ್ಸಾರ್ ವೈಪರ್‌ಗಳು, ಆಟೋ-ಡಿಮ್ಮಿಂಗ್ IRVM, ಕಾರ್ನರಿಂಗ್ ಕಾರ್ಯದೊಂದಿಗೆ LED ಫಾಗ್ ಲ್ಯಾಂಪ್‌ಗಳು, ಟ್ವೀಟರ್‌ಗಳೊಂದಿಗೆ ನಾಲ್ಕು ಸ್ಪೀಕರ್‌ಗಳು, ಆಯ್ದ ವೇರಿಯೆಂಟ್‌ಗಳಲ್ಲಿ ಎಕ್ಸ್‌ಪ್ರೆಸ್ ಕೂಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ನೀಡಲಾಗಿದೆ. ಇವು ಹಳೆಯ ಪಂಚ್‌ನಲ್ಲಿ ಲಭ್ಯವಿಲ್ಲದ ಹಲವಾರು ಸೇಫ್ಟಿ ಫೀಚರ್‌ಗಳಾಗಿವೆ.

ಎಂಜಿನ್ ಮತ್ತು ಪರ್ಫಾಮೆನ್ಸ್ ವ್ಯತ್ಯಾಸಗಳು
ಫೇಸ್‌ಲಿಫ್ಟ್ ನಲ್ಲಿ ಹೊಸದಾಗಿ CNG AMT ಆಯ್ಕೆಯನ್ನು ಸಹ ಪರಿಚಯಿಸಲಾಗಿದೆ, ಇದು 87.8 bhp ಪವರ್ ಮತ್ತು 115 Nm ಟಾರ್ಕ್ ನೀಡುತ್ತದೆ. ಜೊತೆಗೆ ಹೊಸ ಟರ್ಬೋಚಾರ್ಜ್ಡ್ ಎಂಜಿನ್ ಅತ್ಯಂತ ಗಮನಾರ್ಹವಾದ ಸೇರ್ಪಡೆಯಾಗಿದ್ದು, 120 bhp ಪವರ್ ಮತ್ತು 170 Nm ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದು 11.1 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲದು ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.
ಉಳಿದಂತೆ ಹಳೆಯ ಪಂಚ್ ಅನ್ನು 1.2-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತಿತ್ತು. ಇದು ಫೇಸ್‌ಲಿಫ್ಟ್‌ನಲ್ಲೂ ಮುಂದುವರಿಯುತ್ತಿದ್ದು, ಅದೇ 5-ಸ್ಪೀಡ್ ಮ್ಯಾನುವಲ್ ಅಥವಾ AMT ಯೊಂದಿಗೆ ಲಭ್ಯವಿರುವ 73.4 bhp ಪವರ್ ಮತ್ತು 103 Nm ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ವೇರಿಯೆಂಟ್‌ಗಳಲ್ಲಿ 366 ಲೀಟರ್ ಮತ್ತು CNG ವೇರಿಯೆಂಟ್‌ಗಳಲ್ಲಿ 210 ಲೀಟರ್ ಬೂಟ್ ಜಾಗವನ್ನು ಒದಗಿಸಲಾಗಿದೆ.


Click it and Unblock the Notifications








