TATA: 7-ಸೀಟರ್‌ನ ಕಲ್ಲು ಬಂಡೆಯಂತಹ ಟಾಟಾ ಕಾರಿದು.. ಭಾರೀ ಸಂಖ್ಯೆಯಲ್ಲಿ ಸೇಲ್ಸ್.. 13.29 ಲಕ್ಷ ರೂಪಾಯಿ!

ಟಾಟಾ ಸಫಾರಿ (Tata Safari) ನಂಬಿಕಾರ್ಹ ಎಸ್‌ಯುವಿಯಾಗಿ ಎಂದೇ ಮನೆ ಮಾತಾಗಿದೆ. ಸುರಕ್ಷತೆಗೂ ಹೆಸರುವಾಸಿಯಾಗಿದೆ. ಗ್ಲೋಬಲ್ ಎನ್‌ಸಿಎಪಿ & ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿಯೂ ಯಶಸ್ವಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 1,650 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,562 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 5.63% ಬೆಳವಣಿಗೆಯಾಗಿದೆ.

'ಟಾಟಾ ಸಫಾರಿ' ವಿಶೇಷತೆಗಳೇನು:

ಇದು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಿದೆ. ಕನಿಷ್ಠ ರೂ.13.29 ಲಕ್ಷ ಹಾಗೂ ಗರಿಷ್ಠ ರೂ.25.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ಸ್ಮಾರ್ಟ್, ಪ್ಯೂರ್ ಎಕ್ಸ್, ಅಡ್ವೆಂಚರ್ ಎಕ್ಸ್ ಪ್ಲಸ್, ಅಕಾಂಪ್ಲಿಶ್ಡ್ ಎಕ್ಸ್ ಮತ್ತು ಅಕಾಂಪ್ಲಿಶ್ಡ್ ಎಕ್ಸ್ ಪ್ಲಸ್ ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ.

7 Seater Suv Tata Safari 2026 February Sales Report

ಈ ಎಸ್‌ಯುವಿ ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ನೋಡುಗರ ಕಣ್ಣು ಕುಕ್ಕುವಂತಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗ‌ಳು ಮತ್ತು ಎಲ್ಇಡಿ ಟೈಲ್‌ ಲ್ಯಾಂಪ್‌ಗಳನ್ನು ಒಳಗೊಂಡಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತವನ್ನು ಒದಗಿಸಲು 19-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟೈರ್‌ಗಳನ್ನು ಪಡೆದಿದೆ.

ಹೊಚ್ಚ ಹೊಸ 'ಸಫಾರಿ' ಹೆಚ್ಚು ವಿಶಾಲ ಗಾತ್ರದಲ್ಲಿದೆ. 4,668 ಎಂಎಂ ಉದ್ದ, 1,922 ಎಂಎಂ ಅಗಲ ಮತ್ತು 1,795 ಎಂಎಂ ಎತ್ತರವಿದೆ. ಜೊತೆಗೆ 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,741 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸ್ಟೆಲ್ತ್ ಬ್ಲ್ಯಾಕ್, ಸೂಪರ್ನೋವಾ ಕಾಪರ್, ಫ್ರಾಸ್ಟ್ ವೈಟ್, ರಾಯಲ್ ಬ್ಲೂ, ಪ್ಯೂರ್ ಗ್ರೇ & ಕಾರ್ಬನ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

7 Seater Suv Tata Safari 2026 February Sales Report

ಇದು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಈ ಕಾರಿನ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌, 170 ಬಿ‌ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 280 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. ಮತ್ತೊಂದು 2.0-ಲೀಟರ್ ಡೀಸೆಲ್ ಎಂಜಿನ್‌, 170 ಬಿ‌ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 350 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ನೂತನ 'ಸಫಾರಿ' ರೂಪಾಂತರಗಳಿಗೆ ತಕ್ಕಂತೆ 6-ಸ್ಪೀಡ್ ಮ್ಯಾನುವಲ್ & 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಪೆಟ್ರೋಲ್ ಮಾಡೆಲ್‌ಗಳು 14 ರಿಂದ 16.3 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಡೀಸೆಲ್ ಮಾಡೆಲ್‌ಗಳು 14.1 ರಿಂದ 16.3 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

7 Seater Suv Tata Safari 2026 February Sales Report

ಈ ಕಾರಿನ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. 6/ 7 ಆಸನಗಳನ್ನು ಒಳಗೊಂಡಿದೆ. ವೀಕೆಂಡ್‌ಗಳಲ್ಲಿ ಲಾಂಗ್ ಡ್ರೈವ್ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 420 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4-ಸ್ಪೋಕ್ ಸ್ಟೀರಿಂಗ್ ವೀಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, 10-ಜೆಬಿಎಲ್ ಸೌಂಡ್ ಸಿಸ್ಟಮ್ ಮತ್ತು ಆಟೋಮೆಟಿಕ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಇದು ಪ್ರಯಾಣಿಕರಿಗೂ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ 7-ಏರ್‌ಬ್ಯಾಗ್‌, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) & 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

More from DriveSpark

Article Published On: Tuesday, March 10, 2026, 8:30 [IST]
English summary
7 seater suv tata safari 2026 february sales report
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+